ETV Bharat / state

ಪೇ ಸಿಎಂ ಮಾದರಿ ಪೇ ಮೇಯರ್ ಸದ್ದು: ವಾಣಿಜ್ಯ ನಗರಿಯ ಗೋಡೆಗಳ ಮೇಲೆ ರಾರಾಜಿಸುತ್ತಿವೆ ಪೋಸ್ಟರ್

author img

By

Published : Sep 28, 2022, 3:38 PM IST

ಪೇ ಮೇಯರ್ ಆಂದೋಲನ
ಪೇ ಮೇಯರ್ ಆಂದೋಲನ

ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು‌. ಆದರೆ ಈಗ ಅಭಿಯಾನ ಪೋಸ್ಟರ್ ರೂಪ ಪಡೆದುಕೊಂಡಿದ್ದು, ಹುಬ್ಬಳ್ಳಿ ನಗರ ಪ್ರಮುಖ ಬೀದಿಗಳು ಹಾಗೂ ಗೋಡೆಗಳ ಮೇಲೆ ಪೋಸ್ಟರ್ ಹಚ್ಚುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ.

ಹುಬ್ಬಳ್ಳಿ: ದೇಶಾದ್ಯಂತ ಪೇ ಸಿಎಂ ಪೋಸ್ಟರ್​ಗಳು ಸಾಕಷ್ಟು ಸುದ್ದಿ ಮಾಡಿದ್ದವು‌. ಅದೇ ಮಾದರಿಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈಗ ಪೇ ಮೇಯರ್ ಪೋಸ್ಟರ್ ಅಭಿಯಾನ ಜೋರಾಗಿದೆ.

ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು‌. ಆದರೆ ಈಗ ಅಭಿಯಾನ ಪೋಸ್ಟರ್ ರೂಪ ಪಡೆದುಕೊಂಡಿದ್ದು, ನಗರದ ಪ್ರಮುಖ ಬೀದಿಗಳು ಹಾಗೂ ಗೋಡೆಗಳ ಮೇಲೆ ಪೋಸ್ಟರ್ ಹಚ್ಚುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ.

ಮೇಯರ್​ ಈರೇಶ ಅಂಚಟಗೇರಿಯವರು ಮಾತನಾಡಿದರು

ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು ವೆಚ್ಚ ಮಾಡಿದ್ದಕ್ಕೆ ಪೇ ಮೇಯರ್ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ನಾಯಕ ರಜತ್ ಉಳ್ಳಾಗಡ್ಡಿಮಠ ಅವರು, ಮೇಯರ್ ವಿರುದ್ದ ವಾಗ್ದಾಳಿ ನಡೆಸಿದರು. ನಗರ ರಸ್ತೆ ದುರಸ್ತಿಗೆ ಹಣವಿಲ್ಲ ಎನ್ನುವ ಮೇಯರ್ ಈರೇಶ ಅಂಚಟಗೇರಿ ಅವರು ಪೌರ ಸನ್ಮಾನ‌ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ಪೆಂಡಾಲ್ ಹಾಕಿದ ನಂತರ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ಮೇಯರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪೇ ಸಿಎಂ ಬೆನ್ನಲ್ಲೇ ಪೇ ಮೇಯರ್: ಸಾಮಾಜಿಕ ಜಾಲತಾಣದಲ್ಲಿ ವೈರಲ್.. ದೇಶಾದ್ಯಂತ ಪೇಸಿಎಂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.‌ ಇದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ಮಾದರಿಯಲ್ಲಿಯೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಬೆಂಗಳೂರು ಪೇ ಮೇಯರ್ ಅಭಿಯಾನ ಆರಂಭವಾಗಿದೆ.

ಹೌದು. .ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇಯರ್ ಈರೇಶ್ ಅಂಚಟಗೇರಿ ವಿರುದ್ದ ಪೇ ಮೇಯರ್ ಅಭಿಯಾನ ಸದ್ದು ಮಾಡಿದೆ.

