ETV Bharat / state

ಜೈನ ಮುನಿ ಹತ್ಯೆ: ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ- ಪ್ರಮೋದ್ ಮುತಾಲಿಕ್‌

author img

By

Published : Jul 11, 2023, 2:35 PM IST

ಜೈನ ಮುನಿ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

Sri Ram Sene chief Pramod Muthalik
ಪ್ರಮೋದ್​ ಮುತಾಲಿಕ್​

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಚಿಕ್ಕೋಡಿಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಶ್ರೀ ರಾಮಸೇನೆ ಸಂಘಟನೆಯಿಂದ ಖಂಡಿಸುತ್ತೇವೆ. ನಾನು ಸ್ಥಳಕ್ಕೆ ಹೋಗಿ ಬಂದಿದ್ದೇನೆ. ಹಿರೇಕೋಡಿ ಗ್ರಾಮದಿಂದ ಕಿ.ಮೀ ಅಂತರದಲ್ಲಿರುವ ಮಠದಲ್ಲಿ ಒಬ್ಬರೇ ಇರುತ್ತಿದ್ದರು. ಒಂಟಿತನ ನೋಡಿ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ಇದು ಸಾಮಾನ್ಯ ಕೊಲೆ ಅಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಕಳವಳ ವ್ಯಕ್ತಪಡಿಸಿದರು.

ನಗರದ ವರೂರು ನವಗೃಹ ತೀರ್ಥ ಕ್ಷೇತ್ರದಲ್ಲಿ ಮಾತನಾಡಿದ ಅವರು, ಭೀಕರವಾಗಿ ಕೊಲೆ ಮಾಡಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಬಿಜೆಪಿಯವರು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹೇಳುತ್ತಿದ್ದಾರೆ. ನಿಮ್ಮ (ಬಿಜೆಪಿ) ಪಕ್ಷ ಅಧಿಕಾರದಲ್ಲಿದ್ದಾಗ ಸಿಬಿಐಗೆ ಒಪ್ಪಿಸಿದ ಪ್ರಕರಣಗಳು ಏನಾದವು?. ನೀವು ಬಾಯಿ ಮುಚ್ಕೊಂಡಿರಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಿರೇಕೋಡಿ‌ ಜೈನ ಮುನಿಗಳ ಹತ್ಯೆಯಲ್ಲಿ ವಿದೇಶಿ ಕುತಂತ್ರದ ಕೈವಾಡ: ಕೃಷ್ಣ ಭಟ್ ಆರೋಪ

ಪೊಲೀಸರು ಸಮರ್ಥರಾಗಿದ್ದಾರೆ. ಮುಂದಿನ ತನಿಖೆ ಆಗಲು ಆಗ್ರಹ ಇದೆ. ಕಠಿಣ ಶಿಕ್ಷೆ ಕೊಡಬೇಕು ಅಂತ ಎಲ್ಲರೂ ಹೇಳ್ತಾ ಇದ್ದಾರೆ. ನಮ್ಮ ವ್ಯವಸ್ಥೆ ದುರ್ಬಲ ಇದೆ. ಒಂದು ವರ್ಷದಲ್ಲಿ ಜಾಮೀನು ಪಡೆದು ಹೊರ ಬರ್ತಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ಆಗಬೇಕು‌. ಬುಲ್ಡೋಜರ್ ಮೂಲಕ ಮನೆ ಬೀಳಿಸಿ, ಅವರ ಆಸ್ತಿ ಜಪ್ತಿ ಮಾಡಬೇಕು‌. ಯಾವುದೇ ಧರ್ಮ, ಜಾತಿ ಇರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಅಹಿಂಸಾವಾದಿಗಳನ್ನು ಕೊಲೆ ಮಾಡಿದ್ದಾರೆ. ಕರ್ನಾಟಕಕ್ಕೆ ಇದು ದೊಡ್ಡ ಕಳಂಕ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅಪರಾಧಿಗಳನ್ನು ಸಂರಕ್ಷಣೆ ಮಾಡಿದರೆ ನಾಳೆ ಇದೆ ಮಚ್ಚು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಯೋಗಿ ಮಾದರಿಯಲ್ಲೇ ಶಿಕ್ಷೆಯಾಗಬೇಕು. ವಕೀಲರ ಸಂಘಕ್ಕೆ ಮನವಿ ಮಾಡುತ್ತೇನೆ. ಆ ಮೂರು ವ್ಯಕ್ತಿಗಳಿಗೆ ಜಾಮೀನು ಕೊಡಬಾರದು. ದುಡ್ಡಿನ ಆಸೆಗೆ ಬಿದ್ದರೆ ನೀವು ಈ ಕ್ರೌರ್ಯಕ್ಕೆ ಸಾಥ್ ನೀಡಿದಂತೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಜೈನ ಮುನಿ ಹತ್ಯೆ ಮಾಡಿದವರಿಗೆ ಶೀಘ್ರ ಶಿಕ್ಷೆ ಆಗಬೇಕು: ಜೈನ ಸಾಧುಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ದಿಗಂಬರ ಜೈನರ ಆಗ್ರಹ

ಪ್ರಕರಣದಲ್ಲಿ ಉಗ್ರ ಸಂಘಟನೆ ಕೈವಾಡ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆಯಿಂದಲೇ ಸತ್ಯ ಹೊರಬೀಳಬೇಕು. ಪ್ರಕರಣ ಮುಚ್ಚುವಂತ ಪ್ರಯತ್ನ ಮಾಡಿದರೆ ಪೊಲೀಸ್ ಇಲಾಖೆಯನ್ನು ಬಿಡೋದಿಲ್ಲ. 6 ಲಕ್ಷ ತಗೊಂಡಿದಕ್ಕೆ ಕೊಲೆಯಾಗಿದೆ ಎಂದು ಹೇಳುತ್ತಿದ್ದಾರೆ. ರಾಜಕೀಯ ಪಕ್ಷಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಬಾರದು. ತನಿಖೆಗೆ ಮುಕ್ತ ಅವಕಾಶ ಕೊಡಬೇಕು. ರಾಜ್ಯ ಪೊಲೀಸರು ಸೂಕ್ತ ತನಿಖೆ ಮಾಡುತ್ತಾರೆ. ಅವರಿಗೆ ಆ ಅರ್ಹತೆ ಇದೆ ಎಂದರು.

ಕೊಳವೆ ಬಾವಿಯಲ್ಲಿ ಪತ್ತೆಯಾಗಿದ್ದ ಜೈನಮುನಿ ದೇಹ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಶ್ರೀ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಜು.6 ರಂದು ನಾಪತ್ತೆಯಾಗಿದ್ದರು. ಎರಡು ದಿನದ ಬಳಿಕ ಅವರ ದೇಹ ಕೊಳವೆ ಬಾವಿಯಲ್ಲಿ ತುಂಡು ತುಂಡಾಗಿ ಶವವಾಗಿ ಪತ್ತೆಯಾಗಿತ್ತು. ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ದೇಹ ಪತ್ತೆಯಾಗಿದ್ದು, ಹಂತಕರು ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಎಸೆದಿದ್ದರು.

ಇದನ್ನೂ ಓದಿ: ಜೈನಮುನಿ ದೇಹ ಕೊಳವೆ ಬಾವಿಯಲ್ಲಿ ಪತ್ತೆ: 9 ಭಾಗಗಳಾಗಿ ತುಂಡರಿಸಿ ಎಸೆದ ಹಂತಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.