ETV Bharat / state

ನೈಋತ್ಯ ರೈಲ್ವೆ ವಲಯದ ದ್ವಿಪಥ, ವಿದ್ಯುದ್ದೀಕರಣ ಕಾಮಗಾರಿ ಪೂರ್ಣ: ಟ್ರಯಲ್ ರನ್ ಯಶಸ್ವಿ

author img

By

Published : Apr 7, 2023, 5:12 PM IST

ನೈಋತ್ಯ ರೈಲ್ವೆ ವಲಯದ ದ್ವಿಪಥ ಕಾಮಗಾರಿ ಮುಕ್ತಾಯವಾಗಿದೆ. ಕೆಲವೇ ದಿನಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ.

railway
ನೈಋತ್ಯ ರೈಲ್ವೆ ವಲಯ ದ್ವೀಪಥ ಕಾಮಗಾರಿ ಮುಕ್ತಾಯ

ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ

ಹುಬ್ಬಳ್ಳಿ: ಸಾಕಷ್ಟು ಜನಪರ ಕಾರ್ಯಗಳು ಮಾತ್ರವಲ್ಲದೆ ಜನರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಗುರುತಿಸಿಕೊಂಡಿರುವ ನೈಋತ್ಯ ರೈಲ್ವೆ ವಲಯ ಇದೀಗ ಕಾಮಗಾರಿಗಳನ್ನು ಚುರುಕುಗೊಳಿಸುತ್ತಿದೆ. ಮಾತ್ರವಲ್ಲದೆ, ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ನೈಋತ್ಯ ರೈಲ್ವೆ ವಲಯದ ದ್ವಿಪಥ ಕಾಮಗಾರಿ, ಎಲೆಕ್ಟ್ರಿಫಿಕೇಶನ್ ಹಾಗು ಇಂಟರ್ ಲಾಕಿಂಗ್ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರ ಸೇವೆಗೆ ಮುಕ್ತವಾಗಲು ದಿನಗಣನೆ ಆರಂಭವಾಗಿದೆ.

ಈ ನಿಟ್ಟಿನಲ್ಲಿ ಪ್ರತಿ ಗಂಟೆಗೆ 130 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಅಳವಡಿಸುವ ಮೂಲಕ ಜನರಿಗೆ ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ- ಮೈಸೂರು, ಹುಬ್ಬಳ್ಳಿ-ಬೆಳಗಾವಿ, ಹುಬ್ಬಳ್ಳಿ-ದೆಹಲಿ ಸೇರಿದಂತೆ ಹಲವಾರು ಮಾರ್ಗಗಳಲ್ಲಿ ಶೀಘ್ರಗತಿಯಲ್ಲಿ ಪ್ರಯಾಣ ಮಾಡಬಹುದು. ಅಲ್ಲದೇ ಹುಬ್ಬಳ್ಳಿ-ಬೆಂಗಳೂರು ಮಾರ್ಗಮಧ್ಯದಲ್ಲಿನ ಹಾವೇರಿಯ ನಿಲ್ದಾಣದಲ್ಲಿ ಜನಶತಾಬ್ದಿ ರೈಲು ಸಂಚರಿಸಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಖುಷಿ ವ್ಯಕ್ತಪಡಿಸಿದರು.

ಈಗಾಗಲೇ ಹುಬ್ಬಳ್ಳಿ-ಬೆಂಗಳೂರು ಮಾರ್ಗ ಮಧ್ಯದಲ್ಲಿ ದ್ವಿಪಥ ಕಾಮಗಾರಿ ಪೂರ್ಣಗೊಂಡಿದ್ದು, ಸ್ವಲ್ಪ ಪ್ರಮಾಣದ ವಿದ್ಯುದ್ದೀಕರಣ ಕಾಮಗಾರಿ ಬಾಕಿ ಇದೆ. ಹೀಗಿರುವಾಗಲೇ ನೈಋತ್ಯ ರೈಲ್ವೆ ವಲಯ ಟ್ರಯಲ್ ರನ್ ಕೂಡ ಮಾಡಿದ್ದು, ಪ್ರತಿ ಗಂಟೆಗೆ ರೈಲು 130 ಕಿಲೋ ಮೀಟರ್ ಓಡುವ ಬಗ್ಗೆ ಪ್ರಾಯೋಗಿಕ ಕಾರ್ಯಾಚರಣೆ ಕೂಡ ಮಾಡಿದೆ. ಈಗಾಗಲೇ ಇಂಧನ ಉಳಿಸುವ ಮೂಲಕ ಪರಿಸರ ಸ್ನೇಹಿಯಾಗಿದ್ದ ನೈಋತ್ಯ ರೈಲ್ವೆ ಈಗ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ.

