ಒಕ್ಕಲಿಗರಿಗೆ ಮೀಸಲಾತಿ ಕಡಿಮೆ ಮಾಡಿ ಮುಸ್ಲಿಮರಿಗೆ ಕೊಟ್ಟಿದ್ದು ನಾನು: ಹೆಚ್ ಡಿ ದೇವೇಗೌಡ

author img

By ETV Bharat Karnataka Desk

Published : Jan 19, 2024, 4:49 PM IST

Updated : Jan 19, 2024, 5:19 PM IST

Devegowda spoke to the media.

ನಾನು ಸಿಎಂ ಆಗಿದ್ದ ಅವಧಿಯಲ್ಲಿ ಶೇ.15 ಎಸ್ಸಿಗೆ, ಶೇ 3 ಎಸ್ಟಿಗೆ ಮೀಸಲಾತಿ ಇತ್ತು. ಅದನ್ನು ಶೇ. 15 ರಿಂದ 18ಕ್ಕೆ ಶೇ. 3 ರಿಂದ 5ಕ್ಕೆ ಏರಿಸಿದ್ದೆ. ಈಗ ಒಳ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ಹೊತ್ತು ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಇದನ್ನೇ ಮುಂದಿಟ್ಟುಕೊಂಡು ಈ ಚುನಾವಣೆ ಎದುರಿಸುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

ಹೆಚ್ ಡಿ ದೇವೇಗೌಡ ಮಾಧ್ಯಮದವರ ಜೊತೆ ಮಾತನಾಡಿದರು.

ಹಾಸನ:ಒಕ್ಕಲಿಗರಿಗೆ ನೀಡಿದ್ದ ಮೀಸಲಾತಿಯನ್ನು ಅಂದು ಕಡಿಮೆ ಮಾಡಿ ಅದನ್ನು ಮುಸ್ಲಿಂರಿಗೆ ಕೊಟ್ಟಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು. ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ರಾಜ್ಯ ಸರ್ಕಾರವು ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಅಂದು ಒಕ್ಕಲಿಗರಿಗೆ ಕೊಟ್ಟಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಮರಿಗೆ ಕೊಟ್ಟಿದ್ದು ನಾನು. ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನ ಕೊಟ್ಟ ಮೀಸಲಾತಿ ಭರ್ತಿ ಮಾಡಲು ಆಗದಿದ್ದಾಗ ಉದ್ಯೋಗದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದ್ದರು.

ಶೇ.15 ಎಸ್ಸಿಗೆ, ಶೇ. 3 ಎಸ್ಟಿಗೆ ಮೀಸಲಾತಿ ಇತ್ತು. ಆದರೆ, ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೇ ಹೋದಾಗ ನಾನು ಅದನ್ನು ಶೇ. 15 ರಿಂದ 18ಕ್ಕೆ ಶೇ. 3 ರಿಂದ 5ಕ್ಕೆ ಏರಿಸಿದ್ದೆನು. ಇದೆಲ್ಲ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಮೀಸಲಾತಿ ಬಗ್ಗೆ ಕೈಗೊಂಡ ತೀರ್ಮಾನ ಎಂದು ಮಾಹಿತಿ ನೀಡಿದರು.

ಅಂದು ಶೇ.23 ತೀರ್ಮಾನ ಮಾಡಿರುವುದು ಈಗಲೂ ಜಾರಿಯಲ್ಲಿ ಇದೆ. ಒಳಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳುಹಿಸಿದೆ. ಇಷ್ಟು ವರ್ಷ ನಾವು ಮಾಡಿರುವ ಜಾತಿಗಳಲ್ಲಿ ಕೆಲವೇ ಕೆಲವು ಕುಟುಂಬಗಳು ಈ ಮೀಸಲಾತಿ ಫಲ ಅನುಭವಿಸಿವೆ ಎಂದು ತಿಳಿಸಿದರು.

ಒಳಮೀಸಲಾತಿ: ನಮ್ಮ ಅವಧಿಯಲ್ಲಿ ತಿಪ್ಪೇಸ್ವಾಮಿ ಅವರು ಒಳ ಮೀಸಲಾತಿ ಬಗ್ಗೆ ಖಾಸಗಿ ನಿರ್ಣಯ ಮಂಡಿಸಿದ್ದರು. ಆಗ ಖರ್ಗೆ ವಿಪಕ್ಷದ ನಾಯಕರಾಗಿದ್ದರು. ಅವರು ತಮ್ಮ ಸೀಟ್​ನಿಂದ ಎದ್ದು ಬಂದು ಆ ನಿರ್ಣಯ ಪ್ರತಿಯನ್ನು ಹರಿದು ಅವರ ಮುಖಕ್ಕೆ ಎಸೆದರು. ಆದರೆ ಇವತ್ತು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ನಾನು ಮಾಡಿದ ಕೆಲಸವನ್ನು ಮರೆಮಾಚುವ ಕೆಲಸವನ್ನು ಇಷ್ಡು ದಿನ ಮಾಡಿದಿರಿ ಎಂದು ಕುಟುಕಿದರು.

