ETV Bharat / state

ವಿದ್ಯುತ್ ಬಿಲ್​ ಕಟ್ಟುವಂತೆ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಮಾರಣಾಂತಿಕ‌ ಹಲ್ಲೆ

author img

By

Published : Jun 1, 2023, 6:30 PM IST

deadly-assault-for-asking-to-pay-electricity-bill-kalaburagi
ವಿದ್ಯುತ್ ಬಿಲ್​ ಕಟ್ಟುವಂತೆ ಕೇಳಿದಕ್ಕೆ ಸಿಬ್ಬಂದಿಗಳ ಮೇಲೆ ಮಾರಣಾಂತಿಕ‌ ಹಲ್ಲೆ

ಕಳೆದ ಆರು ತಿಂಗಳ ವಿದ್ಯುತ್​ ಶುಲ್ಕ ಕಟ್ಟುವಂತೆ ಕೇಳಿದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಆಳಂದ ಪಟ್ಟಣದಲ್ಲಿ ನಡೆದಿದೆ.

ಕಲಬುರಗಿ: ಕಾಂಗ್ರೆಸ್​​ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರತಿ ಮನೆಗೂ ವಿದ್ಯುತ್​ ಉಚಿತ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ಜನ ವಿದ್ಯುತ್​​​ ಶುಲ್ಕ ಕಟ್ಟಲು ನಿರಾಕರಣೆ‌ ಮಾಡುತ್ತಿದ್ದಾರೆ. ಈ ನಡುವೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಬಾಕಿ ಕರೆಂಟ್ ಬಿಲ್ ಕಟ್ಟು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಜೆಸ್ಕಾಂನ ಜೆಇ ಮತ್ತು ಲೈನ್​ಮೆನ್​​​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಆಳಂದ ಪಟ್ಟಣದ ಸೋನಾರ್ ಕಾಲೋನಿಯ ನಿವಾಸಿ ವಸೀಂ ಕಳೆದ ಆರು ತಿಂಗಳಿಂದ ತನ್ನ ಮನೆಯ ಮತ್ತು ತನ್ನ ಢಾಬಾದ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ. ಇದನ್ನೂ ಕಟ್ಟಿಸಿಕೊಳ್ಳಲು ಜೆಇ ಸಿದ್ರಾಮಪ್ಪ ಮತ್ತು ಲೈನ್ ಮೆನ್ ಇಜಾಜ್ ಬುಧವಾರ (ನಿನ್ನೆ) ವಸೀಂ ಮನೆಗೆ ತೆರಳಿ. ಬಾಕಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಹೇಳಿದ್ದಾರೆ. ಆದರೆ, ವಿದ್ಯುತ್​​ ಶುಲ್ಕವನ್ನು ಕಟ್ಟುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿ ಜೊತೆ ವಸೀಂ ವಾದ ಮಾಡಿದ್ದಾನೆ.

ಬಾಕಿ ಕರೆಂಟ್ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡಲು ಮುಂದಾದಾಗ, ವಸೀಂ ಜೆಇ ಸಿದ್ರಾಮಪ್ಪ ಮತ್ತು ಜೆಇ ಇಜಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು, ಮತ್ತು ಕಬ್ಬಿಣದ ರಾಡ್​​​ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಜೆಇ ಸಿದ್ರಾಮಪ್ಪಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಆರು ತಿಂಗಳಿಂದ ಬಾಕಿ ವಿದ್ಯುತ್ ಬಿಲ್ ಕಟ್ಟದೆ ಆರೋಪಿ ವಸೀಂ ಜೆಸ್ಕಾಂ ಸಿಬ್ಬಂದಿ ಜೊತೆ ಆಗಾಗ ಜಗಳ ಮಾಡುತ್ತಿದ್ದ. ಮನೆಯ 3 ಸಾವಿರ ರೂಪಾಯಿ ಮತ್ತು ಢಾಬಾದ 7,300 ರೂಪಾಯಿ ವಿದ್ಯುತ್ ಬಿಲ್ ಬಾಕಿ ಕಟ್ಟದೆ ಕಳೆದ ಆರು ತಿಂಗಳಿಂದ ಸತಾಯಿಸುತ್ತಿದ್ದ. ಪ್ರತಿ ತಿಂಗಳು ಕರೆಂಟ್ ಬಿಲ್ ಕಟ್ಟುವಂತೆ ಹೇಳಿದ್ದರೂ ಕೂಡ ವಸೀಂ ಜೆಸ್ಕಾಂ ಸಿಬ್ಬಂದಿ ಜೊತೆ ಜಗಳ ಮಾಡುತ್ತಿದ್ದ.

ಇದನ್ನೂ ಓದಿ: ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ವ್ಯಕ್ತಿ ಮೇಲೆ ಕೇಸ್ ದಾಖಲು

ಆದರೆ ನಿನ್ನೆ ಬಾಕಿ ಇರುವ 10,300 ಸಾವಿರ ರೂಪಾಯಿ ಬಾಕಿ ವಿದ್ಯುತ್ ಶುಲ್ಕವನ್ನು ಕೇಳಲು ಹೋದಾಗ ಜೆಸ್ಕಾಂ ಸಿಬ್ಬಂದಿ ಮೇಲೆ ವಸೀಂ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆ ಖಂಡಿಸಿ ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಪಿ ವಸೀಂಗೆ ಕಠಿಣ ಶಿಕ್ಷೆ ಕೊಡಬೇಕು ಮತ್ತು ಜೆಸ್ಕಾಂ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜೆಸ್ಕಾಂ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ವಸೀಂ ನನ್ನು ಆಳಂದ ಠಾಣೆ ಪೊಲೀಸರು ಹುಡುಕಿ ಬಂಧಿಸಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 'ಕರೆಂಟ್ ಬಿಲ್ ಕಟ್ಟಂಗಿಲ್ಲ' ಎಂದು ತಮಟೆ ಬಾರಿಸಿದ ವ್ಯಕ್ತಿ: ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.