ಹು - ಧಾ ಪೇ ಮೇಯರ್ ಅಭಿಯಾನದ ಹಿನ್ನೆಲೆ ಮೇಯರ್ ಈರೇಶ ಅಂಚಟಗೇರಿ ಪ್ರತಿಕ್ರಿಯೆ ನೀಡಿದ್ದು, ಅವರು ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೂರೆ ಅವರ ವಾಟ್ಸ್​ಆ್ಯಪ್​​ನಿಂದ ಅದು ಬಂತು. ಪೇಸ್ ಬುಕ್​ನಲ್ಲಿ ಕೂಡ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಹಾಗೂ ಮಂಜುನಾಥ ನಡಟ್ಟಿ ಎನ್ನುವವರು ಹಾಕಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಷ್ಟ್ರಪತಿ ಕಾರ್ಯಾಲಯದಿಂದ ತನಿಖೆ ಮಾಡಬೇಕು: ಸದ್ಯಕ್ಕೆ ಪೊಲೀಸ್ ಆಯುಕ್ತರಿಗೆ ಅದನ್ನು ನಾನು ಕಳುಹಿಸಿದ್ದೇನೆ. ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದ್ದೇನೆ. ನನ್ನ ಮೇಲೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ದುಂದುವೆಚ್ಚ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅದನ್ನು ರಾಷ್ಟ್ರಪತಿ ಕಾರ್ಯಾಲಯದಿಂದ ತನಿಖೆ ಮಾಡಬೇಕು ಎಂದು ಆಗ್ರಹ ಮಾಡುತ್ತೇನೆ ಎಂದು ಹು - ಧಾ ಪಾಲಿಕೆ ಮೇಯರ್ ಈರೇಶ ಅಂಚಟಗೇರಿಯವರು ತಿಳಿಸಿದರು.

ಈ ಬಗ್ಗೆ ನಾನು ರಾಷ್ಟ್ರಪತಿ ಕಾರ್ಯಾಲಯಕ್ಕೆ ಪತ್ರ ಬರೆಯುತ್ತೇನೆ. ರಾಷ್ಟ್ರಪತಿ ಕಾರ್ಯಕ್ರಮ ಹೇಗೆ ನಡೆಯಬೇಕು ಎನ್ನುವುದು ಅವರ ಕಾರ್ಯಾಲಯದಿಂದ ಬಂದಿದೆ. ಅದೇ ರೀತಿ ನಾವು ಕಾರ್ಯಕ್ರಮ ಮಾಡಿದ್ದೇವೆ. ಕಾರ್ಯಕ್ರಮದಲ್ಲಿ ಹೂವಿನ ಗುಚ್ಚ ಸಹ ನೀಡಿಲ್ಲ. ಅಲ್ಲಿನ ನಿಯಮಗಳನ್ನು ಫಾಲೋ ಮಾಡಲಾಗಿದೆ ಎಂದು ವಿವರಿಸಿದರು.

ತುರ್ತಾಗಿ ಕಾರ್ಯಕ್ರಮ ಬಂದಿದ್ದಕ್ಕೆ ನಿರ್ಮಿತಿ ಕೇಂದ್ರದಿಂದ ಕಾರ್ಯಕ್ರಮದ ಎಲ್ಲ ಕೆಲಸ ಮಾಡಿಸಲಾಗಿದೆ‌. ನಮ್ಮ ಕೈಯಲ್ಲಿ ಖರ್ಚು ವೆಚ್ಚದ ಯಾವುದೇ ಜವಾಬ್ದಾರಿ ಇರಲಿಲ್ಲ. ಕೇವಲ ರಾಜಕೀಯಕ್ಕೋಸ್ಕರ ರಾಷ್ಟ್ರಪತಿಗಳನ್ನು ಎಳೆದದ್ದು ಸರಿಯಲ್ಲ. ರಾಷ್ಟ್ರಪತಿಗಳು ಪಕ್ಷಾತೀತರಾಗಿದ್ದಾರೆ. ಇನ್ನು ಕಾರ್ಯಕ್ರಮ ಮುಗಿದು 24 ಗಂಟೆ ಆಗಿಲ್ಲ, ಆಗಲೇ ರಾಜಕೀಯ ಲಾಭಕ್ಕೆ ಈ ರೀತಿ ಮಾಡಿದ್ದು ಸರಿಯಲ್ಲ. ಮೂವರ ಮೇಲೆ ಕ್ರಮಕ್ಕಾಗಿ ಪೊಲೀಸ್ ಆಯುಕ್ತರಿಗೆ ಹಾಗೂ ಪಾಲಿಕೆ ಆಯುಕ್ತರಿಗೆ ಆಗ್ರಹಿಸಿದ್ದೇನೆ ಎಂದರು.

ಓದಿ: ಪೇಸಿಎಂ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ‌ ವಿರುದ್ಧ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.