ETV Bharat / state

ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆ: ಕಲಬುರಗಿಯಿಂದ ನೇರವಾಗಿ ಜೈಪುರಕ್ಕೆ ಬಂದ ಖರ್ಗೆ

author img

By

Published : Sep 25, 2022, 8:16 PM IST

ರಾಜಸ್ಥಾನದಲ್ಲಿ ನಾಯಕತ್ವದ ಬದಲಾವಣೆ ವಿಷಯವಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಕೇನ್ ಅವರಿಗೆ ಹೊಣೆ ವಹಿಸಲಾಗಿದೆ. ಈಗಾಗಲೇ ಅಜಯ್ ಮಕೇನ್ ಅವರೊಂದಿಗೆ ಖರ್ಗೆ ಜೈಪುರಕ್ಕೆ ಆಗಮಿಸಿದ್ದಾರೆ.

rajasthan-leadership-change-mallikarjun-kharge-and-ajay-maken-reached-jaipur
ರಾಜಸ್ಥಾನದಲ್ಲಿ ನಾಯಕತ್ವದ ಬದಲಾವಣೆ: ಕಲಬುರಗಿಯಿಂದ ನೇರವಾಗಿ ಜೈಪುರಕ್ಕೆ ಬಂದ ಖರ್ಗೆ

ಕಲಬುರಗಿ/ಜೈಪುರ: ರಾಜಸ್ಥಾನಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆಯ ಮಹತ್ತರ ಜವಾಬ್ದಾರಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೆಗಲೇರಿದೆ. ಈ ಬಗ್ಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ‌ ಅವರಿಂದ ಸಂದೇಶ ಬರುತ್ತಿದ್ದಂತೆ ಕಲಬುರಗಿ ಜಿಲ್ಲೆ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಖರ್ಗೆ ರಾಜ್ಯಸ್ಥಾನದತ್ತ ಪ್ರಯಾಣ ಬೆಳೆಸಿದ್ದಾರೆ.

ಕಳೆದ ಎರಡು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಜಿಲ್ಲೆ ಪ್ರವಾಸದಲ್ಲಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.‌ ಶನಿವಾರ ರಾತ್ರಿ ಸೋನಿಯಾ ಗಾಂಧಿ ಅವರ ಸಂದೇಶ ಬರುತ್ತಿದ್ದಂತೆ ಭಾನುವಾರ ನಸುಕಿನ ಜಾವ ಹೈದರಾಬಾದ್​ನಿಂದ ವಿಮಾನಯಾನದ ಮೂಲಕ ರಾಜ್ಯಸ್ಥಾನದ ಜೈಪುರಕ್ಕೆ‌ ತೆರಳಿದರು.

  • I am here to meet the MLAs, and I can tell their opinion only after meeting them: Congress MP Mallikarjun Kharge on his arrival at Jaipur for the meeting of the Congress Legislature Party (CLP) of Rajasthan Legislative Assembly pic.twitter.com/BLTUmNhP4Z

    — ANI MP/CG/Rajasthan (@ANI_MP_CG_RJ) September 25, 2022 " class="align-text-top noRightClick twitterSection" data=" ">

ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಕಾಂಗ್ರೆಸ್ ಸಿದ್ಧಾಂತಕ್ಕೆ ಅನುಗುಣವಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮುನ್ನ ಅಶೋಕ್ ಗೆಹ್ಲೋಟ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ಮತ್ತೊಬ್ಬ ಸೂಕ್ತ ಅಭ್ಯರ್ಥಿ ಹುಡುಕುವ ಜವಾಬ್ದಾರಿ ಖರ್ಗೆಯವರಿಗೆ ನೀಡಲಾಗಿದೆ. ರಾಜಸ್ಥಾನದ ಎಐಸಿಸಿ ಉಸ್ತುವಾರಿ ಅಜಯ್ ಮಕೇನ್ ಮತ್ತು ಖರ್ಗೆ ಇಂದು ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ನಿವಾಸದಲ್ಲಿ ಸಭೆ ಸೇರಿ, ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಅಗತ್ಯವಾದ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಜೈಪುರಲ್ಲಿ ಖರ್ಗೆ ಮಾತು: ಇತ್ತ, ಈಗಾಗಲೇ ಜೈಪುರಕ್ಕೆ ಅಜಯ್ ಮಕೇನ್ ಅವರೊಂದಿಗೆ ಬಂದಿಳಿದಿರುವ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಶಾಸಕರನ್ನು ಭೇಟಿ ಮಾಡಿ ಸಭೆ ನಡೆಸಲಾಗುತ್ತದೆ. ಶಾಸಕರ ಭೇಟಿ ನಂತರವೇ ಮುಂದಿನ ವಿಚಾರ ತಿಳಿಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್ ನಾಯಕತ್ವ ಬದಲಾವಣೆ: ಸಿಎಂ ಗೆಹ್ಲೋಟ್​ ನಿವಾಸದಲ್ಲಿ ಇಂದು ಮಹತ್ವದ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.