ETV Bharat / state

ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ - ಗದಗ ನಡುವೆ ವೋಲ್ವೊ ಬಸ್ ಸೇವೆ ಆರಂಭ

author img

By

Published : Jul 21, 2023, 9:04 PM IST

Volvo bus service
ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ- ಗದಗ ನಡುವೆ ವೋಲ್ವೊ ಬಸ್ ಸೇವೆ ಆರಂಭ

ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ ಹಾಗೂ ಗದಗ ನಡುವೆ ವೋಲ್ವೊ ಬಸ್ ಸೇವೆ ಆರಂಭಿಸಲಾಗಿದೆ.

ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಗದಗ ನಡುವೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ಸೌಲಭ್ಯ ಕಲ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ. ಹುಬ್ಬಳ್ಳಿ ಮತ್ತು ಗದಗ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಎಸಿ ಬಸ್​ಗಳನ್ನು ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ ಹಾಗೂ ಗದಗ ಭಾಗದ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ- ಗದಗ ನಡುವೆ ತಡೆ ರಹಿತ ವೋಲ್ವೊ ಎಸಿ ಬಸ್​ಗಳ ಸಂಚಾರ ಪ್ರಾರಂಭಿಸಲಾಗಿದೆ. ಈ ಬಸ್​ಗಳು ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹಾಗೂ ಗದಗ ಹಳೆ ಬಸ್ ನಿಲ್ದಾಣದಿಂದ ಹೊರಟು ಹೊಸ ಬಸ್ ನಿಲ್ದಾಣದ ಮಾರ್ಗದ ಮೂಲಕ ಸಂಚರಿಸುತ್ತವೆ.

ಹುಬ್ಬಳ್ಳಿಯಿಂದ ವೋಲ್ವೊ ಹೊರಡುವ ಸಮಯ: ಬೆಳಗ್ಗೆ 8-00, 8-30 11-15, 11-30, ಮಧ್ಯಾಹ್ನ 2-30, 3-00, ಸಂಜೆ 5-30 ಹಾಗೂ 6-00 ಗಂಟೆಗೆ ಪ್ರತಿದಿನದ ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಗದಗ ನಗರಕ್ಕೆ ಹೊರಡಲಿವೆ.

ಗದಗದಿಂದ ಹುಬ್ಬಳ್ಳಿಗೆ ಹೊರಡುವ ಸಮಯ: ಬೆಳಗ್ಗೆ 9-30, 10-00, ಮಧ್ಯಾಹ್ನ 12-45, 1:00, ಸಂಜೆ 4-00, 4-30, 7-00 ಹಾಗೂ 7-30 ಗಂಟೆಗೆ ಗದಗ ಹಳೆ ಬಸ್ ನಿಲ್ದಾಣದಿಂದ ಹಬ್ಬಳ್ಳಿಗೆ ಸಂಚರಿಸಲಿದೆ.

ವೋಲ್ವೊ ಬಸ್​ಗೆ ಪ್ರಯಾಣದರ ಏಷ್ಟು?: ಪ್ರಸ್ತುತ ಹುಬ್ಬಳ್ಳಿ - ಗದಗ ನಡುವೆ ಸಂಚರಿಸುವ ತಡೆ ರಹಿತ ವೇಗದೂತ ಬಸ್​ಗಳ ಪ್ರಯಾಣ ದರ ರೂ.75 ಇರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ವೋಲ್ವೊ ಬಸ್​ಗೆ ಪ್ರೋತ್ಸಾಹಕ ಪ್ರಯಾಣದರ ರೂ. 90 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ ಪ್ರಾದೇಶಿಕ ಬಸ್ ನಿಲ್ದಾಣದ ಮೊಬೈಲ್ ಸಂಖ್ಯೆ: 77609 91662 / 77609 91685, ಗದಗ ಹಳೆ ಬಸ್ ನಿಲ್ದಾಣ: 77609 73408, ಗದಗ ಹೊಸ ಬಸ್ ನಿಲ್ದಾಣ: 77609 73409 ನಂಬರ್​ಗೆ ಸಂಪರ್ಕಿಸಬಹುದು.

ಪ್ರಯಾಣಿಕರು ನೂತನ ವೋಲ್ವೊ ಬಸ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರಿಗೆ ಚಾಲಕ, ನಿರ್ವಾಹಕರಿಗೆ ನಗದು ಬಹುಮಾನ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಯಶಸ್ಸಿಗಾಗಿ ಮೊದಲ ತಿಂಗಳು ಗರಿಷ್ಠ ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ನಗದು ಬಹುಮಾನ ಮಂಜೂರು ಮಾಡಿದ್ದರು.

ಚಾಲನಾ ಸಿಬ್ಬಂದಿ ಹಾಜರಾತಿ ಉತ್ತೇಜಿಸುವ ದೃಷ್ಟಿಯಿಂದ ಯೋಜನೆಯ ಮೊದಲ ತಿಂಗಳ ಅವಧಿಯಲ್ಲಿ ಹೆಚ್ಚು ದಿನ ಕರ್ತವ್ಯ ನಿರ್ವಹಿಸಿದ ಚಾಲಕರು ಮತ್ತು ನಿರ್ವಾಹಕರುಗಳಿಗೆ ನಗದು ಬಹುಮಾನ ಘೋಷಿಸಿದ್ದರು. ಜೂನ್ 11ರಿಂದ ಜುಲೈ 10ವರೆಗಿನ ಅವಧಿಯಲ್ಲಿ ಗರಿಷ್ಠ ದಿನಗಳ ಕರ್ತವ್ಯ ನಿರ್ವಹಿಸಿದ ಪ್ರತಿ ಘಟಕದ ಐದು ಚಾಲಕರು ಮತ್ತು ಐದು ನಿರ್ವಾಹಕರಿಗೆ ನಗದು ಬಹುಮಾನ ಮಂಜೂರು ಮಾಡಲಾಗಿತ್ತು.

ಇದನ್ನೂ ಓದಿ: Free bus scheme: NWKRTC ಬಸ್​ಗಳಲ್ಲಿ 3 ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ, ಉಚಿತ ಟಿಕೆಟ್ ಮೌಲ್ಯ 80 ಕೋಟಿ ರೂಪಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.