ETV Bharat / state

ಕರ್ಫ್ಯೂ ಮುಂದುವರಿಕೆ ಬಗ್ಗೆ ಟಾಸ್ಕ್​​ಫೋರ್ಸ್​ ನಿರ್ಧರಿಸಲಿದೆ: ಬಸವರಾಜ ಬೊಮ್ಮಾಯಿ

author img

By

Published : Apr 30, 2021, 9:40 PM IST

ಸರ್ಕಾರ ಜಾರಿಗೆ ತಂದಿರುವ ಕೊರೊನಾ ನಿಯಮಗಳನ್ನ ಜನರು ಪಾಲಿಸಬೇಕು. ಈ ರೀತಿಯ ನಿಯಮ ಪಾಲಿಸಿ ನಾವು ಆರೋಗ್ಯವಾಗಿರುವದಲ್ಲಿದೇ ನಮ್ಮನ್ನ ಅವಲಂಭಿಸಿದ ಕುಟುಂಬವನ್ನ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮೊದಲೇ ನಿರ್ಧರಿಸಿದಂತೆ ರಾಜ್ಯದಲ್ಲಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.

Basavaraja bommai
ಬಸವರಾಜ ಬೊಮ್ಮಾಯಿ

ಹಾವೇರಿ: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಎರಡನೇಯ ಅಲೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕೊರೊನಾ ಕರ್ಫ್ಯೂ ಮುಂದುವರೆಸುವ ಬಗ್ಗೆ ತಜ್ಞರ ತಂಡ ಹಾಗೂ ಟಾಸ್ಕ್​​ಪೋರ್ಸ್ ಮುಂದೆ ನಿರ್ಧರಿಸಲಿದೆ ಎಂದಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ಕೊರೊನಾ ನಿಯಮಗಳನ್ನ ಜನರು ಪಾಲಿಸಬೇಕು. ಈ ರೀತಿಯ ನಿಯಮ ಪಾಲಿಸಿ ನಾವು ಆರೋಗ್ಯವಾಗಿರುವುದಲ್ಲದೆ ನಮ್ಮನ್ನ ಅವಲಂಭಿಸಿದ ಕುಟುಂಬವನ್ನ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮೊದಲೇ ನಿರ್ಧರಿಸಿದಂತೆ ರಾಜ್ಯದಲ್ಲಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದರು.

ಕೊರೊನಾ ಕರ್ಫ್ಯೂ ಮುಂದುವರಿಕೆ ಕುರಿತು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಇದನ್ನ ಹೆಚ್ಚಿಸಬೇಕಾ, ನಿಯಮ ಕಠಿಣಗೊಳಿಸಬೇಕಾ ಎಂಬುದನ್ನ ಟಾಸ್ಕ್ ಪೋರ್ಸ್ ಸಮಿತಿ ಮತ್ತು ರಾಜ್ಯಮಟ್ಟದ ಸಲಹಾ ಸಮಿತಿ ನಿರ್ಧಾರದ ಮೇಲೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು. ಕೋವಿಡ್ ಹೋರಾಟದ ಮಧ್ಯದಲ್ಲಿ ನಾವಿದ್ದೇವೆ .ಇದರಲ್ಲಿ ತೃಪ್ತಿ ಅತೃಪ್ತಿ ಮಾತಿಲ್ಲಾ ಎಂದು ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿ, ಚೇತರಿಸಿಕೊಂಡ್ರೂ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.