ETV Bharat / state

ಶ್ರೀರಾಮ ಕೇವಲ ಬಿಜೆಪಿಗಷ್ಟೆ ಸೀಮಿತ ಅಲ್ಲ, ಎಲ್ಲರಿಗೂ ಬೇಕಾದವನು: ಸಿ.ಟಿ.ರವಿ

author img

By ETV Bharat Karnataka Team

Published : Dec 29, 2023, 10:20 PM IST

ಆಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್​ ನಾಯಕರು ಹಿಂದೇಟು ಹಾಕುತ್ತಿರುವ ವಿಚಾರವಾಗಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಮಾಜಿ ಸಚಿವ ಸಿ.ಟಿ ರವಿ
ಮಾಜಿ ಸಚಿವ ಸಿ.ಟಿ ರವಿ

ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ

ಕಲಬುರಗಿ: ಶ್ರೀರಾಮ ಕೇವಲ ಬಿಜೆಪಿಗಷ್ಟೇ ಸೀಮಿತವಾಗಿಲ್ಲ. ಎಲ್ಲರಿಗೂ ಬೇಕಾದವನು ರಾಮ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ರಾಮ ಪೌರಾಣಿಕ ವ್ಯಕ್ತಿ ಎಂದು ಅಫಿಡವಿಟ್ ಹಾಕಿದವರು ಕಾಂಗ್ರೆಸ್​ನವರು. ಕಪಿಲ್ ಸಿಬಲ್ ಅವರು ಅಯೋಧ್ಯೆ ಕೇಸ್​ನಲ್ಲಿ ವಿರುದ್ದವಾಗಿ ವಾದ ಮಾಡಿದವರು. ಹೀಗಾಗಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲು ಅವರಿಗೆ ಹಿಂಜರಿಕೆ ಇರಬಹುದು. ಆದರೆ ರಾಮ ಎಲ್ಲರಿಗೂ ಸೇರಿದವನು. ಕೇವಲ ಬಿಜೆಪಿಗಷ್ಟೇ ಸೀಮಿತ ಅಲ್ಲ. ಯಾರು ರಾಮನನ್ನು ಫೋಲೋ ಮಾಡುತ್ತಾರೋ ಅವರು ಜಗತ್ತಿನಲ್ಲಿ ಒಳ್ಳೆಯವರಾಗಿದ್ದಾರೆ, ಭಯೋತ್ಪಾದಕರಾಗಿಲ್ಲ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ನ್ಯಾಯ ಯಾತ್ರೆ ವಿರುದ್ದ ಕಿಡಿಕಾರಿದ ಸಿ.ಟಿ.ರವಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ದೇಶಕ್ಕೆ ಅನ್ಯಾಯ ಮಾಡಿದೆ. 1947ರಲ್ಲಿ ಭಾರತ ವಿಭಜನೆಗೆ ಸಹಿ ಮಾಡಿದ್ದು ಕಾಂಗ್ರೆಸ್ ಪಕ್ಷ. ವಿಶ್ವಸಂಸ್ಥೆಯಲ್ಲಿ ಕಾಯಂ ಭದ್ರತಾ ಸ್ಥಾನ ಸಿಗುವ ಅವಕಾಶ ಬಂದಾಗಲೂ ಕಾಂಗ್ರೆಸ್ ತಿರಸ್ಕರಿಸಿತ್ತು ಎಂದು ದೂರಿದರು.

ಕಾಂಗ್ರೆಸ್ ಈಗಲೂ ದೇಶದಲ್ಲಿ ಭಾಷೆ-ಭಾಷೆಗಳ ಆಧಾರದ ಮೇಲೆ ಜನರನ್ನು ಎತ್ತಿ ಕಟ್ಟುತ್ತಿದೆ. ಉತ್ತರದ ವಿರುದ್ದ ದಕ್ಷಿಣದವರನ್ನು, ದಕ್ಷಿಣದ ವಿರುದ್ದ ಉತ್ತರದವರನ್ನು ಎತ್ತಿಕಟ್ಟುತ್ತಿದೆ. ಬ್ರಿಟಿಷರು ಹಿಂದೂ ಮುಸ್ಲಿಂ ಅಂತ ಅಷ್ಟೇ ಒಡೆದರು. ಆದರೆ ಕಾಂಗ್ರೆಸ್​ ಜಾತಿ, ಜಾತಿಗಳ ನಡುವೆ ಒಡೆದಾಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕೊರೊನಾ ಕಾಲದಲ್ಲಿ 40 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂಬ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿಕೆ ಕುರಿತು ಮಾತನಾಡಿದ ಅವರು, ಎಲ್ಲರೂ ಸುಮ್ಮನೆ ಆರೋಪ, ಪ್ರತ್ಯಾರೋಪ ಮಾಡೋದು ಬೇಡ. ದಾಖಲೆ ಇದ್ದರೆ ನಾಗಮೋಹನ್ ದಾಸ್ ಕಮಿಟಿ ಮಾಡಿದ್ದರಲ್ಲಾ ಅಲ್ಲಿ ಕೊಡಲಿ. ಯತ್ನಾಳವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಅವರು ಮಾತನಾಡುತ್ತಾರೆ ಎಂದರು.

ಇದನ್ನೂ ಓದಿ: ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ: ಮೋದಿಗೆ ಧನ್ಯವಾದ ಸಲ್ಲಿಸಿದ ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.