ETV Bharat / state

ಗದಗ ಬಳಿ ಸರಣಿ ಅಪಘಾತ: ನಾಲ್ವರಿಗೆ ಗಾಯ..

author img

By

Published : Oct 21, 2020, 11:08 PM IST

ಟ್ರ್ಯಾಕ್ಟರ್ ಓವರ್‌ ಟೇಕ್ ಮಾಡುವ ವೇಳೆ ಸಾರಿಗೆ ಬಸ್, ಕಾರ್ ಹಾಗೂ ಟ್ರಾಕ್ಟರ್ ನಡುವೆ ಸರಣಿ ಅಪಘಾತ ಆಗಿರುವ ಘಟನೆ ಗದಗದಲ್ಲಿ ನಡೆದಿದೆ.

accident
ಸರಣಿ ಅಪಘಾತ

ಗದಗ: ಟ್ರ್ಯಾಕ್ಟರ್ ಓವರ್‌ ಟೇಕ್ ಮಾಡುವ ವೇಳೆ ಸಾರಿಗೆ ಬಸ್, ಕಾರ್ ಹಾಗೂ ಟ್ರಾಕ್ಟರ್ ನಡುವೆ ಸರಣಿ ಅಪಘಾತ ಆಗಿರುವ ಘಟನೆ ಗದಗ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ನಡೆದಿದೆ.

ರೋಣದಿಂದ ಗದಗದ ಕಡೆಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕ, ನೀರಲಗಿಯಿಂದ ನಾಗಸಮುದ್ರ ಕಡೆಗೆ ಹೊರಟ್ಟಿದ್ದ ಟ್ರ್ಯಾಕ್ಟರ್​‌ನ್ನು ಓವರ್‌ ಟೇಕ್ ಮಾಡುವ ವೇಳೆ ಈ ಘಟನೆ ನಡೆದಿದೆ. ಈ ಸಮಯದಲ್ಲಿ ಗದಗದಿಂದ ರೋಣಕ್ಕೆ ಹೊರಟಿದ್ದ ಡಸ್ಟರ್ ಕಾರ್ ಹಾಗೂ ಟ್ರ್ಯಾಕ್ಟರ್​‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರ್​ನಲ್ಲಿದ್ದ 4 ಜನರಿಗೆ ಗಾಯಗಳಾಗಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಸ್ಥಳಕ್ಕೆ ಗದಗ ಟ್ರಾಫಿಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.