ETV Bharat / state

ಯಡಿಯೂರಪ್ಪ ನಮ್ಮೆಲ್ಲರ ಸರ್ವಸಮ್ಮತ ನಾಯಕರು ಎಂಬುದೇ ಅಂತಿಮ: ಬೊಮ್ಮಾಯಿ

author img

By

Published : Jun 7, 2021, 3:47 PM IST

Updated : Jun 7, 2021, 10:52 PM IST

ನಾಯಕತ್ವ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ, ಸಿಎಂ ಬಿ ಎಸ್​ ಯಡಿಯೂರಪ್ಪ ನಮ್ಮೆಲ್ಲರ ಸರ್ವಸಮ್ಮತ ನಾಯಕರು ಎಂದು ಕೇಂದ್ರ ಸಚಿವರು, ರಾಜ್ಯಾಧ್ಯಕ್ಷರು ಹೇಳಿರುವುದೇ ಅಂತಿಮ ಎಂದು ಸ್ಪಷ್ಟಪಡಿಸಿದ್ರು.

bommai
bommai

ಹಾವೇರಿ: ಸಿಎಂ ಬಿ ಎಸ್​ ಯಡಿಯೂರಪ್ಪ ನಮ್ಮೆಲ್ಲರ ಸರ್ವಸಮ್ಮತ ನಾಯಕರು. ಇದರ ಬಗ್ಗೆ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಕೇಂದ್ರ ಸಚಿವರು, ರಾಜ್ಯಾಧ್ಯಕ್ಷರು ಈ ಕುರಿತಂತೆ ತಿಳಿಸಿದ್ದೆ ಅಂತಿಮ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಲಾಕ್​ಡೌನ್ ವಿಸ್ತರಣೆ ಕುರಿತಂತೆ ಇಂದು ಸಂಜೆ ಟಾಸ್ಕ್​ಫೋರ್ಸ್ ಸಭೆ ಇದೆ. ಸಭೆಯಲ್ಲಿ ಚರ್ಚಿಸಿ ತಜ್ಞರ ಸಲಹೆ ಪಡೆದು ಈ ಕುರಿತಂತೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಬಿಜೆಪಿಯಲ್ಲಿ ಯಡಿಯೂರಪ್ಪ ಎನ್ನುವ ನಾಯಕರೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸೂಟ್ ಸಿದ್ಧಪಡಿಸಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆಸಿದ ಬೊಮ್ಮಾಯಿ, ಡಿಕೆಶಿ ತಮಗಾದ ಅನುಭವ ಹೇಳುತ್ತಿದ್ದಾರೆ ಎಂದ್ರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಲಾಕ್​ಡೌನ್ ವಿಸ್ತರಣೆ, ಸಡಿಲಿಕೆ ಬಗ್ಗೆ ಜಿಲ್ಲಾವಾರು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿದೆ ಆದರೆ, ಡೆತ್ ರೇಟ್ ಹೆಚ್ಚಿರುವುದು ಆತಂಕ ತಂದಿದೆ. ಈ ಕುರಿತಂತೆ ಅಧ್ಯಯನ ನಡೆಸುವಂತೆ ತಜ್ಞರ ಸಮಿತಿ ಕಳಿಸುವಂತೆ ಆರೋಗ್ಯ ಸಚಿವ ಕೆ. ಸುಧಾಕರ್‌ಗೆ ಪತ್ರ ಬರೆದಿದ್ದೇನೆ. ಅಲ್ಲದೇ ಮೌಖಿಕವಾಗಿ ಹೇಳಿದ್ದೇನೆ ತಜ್ಞರ ಸಮಿತಿ ಕಾರಣ ತಿಳಿಸಿದರೆ ಅದರ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ರು.

ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಗಳನ್ನು ಅಧಿಕಗೊಳಿಸುತ್ತಾ ಬಂದರೂ ಕೊರೊನಾ ಪಾಸಿಟಿವ್ ಪ್ರಕರಣಗಳ ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ನೆಮ್ಮದಿ ತಂದಿದೆ ಎಂದು ಬೊಮ್ಮಾಯಿ ತಿಳಿಸಿದರು.

Last Updated : Jun 7, 2021, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.