ETV Bharat / state

ಗದಗ ನೆರೆ ಸಂತ್ರಸ್ತರ ನೋವಿಗೆ ನಿಂತ ಕೃಷ್ಣ ಭೈರೇಗೌಡ.. ಗ್ರಾಮಗಳಿಗೆ ಮೇವು, ರೇಷನ್​ ದೇಣಿಗೆ

author img

By

Published : Aug 16, 2019, 9:01 PM IST

ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಕೊಚ್ಚಿ ಹೋಗಿರುವ ಹಿನ್ನೆಲೆ ಜಿಲ್ಲೆಯ ನೆರೆ ಸಂತ್ರಸ್ತರ ನೋವಿಗೆ ಬೆಂಗಳೂರಿನ ಬ್ಯಾಟರಾಯನಪುರದ ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಸ್ಪಂದಿಸಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ನಿಂತ ಬ್ಯಾಟರಾಯನಪುರದ ಕಾಂಗ್ರೆಸ್ ಶಾಸಕ

ಗದಗ: ಮಲಪ್ರಭಾ ನದಿಯ ಪ್ರವಾಹಕ್ಕೆ ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಕೊಚ್ಚಿ ಹೋಗಿರುವ ಹಿನ್ನೆಲೆ ಜಿಲ್ಲೆಯ ನೆರೆ ಸಂತ್ರಸ್ತರ ನೋವಿಗೆ ಬೆಂಗಳೂರಿನ ಬ್ಯಾಟರಾಯನಪುರದ ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ಸ್ಪಂದಿಸಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ನಿಂತ ಬ್ಯಾಟರಾಯನಪುರದ ಕಾಂಗ್ರೆಸ್ ಶಾಸ

ಹೌದು, ಶಾಸಕ ಕೃಷ್ಣ ಭೈರೇಗೌಡ ನೆರೆಪೀಡಿತ ಗ್ರಾಮಗಳಿಗೆ ತಮ್ಮ ಕಾರ್ಯಕರ್ತರ ಮೂಲಕ ಪರಿಹಾರ ದೊರಕಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹಾಗೂ ಸಂಗಡಿಗರ ಸಹಾಯದಿಂದ ನೆರೆಪೀಡಿತ ಗ್ರಾಮಗಳಿಗೆ ಒಂದು ಲೋಡ್ ಮೇವು ಹಾಗೂ ಒಂದು ಲೋಡ್ ರೇಷನ್ ಕಳಿಸಿಕೊಟ್ಟಿದ್ದಾರೆ.

ಇನ್ನೂ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿನ ಸಂತ್ರಸ್ತರ ಕೇಂದ್ರದಲ್ಲಿ ಕೃಷ್ಣ ಭೈರೇಗೌಡ ಅವರು ಕಳಿಸಿಕೊಟ್ಟ ಸಾಮಾಗ್ರಿ ಹಾಗೂ‌ ಮೇವನ್ನು ಹಂಚಿಕೆ ಮಾಡಲಾಯಿತು. ಈ ಹಿನ್ನಲೆ ಮೇವು ಸಿಗದೇ ಪರಿತಪಿಸುತ್ತಿದ್ದ ಜಾನುವಾರು ಮಾಲೀಕರು ಅಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಶಾಸಕರ ಈ ಕಾರ್ಯಕ್ಕೆ ನಿರಾಶ್ರಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:
ಆಂಕರ್-ಮಲಪ್ರಭಾ ನದಿಯ ಪ್ರವಾಹಕ್ಕೆ ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಕೊಚ್ಚಿ ಹೋಗಿವೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನೆರೆ ಸಂತ್ರಸ್ತರ ನೋವಿಗೆ ಶಾಸಕ ಕೃಷ್ಣೇಭೈರೇಗೌಡ ಸ್ಪಂದಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರದ ಕಾಂಗ್ರೆಸ್ ಶಾಸಕ ಕೃಷ್ಣ ಭೈರೇಗೌಡ ನೆರೆಪೀಡಿತ ಗ್ರಾಮಗಳಿಗೆ ತಮ್ಮ ಕಾರ್ಯಕರ್ತರ ಮೂಲಕ ಪರಿಹಾರ ದೊರಕಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹಾಗೂ ಸಂಗಡಿಗರಿಂದ ನೆರೆಪೀಡಿತ ಗ್ರಾಮಗಳಿಗೆ ಒಂದು ಲೋಡ್ ಮೇವು ಹಾಗೂ ಒಂದು ಲೋಡ್ ರೇಷನ್ ನ್ನು ಗ್ರಾಮಗಳಿಗೆ ಕಳಿಸಿಕೊಟ್ಟಿದ್ದಾರೆ.
ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕೃಷ್ಣ ಭೈರೇಗೌಡ ಅವರು ಕಳಿಸಿಕೊಟ್ಟ ಸಾಮಾಗ್ರಿ ಹಾಗೂ‌ ಮೇವನ್ನು ಸಂತ್ರಸ್ತರ ಕೇಂದ್ರದಲ್ಲಿ ಹಂಚಿಕೆ ಮಾಡಲಾಯಿತು. ಮೇವು ಸಿಗದೇ ಪರಿತಪಿಸುತ್ತಿದ್ದ ಜಾನುವಾರು ಮಾಲೀಕರು ಅಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಶಾಸಕರ ಈ ಕಾರ್ಯಕ್ಕೆ ನಿರಾಶ್ರಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Body: GdgConclusion:Gdg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.