ETV Bharat / state

ಕಳಪೆ ಆಹಾರ: ಬಿಸಿಯೂಟದಲ್ಲಿ ಬೇಳೆಯ ಜೊತೆಗೆ ಬೇಯುತ್ತಿವೆ ರಾಶಿ ರಾಶಿ ಸೊಳ್ಳೆಗಳು...!

author img

By

Published : Sep 21, 2019, 3:39 AM IST

ಜಿಲ್ಲೆಯ ಕನಗಿನಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದಲ್ಲಿ ಸೊಳ್ಳೆಗಳು ಕಂಡು ಬಂದಿದೆ.

ಅನ್ನದಲ್ಲಿ ನುಸಿಹುಳು

ಗದಗ: ಜಿಲ್ಲೆಯ ಕನಗಿನಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದಲ್ಲಿ ಸಾಕಷ್ಟು ಸೊಳ್ಳೆಗಳು ಕಂಡು ಬಂದಿದೆ.

ಅಡುಗೆ ಸಹಾಯಕಿಯರು ಅಡುಗೆಗೆ ಬಳಸುವ ಧವಸ ಧಾನ್ಯಗಳನ್ನು ಸ್ವಚ್ಛಗೊಳಿಸದೆಯೇ ಊಟ ಸಿದ್ದಪಡಿಸುತ್ತಾರೆ. ಆಹಾರ ಪದಾರ್ಥದಲ್ಲಿ ನುಸಿಗಳು ಗೂಡು ಕಟ್ಟಿಕೊಂಡಿದ್ದರೂ ಸಹಾಯಕಿಯರು ಲೆಕ್ಕಿಸುತ್ತಿರಲಿಲ್ಲ ಎನ್ನಲಾಗಿದೆ.

poor-food
ಅನ್ನದಲ್ಲಿ ಸೊಳ್ಳೆ

ಊಟದ ಸಮಯದಲ್ಲಿ ಮಕ್ಕಳ ಕಣ್ಣಿಗೆ ಸೊಳ್ಳೆಗಳು ಕಂಡುಬಂದಿದ್ದು, ಈ ವಿಚಾರವನ್ನು ಮಕ್ಕಳು ತಮ್ಮ ಪಾಲಕರಿಗೆ ತಿಳಿಸಿದ್ದಾರೆ. ಅಡುಗೆ ಸಹಾಯಕಿಯರ ಬೇಜವಾಬ್ದಾರಿತನಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇರುವ ಹಾಗೂ ಸೊಳ್ಳೆಗಳು ತುಂಬಿರುವ ಅಕ್ಕಿ

ಶಾಲಾ ಆಡಳಿತ ವರ್ಗ ಹಾಗೂ ಶಿಕ್ಷಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳಿಗೆ ನೀಡಬೇಕಾದ ಆಹಾರ ಕಳಪೆಯಿಂದ ಕೂಡಿದೆ. ಮಕ್ಕಳ ಆರೋಗ್ಯದಲ್ಲಿ ಏರು-ಪೇರಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Intro:ಗದಗ

ಆ್ಯಂಕರ್ :- ಶಾಲಾ ಮಕ್ಕಳಿಗೆ ನೀಡೋ ಬಿಸಿ ಊಟದಲ್ಲಿ ನುಸಿಗಳು ಇರೋ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ ಜಿಲ್ಲೆಯ ಕನಗಿನಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ದಿನ ಶಾಲಾ ಮಕ್ಕಳಿಗೆ ಬಿಸಿ ಊಟ ಮಾಡುವಂತೆ ಮಾಡಲಾಗಿತ್ತು. ಆದರೆ ಅಡುಗೆ ಸಹಾಯಕಿಯರು ಇಂದು ಅಡುಗೆಗೆ ಬಳಸಲಾಗುವ ಧವಸ ಧಾನ್ಯಗಳನ್ನು ಸ್ವಚ್ಚ ಮಾಡದೆ ಹಾಗೆ ಅಡುಗೆ ಮಾಡಿದ್ದಾರೆ. ಆದರೆ ಆ ಧವಸ ಧಾನ್ಯಗಳಲ್ಲಿ ನುಸಿಗಳ ರಾಶಿಯೇ ಇತ್ತು ಅದನ್ನು ಲೆಕ್ಕಿಸದೆ ಅಡುಗೆ ಸಹಾಯಕಿಯರು ಹಾಗೆ ಅಡುಗೆ ಮಾಡಿದ್ದಾರೆ.ಇನ್ನೂ ಊಟ ಮಾಡುವ ಸಮಯದಲ್ಲಿ ಶಾಲಾ ಮಕ್ಕಳ ಕಣ್ಣಿಗೆ ನುಸಿಗಳು ರಾರಾಜಿಸುತ್ತಿದವನ್ನು ಕಂಡು ಶಾಲೆ ಮಕ್ಕಳು ತಮ್ಮ ಪಾಲಕರಿಗೆ ಈ ವಿಷಯವನ್ನು ತಿಳಿಸಿದ್ದಾರೆ.ಇಂತಹ ಕರ್ಮ ಕಂಡ ಗ್ರಾಮಸ್ಥರು ಶಾಲಾ ಆಡಳಿತ ಹಾಗೂ ಶಾಲಾ ಶಿಕ್ಷಕರ ವಿರುದ್ದ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಶಾಲಾ ಮಕ್ಕಳಿಗೆ ನೀಡಬೇಕಾದ ಅಹಾರದಲ್ಲಿ ಹೀಗಾಗಿ ಹೆಚ್ಚು ಕಡಿಮೆ ಆಗಿ ಮಕ್ಕಳ ಆರೋಗ್ಯದಲ್ಲಿ ಎರಪೇರು ಆದರೆ ಯಾರು ಹೊಣೆ ಸಂಭಂದಿಸಿದ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆಯನ್ನು ಸರಿಪಡಿಸಬೇಕಾದ ಅನಿವಾರ್ಯತೆ ಇದೆ...Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.