ETV Bharat / state

ಕಾಂಗ್ರೆಸ್ ಏನೇ ಮಾಡಿದರೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಖಚಿತ: ಬಿವೈ ವಿಜಯೇಂದ್ರ

author img

By

Published : Sep 30, 2022, 11:45 AM IST

Kn_klb_01_by_vijaye
ಬಿವೈ ವಿಜಯೇಂದ್ರ

ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಬಿಜೆಪಿ ವಿರುದ್ದ ಕಾಂಗ್ರೆಸ್​​ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಕಲಬುರಗಿ: ಪೇ ಸಿಎಂ ನಿಂದ ಕಾಂಗ್ರೆಸ್‌ಗೆ ದೊಡ್ಡ ಪ್ರಚಾರ ಸಿಕ್ಕಿದೆ ಅಂತಾ ತಿಳಿದುಕೊಂಡಿದ್ದಾರೆ. ಆದರೆ ಪೇ ಸಿಎಂ ಕಾಂಗ್ರೆಸ್ ಪಕ್ಷಕ್ಕೆ ತಿರುಗು ಬಾಣವಾಗಲಿದೆ ಎಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಬರುವ ಚುನಾವಣೆಯಲ್ಲಿ ಕಾಂಗ್ರೆಸ್​ನ ಪೇ ಸಿಎಂ ಅಪಪ್ರಚಾರಕ್ಕೆ ಜನ ಉತ್ತರಸಲಿದ್ದಾರೆ. ಕೇರಳ ರಾಜ್ಯದ ದೇಶದ್ರೋಹಿ ಫಾದರ್ ಜಾರ್ಜ್ ಜೊತೆ ಕೈ ನಾಯಕರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಅವರೊಟ್ಟಿಗೆ ಕುಳಿತು ಸಭೆ ಮಾಡ್ತಿದಾರೆ. ಕಾಂಗ್ರೆಸ್ ಪಕ್ಷ ಇರೋ ಅಸ್ತಿತ್ವ ಕಳೆದುಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ನೋಡಿ ಕಾಂಗ್ರೆಸ್ ಪಕ್ಷ ವಿಚಲಿತರಾಗಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು ಚಾಮರಾಜನಗರದಲ್ಲಿ ಭಾರತ್ ಜೋಡೋ ಯಾತ್ರೆ ಫ್ಲೇಕ್ಸ್ ಹರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಚಿಪ್​ ಕೆಲಸ ಬಿಜೆಪಿ ಎಂದು ಮಾಡುವುದಿಲ್ಲ, ಇಂತಹ ಅಗತ್ಯ ನಮಗಿಲ್ಲ, ಅವರದ್ದೇ ಪಕ್ಷದವರು ಪ್ಲೆಕ್ಸ್​ ಹರಿದು ಹಾಕಿ ನಮ್ಮೆಲೆ ಹಾಕುತ್ತಿದ್ದಾರೆ ಎಂದು ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದರು.

ಬಳಿಕ ಪಿಎಫ್ಐ ಬ್ಯಾನ್ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ನವರಾತ್ರಿಯ ಶುಭಸಂದರ್ಭದಲ್ಲಿ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ. ಕಳೆದ ಹಲವಾರು ವರ್ಷಗಳಿಂದ PFI ರಾಷ್ಟ್ರವಿರೋಧಿ ಚಟುವಟಿಕೆ ನಡೆಸಿಕೊಂಡು ಬಂದಿದೆ. ರಾಜ್ಯ, ದೇಶದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಪಿಎಫ್‌ಐ ಮಾಡಿದೆ. ಒಂದು ಧರ್ಮದ ಯುವಕರನ್ನ ಅಡ್ಡದಾರಿಗೆ ತೆಗೆದುಕೊಂಡು ಹೋಗುವ ಕೆಲಸ ಆಗತಿತ್ತು.

ಹತ್ಯೆ ಪ್ರಕರಣ ಸೇರಿದಂತೆ ಅನೇಕ ಕೃತ್ಯಗಳನ್ನ ಪಿಎಫ್‌ಐ ಎಸಗಿದೆ. ಪಿಎಫ್‌ಐ ಕಾಂಗ್ರೆಸ್ ಪಕ್ಷದ ಪಾಪದ ಕೂಸು ಇದನ್ನ ಸದೆಬಡೆಯುವ ಕೆಲಸ ಕೇಂದ್ರ ಸರ್ಕಾರ ಮಾಡಿ ನಿಷೇಧ ಮಾಡಿರುವುದು ಸ್ವಾಗತಾರ್ಹ ಎಂದರು. ಕಾಂಗ್ರೆಸ್ ಪಕ್ಷ ಈಗಾಲಾದರೂ ತಮ್ಮ ತಪ್ಪು ಅರ್ಥ ಮಾಡಿಕೊಂಡು ಸ್ವಾಗತ ಮಾಡಬೇಕು ಎಂದರು.

ಕೆ.ಜೆ ಹಳ್ಳಿ/ಡಿ.ಜೆ ಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಪ್ರಕರಣದಲ್ಲಿ ಪಿಎಫ್‌ಐ ಪಾತ್ರ ಎಷ್ಟರ ಮಟ್ಟಿಗೆ ಇತ್ತು ಅನ್ನೊದು ಗೋತ್ತಾಗಿದೆ. ಕಾಂಗ್ರೆಸ್‌ನ ಕೆಲ ಹಿರಿಯರು ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅಂದಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆ ಮೂರ್ಖತನದ್ದು, ಆರ್‌ಎಸ್‌ಎಸ್ ಅಂದರೆ ದೇಶ ಸಂಘಟನೆ ಮಾಡುವುದು ಆರ್‌ಎಸ್‌ಎಸ್ ನಿಷೇಧ ಮಾಡುವುದು ಯಾರು ಒಪ್ಪಿಕೊಳ್ಳುವುದಿಲ್ಲ.

ಪಿಎಫ್‌ಐ ಬ್ಯಾನ್ ಹಿಡಿದು ಆರ್ಟಿಕಲ್ 370 ಸೇರಿದಂತೆ ಅನೇಕ ತೀರ್ಮಾನ ಕೇಂದ್ರ ಮಾಡಿದೆ. ಅಧಿಕಾರದಿಂದ ದೂರವಾಗಿರೋ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯತ್ನ ನಡೆಸಿದೆ. ದಿನನಿತ್ಯ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ಜನರನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗ್ತಿದಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ತರೂರ್​, ದಿಗ್ವಿಜಯ್​ ಜೊತೆ ಇಂದು ನಾಮಪತ್ರ ಸಲ್ಲಿಸಲಿರುವ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.