ETV Bharat / state

ಕ್ಷಮೆ ಯಾಚಿಸಿ ಮಾಜಿ ಶಾಸಕ ಬಿ.ಆರ್ ಪಾಟೀಲ್​ಗೆ ಪತ್ರ ಬರೆದ ಡಿ.ಕೆ ಶಿವಕುಮಾರ್

author img

By

Published : Mar 11, 2022, 11:08 AM IST

ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆಳಂದ ಮಾಜಿ ಶಾಸಕ ಬಿ.ಆರ್ ಪಾಟೀಲ್ ಅವರನ್ನ ಪಕ್ಕಕ್ಕೆ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಡಿಕೆಶಿ ಕ್ಷಮೆ ಕೋರಿದ್ದಾರೆ.

ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಕಲಬುರಗಿ: ಮೇಕೆದಾಟು‌ ಪಾದಯಾತ್ರೆ ಸಂದರ್ಭದಲ್ಲಿ ಆಳಂದ ಮಾಜಿ ಶಾಸಕ ಬಿ.ಆರ್ ಪಾಟೀಲ್ ಅವರನ್ಮು ತಳ್ಳಿ ಅವಮಾನ ಮಾಡಿದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ದಾರೆ. ಡಿ.ಕೆ ಶಿವಕುಮಾರ್ ವರ್ತನೆಗೆ ಆಕ್ರೋಶಗೊಂಡ ಬಿ.ಆರ್ ಪಾಟೀಲ್ ಹಾಗೂ ಅವರ ಅಭಿಮಾನಿಗಳು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ರು.

ನನ್ನ ಜೀವನದಲ್ಲಿ ಯಾವತ್ತು ಇಂತಹ ಘಟನೆ ನಡೆದಿರಲಿಲ್ಲ. ಇಂತಹ ವರ್ತನೆಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆತ್ಮ ಗೌರವ ಇದ್ದವರೂ ಯಾರೂ ಇದನ್ನು ಸಹಿಸುವುದಿಲ್ಲ. ನಾನು ಇದನ್ನು ಖಂಡಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ವಿರುದ್ಧ ಬಿ ಆರ್​ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು.

ಡಿ.ಕೆ ಶಿವಕುಮಾರ್ ಅವರು ಬಿ.ಆರ್ ಪಾಟೀಲ್​ಗೆ ಬರೆದ ಪತ್ರ
ಡಿ.ಕೆ ಶಿವಕುಮಾರ್ ಅವರು ಬಿ.ಆರ್ ಪಾಟೀಲ್​ಗೆ ಬರೆದ ಪತ್ರ

ಇದಕ್ಕೆ ಮಣಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿ.ಆರ್ ಪಾಟೀಲ್ ಅವರಿಗೆ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ. ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ನಾನು ತಮ್ಮನ ತಳ್ಳಿ ಅವಮಾನ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನನಗೆ ತುಂಬಾ ಖೇದ ಉಂಟುಮಾಡಿದೆ. ತಮ್ಮಂತಹ ಹಿರಿಯರ ಜೊತೆ ಈ ರೀತಿ ಅನುಚಿತವಾಗಿ ನಡೆದುಕೊಳ್ಳುವುದನ್ನು ನಾನು ಕನಸು-ಮನಸಿನಲ್ಲಿಯೂ ಎಣಿಸಿಕೊಳ್ಳಲು ಸಾಧ್ಯವಿಲ್ಲ. ಈ ಘಟನೆ ನನಗೆ ಅರಿವಿಲ್ಲದೇ ನಡೆದಿದೆ. ಜನರ ನೂಕುನುಗಲ್ಲಿನಲ್ಲಿ ಅಚಾತುರ್ಯ ನಡೆದಿದ್ದರೆ ನಾನು ವಿಷಾಧಿಸುತ್ತೇನೆ ಎಂದಿದ್ದಾರೆ.

ನಾನು ಪಕ್ಷದ ಆದೇಶದಂತೆ ಗೋವಾ ಚುನಾವಣೆಯಲ್ಲಿರುವೆ. ಇಲ್ಲಿಂದ ವಾಪಸ್​ ಆದ ತಕ್ಷಣ ತಮ್ಮನ್ನ ಭೇಟಿಯಾಗುವೆ‌. ದಯವಿಟ್ಟು ಮನಸಿಗೆ ಬೇಜಾರು ಮಾಡಿಕೊಳ್ಳಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪಾದಯಾತ್ರೆ ವೇಳೆ ತಳ್ಳಿದ ಆರೋಪ: ಡಿಕೆಶಿ ವಿರುದ್ಧ ಮಾಜಿ ಶಾಸಕ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.