ಡೆಮು ವಿಶೇಷ ರೈಲುಗಳ ಸೇವೆ ವಿಸ್ತರಣೆ:

1. ಈ ಮೊದಲು ಏಪ್ರಿಲ್​ 15 ರವರೆಗೆ ಓಡಿಸಲು ಸೂಚಿಸಲಾಗಿದ್ದ ಬಳ್ಳಾರಿ ಮತ್ತು ಹರಿಹರ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07395/ 07396 ಡೆಮು ವಿಶೇಷ ರೈಲುಗಳ ಸೇವೆಯನ್ನು 2023ರ ಏಪ್ರಿಲ್ 17ರಿಂದ ಅಕ್ಟೋಬರ್ 14ರವರೆಗೆ ವಿಸ್ತರಿಸಲಾಗುತ್ತಿದೆ.

2. ಬಳ್ಳಾರಿ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07397/ 07398 ಡೆಮು ವಿಶೇಷ ರೈಲುಗಳ ಸೇವೆಯನ್ನು ಈ ಮೊದಲು ಏಪ್ರಿಲ್ 15 ರವರೆಗೆ ಓಡಿಸಲು ತಿಳಿಸಲಾಗಿತ್ತು. ಇದೀಗ 2023ರ ಏಪ್ರಿಲ್ 17 ರಿಂದ ಅಕ್ಟೋಬರ್ 14ರವರೆಗೆ ವಿಸ್ತರಿಸಲಾಗುತ್ತಿದೆ.

3. ಹೊಸಪೇಟೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07393 ಡೆಮು ವಿಶೇಷ ರೈಲು ಸೇವೆಯನ್ನು 2023ರ ಏಪ್ರಿಲ್ 22ರಿಂದ ಅಕ್ಟೋಬರ್ 14ರವರೆಗೆ ವಿಸ್ತರಿಸಲಾಗುತ್ತಿದೆ.

4. ಏಪ್ರಿಲ್​ 9 ರವರೆಗೆ ಓಡಿಸಲು ಸೂಚಿಸಲಾಗಿದ್ದ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ಸಂಚರಿಸುವ ರೈಲು ಸಂಖ್ಯೆ 07394 ಡೆಮು ವಿಶೇಷ ರೈಲು ಸೇವೆಯನ್ನು 2023ರ ಏಪ್ರಿಲ್ 16ರಿಂದ ಅಕ್ಟೋಬರ್ 8 ರವರೆಗೆ ವಿಸ್ತರಿಸಲಾಗುತ್ತಿದೆ.

ಇಷ್ಟೆಲ್ಲ ಬದಲಾವಣೆ ಮಾಡಿದರೂ ರೈಲು ಸೇವೆಗಳಲ್ಲಿನ ದಿನ, ವೇಳಾಪಟ್ಟಿ ಮತ್ತು ದರಗಳಲ್ಲಿ ಬೇರೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ನೈರುತ್ಯ ರೈಲ್ವೇ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್​ ಹೆಗಡೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಸಮಯಪ್ರಜ್ಞೆ ತೋರಿ ಅವಘಡ ತಪ್ಪಿಸಿದ ಮೂವರು ರೈಲ್ವೇ ಸಿಬ್ಬಂದಿಗೆ ಸನ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.