ETV Bharat / state

ಬೆಳೆ ವಿಮೆ ಕಂಪನಿ ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳುವುದು ಖಂಡಿತ: ಬಿಸಿ ಪಾಟೀಲ್

author img

By

Published : Dec 1, 2021, 5:06 PM IST

ಬೆಳೆ ವಿಮೆ ವಿಚಾರದಲ್ಲಿ ಕಂಪನಿಗಳು ವಂಚಿಸಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್​ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

BC Patil talks about farmer crop loan issue
ರೈತರ ಬೆಳೆ ಸಾಲದ ಬಗ್ಗೆ ಬಿಸಿ ಪಾಟೀಲ್​ ಹೇಳಿಕೆ

ಹುಬ್ಬಳ್ಳಿ: ಬೆಳೆ ವಿಮೆ ವಿಚಾರದಲ್ಲಿ ವಂಚನೆ ಮಾಡಲು ಬಿಡುವುದಿಲ್ಲ. ಈ ರೀತಿ ಮಾಡುವವರಿಗೆ ಈಗಾಗಲೇ ತಾಕೀತು ಮಾಡಿದ್ದೇವೆ. ನಿಗದಿತ ಕಂಪನಿಗಳ ಮೇಲೆ ಆರೋಪ ಕೇಳಿ ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​​ ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್​​

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಆತ್ಮಹತ್ಯೆ ವಿಚಾರದಲ್ಲಿ ರೈತರು ಸಾಲ ಮಾಡಿದ್ದಕ್ಕೆ ದಾಖಲಾತಿಗಳಿದ್ದರೆ ನೋಟಿಸ್​​ ಕೊಡಬೇಕು ಎಂದಿಲ್ಲ. ರೈತರ ಖಾತೆಯಲ್ಲಿ ಸಾಲದ ಕುರಿತಾದ ದಾಖಲೆಗಳಿದ್ದರೆ ಸಾಕಾಗುತ್ತದೆ. ನಂತರ ಕಮಿಟಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಪರಿಹಾರ ಕೊಡುವ ಕಾರ್ಯ ಮಾಡುತ್ತದೆ ಎಂದರು.

ಬೆಳೆ ಪರಿಹಾರ ನೀಡಲು ನಷ್ಟದ ಬಗ್ಗೆ ಸರ್ವೇ ಕಾರ್ಯ ಮಾಡಿದ್ದೇವೆ. ನವೆಂಬರ್​​. 30 ರಿಂದ ಪರಿಹಾರ ನೀಡಲು ಸಿಎಂ ಸೂಚಿಸಿದ್ದಾರೆ. ನವೆಂಬರ್ ತಿಂಗಳಿನಲ್ಲಿ 5 ಲಕ್ಷ ಹೆಕ್ಟೇರ್​​​ಗೂ ಹೆಚ್ಚು ಬೆಳೆ ನಾಶವಾಗಿದೆ. ಜುಲೈನಿಂದ ನವೆಂಬರ್​​​​ವರೆಗೆ 11 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಅದೆಲ್ಲವೂ ಸರ್ವೆ ಮಾಡಲಾಗಿದೆ. ಪರಿಹಾರ ನೀಡಲು ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಇದನ್ನೂ ಓದಿ: ನಾನು ಸಾವಿಗೆ ಹೆದರುವವನಲ್ಲ: ಕೊಲೆ ಸಂಚಿಗೆ ವಿಶ್ವನಾಥ್ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.