ರಾಜಣ್ಣನ ಮಾತುಗಳಿಂದ ಬೇಸರ: ಈ ಜಿಲ್ಲೆಯ ಉಸ್ತುವಾರಿ ಮಂತ್ರಿ ರಾಜಣ್ಣ ಅವರು ಚುನಾವಣೆ ಮುಗಿಯೋ ವೇಳೆಯಲ್ಲಿ ನನಗೆ ಜ್ವರ ಬಂದು ಮಲಗಿದ್ದೆ. ಆಗ ಅವರು ನೀವು ಬಂದರೆ ನಾನು ಗೆಲ್ಲುತ್ತೇನೆ, ಇಲ್ಲದಿದ್ದರೆ ಗೆಲ್ಲಲ್ಲ ಎಂದು ಅವರು ಜನರಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಆಗ ಅವರು 700 ಮತಗಳ ಅಂತರದಲ್ಲಿ ಗೆದ್ದರು. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ನಾನು ತುಮಕೂರಿನಿಂದ ಸ್ಪರ್ಧೆ ಮಾಡಿದಾಗ ನೀವು ಮುದ್ದು ಹನುಮೇಗೌಡರ ಸ್ಥಾನ ಕಿತ್ತುಕೊಂಡ್ರಿ ಅಂತಾ ಬಹಿರಂಗ ಸಭೆಯಲ್ಲಿ ಹೇಳಿದ್ರು ಎಂದು ತಿಳಿಸಿದರು.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜಣ್ಣ ಮಾತನಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ದೇವೇಗೌಡರು, ಮೀಸಲಾತಿ ಬಗ್ಗೆ ಏನಾಗಿದೆ ಅನ್ನುವ ಬಗ್ಗೆ ಚರ್ಚೆ ಆಗಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ನಾನು ಕೊಂಡೊಯ್ಯುತ್ತೇನೆ. ನನಗೆ ನಾಲ್ಕು ಸೀಟ್ ಕೊಡ್ತಾರೊ, ಮೂರು ಕೊಡ್ತಾರೊ ಗೊತ್ತಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಯಾರು? 13 ತಿಂಗಳಿಗೆ ನನ್ನ ಪ್ರಧಾನ ಮಂತ್ರಿ ಸ್ಥಾನ ತೆಗೆದಿದ್ದು ಯಾರು? ನನ್ನ ರಾಜಕೀಯ ಜೀವನದಲ್ಲಿ 60 ವರ್ಷ ದುಡಿದಿದ್ದೇನೆ. ಯಾವ ಯಾವ ಸಮುದಾಯಕ್ಕೆ ಮೀಸಲಾತಿ ಲಾಭ ಆಗಿದೆ? ಇದರ ಲಾಭವನ್ನು ಯಾರು ಪಡೆದಿದ್ದಾರೆ? ಚರ್ಚೆ ಆಗಬೇಕು ಎಂಬುದು ನನ್ನ ಒತ್ತಾಯ ಎಂದರು.

ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಒಳ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ಹೊತ್ತು ಹಾಕುವ ಕೆಲಸ ಮಾಡಿದ್ದಾರೆ. ಇದನ್ನೇ ಮುಂದಿಟ್ಟು ಈ ಚುನಾವಣೆಯಲ್ಲಿ ಹೋರಾಟ ಮಾಡಲಾಗುವುದು. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆ ಇಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ಕುಟುಂಬ ಸಮೇತ ಅಯೋಧ್ಯೆಗೆ ತೆರಳುವೆ: ಜ.22ಕ್ಕೆಅಯೋಧ್ಯೆಗೆ ಬರುವಂತೆ ಕರೆ ಬಂದಿದ್ದು, ನಾನು ಮತ್ತು ಕುಟುಂಬ ಸಮೇತ ಅಯೋಧ್ಯೆಗೆ ಹೋಗುತ್ತಿದ್ದೇವೆ. ನಾನು ನನ್ನ ಪತ್ನಿ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಹೋಗ್ತೇವೆ. ಜನವರಿ 22ಕ್ಕೆ ವಿಶೇಷ ವಿಮಾನ ಮಾಡಿದ್ದು, ಅದರಲ್ಲೆ ಹೋಗ್ತೇವೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂಓದಿ:ಕರ್ನಾಟಕ ಅತಿದೊಡ್ಡ ಏವಿಯೇಶನ್ ಹಬ್ ಆಗಿ ವಿಕಸಿತ: ಪ್ರಧಾನಿ ಮೋದಿ

Last Updated :Jan 19, 2024, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.