ETV Bharat / state

ಹಳ್ಳದಲ್ಲಿ ಹಾವುಗಳ ಸರಸ ಸಲ್ಲಾಪ: ವಿಡಿಯೋ

author img

By

Published : Jun 30, 2021, 2:18 PM IST

ಅಲ್ಲಾಪುರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಎರಡು ಹಾವುಗಳು ಸರಸ ಸಲ್ಲಾಪ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

Snakes mating in public place in Hubli
ಹಾವುಗಳ ಸರಸ ಸಲ್ಲಾಪ

ಹುಬ್ಬಳ್ಳಿ: ಮಳೆಗಾಲ ಪ್ರಾರಂಭವಾಗಿ ಕೆರೆ, ಹಳ್ಳ, ಕೊಳ್ಳ ತುಂಬಿ ಹರಿಯುತ್ತಿದ್ದರೆ ಪ್ರಾಣಿ ಸಂಕುಲಕ್ಕೆ ಎಲ್ಲಿಲ್ಲದ ಸಂತೋಷ. ಮನುಷ್ಯನಿಗಿಂತ ಕಾಡು ಪ್ರಾಣಿ, ಪಕ್ಷಿಗಳಿಗಂತೂ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ಅಂಥದ್ದೇ ಒಂದು ಘಟನೆ ಅಲ್ಲಾಪೂರ ಗ್ರಾಮದ ಹಳ್ಳದಲ್ಲಿ ನಡೆದಿದೆ.

ಹಾವುಗಳ ಸರಸ ಸಲ್ಲಾಪ

ಮಳೆಗೆ ಅಲ್ಲಾಪುರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಎರಡು ಹಾವುಗಳು ಸಲ್ಲಾಪ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಹಾವುಗಳು ಸಾಮಾನ್ಯವಾಗಿ ಬಯಲು ಪ್ರದೇಶ ಹಾಗೂ ಮರಗಳ ಮೇಲೆ ಸರಸ ಸಲ್ಲಾಪ ಆಡುತ್ತವೆ‌. ಆದರೆ ಇಲ್ಲಿ ಹಾವುಗಳು ನೀರಿನಲ್ಲಿ ಈಜಾಡುವ ಮೂಲಕ ಸಲ್ಲಾಪದಲ್ಲಿ ತೊಡಗಿದ್ದು ಜನರ ಕುತೂಹಲಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ : ಅನ್ನ, ಆಹಾರವಿಲ್ಲದೇ ಕಲಘಟಗಿಯ ದಟ್ಟ ಕಾಡಿನಲ್ಲಿ ನಾಲ್ಕು ದಿನ ಕಳೆದು ಬಂದ 114ರ ಅಜ್ಜ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.