ETV Bharat / state

ಹುಬ್ಬಳ್ಳಿ-ದೆಹಲಿ ವಿಮಾನದಲ್ಲಿ ಉತ್ತರಕರ್ನಾಟಕ ಭಾಷಾ ಸೊಗಡು: ಪೈಲಟ್​ ಅನೌನ್ಸ್​ಮೆಂಟ್​ ವಿಡಿಯೋ ವೈರಲ್

author img

By

Published : Nov 15, 2022, 12:53 PM IST

ಹುಬ್ಬಳ್ಳಿಯಿಂದ ದೆಹಲಿಗೆ ಸೋಮವಾರದಿಂದ ವಿಮಾನಯಾನ ಸೇವೆ ಪುನಾರಂಭ ಆಗಿದೆ. ಈ ವೇಳೆ ವಿಮಾನದಲ್ಲಿ ಫ್ಲೈಟ್‌ ಅನೌನ್ಸ್‌ಮೆಂಟ್​ನನ್ನು ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಆಗಿರುವುದು ವಿಶೇಷವಾಗಿದೆ.

ಹುಬ್ಬಳ್ಳಿ ದೆಹಲಿ ವಿಮಾನದಲ್ಲಿ ಉತ್ತರಕರ್ನಾಟಕ ಭಾಷಾ ಸೊಗಡು
ಹುಬ್ಬಳ್ಳಿ ದೆಹಲಿ ವಿಮಾನದಲ್ಲಿ ಉತ್ತರಕರ್ನಾಟಕ ಭಾಷಾ ಸೊಗಡು

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಿದೆ. ಈ ವಿಮಾನದಲ್ಲಿ ಉತ್ತರ ಕರ್ನಾಟಕ ಭಾಷೆ ಕಂಪು ಸೂಸಿದೆ. ಫ್ಲೈಟ್‌ ಅನೌನ್ಸ್‌ಮೆಂಟ್​ಅನ್ನು ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾಡಿರುವುದು ತುಂಬಾ ವಿಶೇಷವಾಗಿದೆ.

ವಿಮಾನದಲ್ಲಿ ಭಾಷಾ ಸೊಗಡು: ಮೊದಲ ದಿನವೇ ಅಚ್ಚ ಕನ್ನಡದಲ್ಲಿ,"ಎಲ್ಲರಿಗೂ ನಮಸ್ಕಾರ್​ ರೀ..ಶರಣು, ನಾನು ಅಕ್ಷಯ್​ ಪಾಟೀಲ್​.. ಇಲ್ಲೇ ಬೈಲಹೊಂಗಲದವ"! ಎಂದು ಪೈಲಟ್​ ಉತ್ತರ ಕರ್ನಾಟಕ ಭಾಷೆಯಲ್ಲಿ ಅನೌನ್ಸ್ ಮಾಡಿದ್ದಾರೆ. ವಿಮಾನಗಳ ಹಾರಾಟಕ್ಕೂ ಮೊದಲು ಇಂಗ್ಲಿಷ್​​ ಅಥವಾ ಹಿಂದಿಯಲ್ಲಿ ಸೂಚನೆಗಳನ್ನು ನೀಡಲಾಗುತ್ತಿತ್ತು. ಅಂತದರಲ್ಲಿ ಕನ್ನಡ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ಕೇಳುವುದು ಸಾಧ್ಯವಿರಲಿಲ್ಲ. ಬೈಲಹೊಂಗಲದ ಅಕ್ಷಯ ಪಾಟೀಲ್​ ಇಂಡಿಗೋ ವಿಮಾನದ ಪೈಲಟ್ ಆಗಿದ್ದು, ತಮ್ಮ ಕನ್ನಡಾಭಿಮಾನವನ್ನು ಮೆರೆದಿದ್ದಾರೆ.

  • ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು

    ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್‌ ಅನೌನ್ಸ್‌ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದ ವಿಶೇಷ. @IndiGo6E pic.twitter.com/WlrpmR6nSQ

    — Pralhad Joshi (@JoshiPralhad) November 14, 2022 " class="align-text-top noRightClick twitterSection" data=" ">

ಪೈಲಟ್ ಅಕ್ಷಯ್ ಪಾಟೀಲ್ ಕನ್ನಡದಲ್ಲಿ ಮಾತನಾಡುವ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಶೇರ್ ಮಾಡಿದ್ದಾರೆ. ಜೊತೆಗೆ ಹುಬ್ಬಳ್ಳಿ-ದೆಹಲಿ ವಿಮಾನಯಾನಕ್ಕೆ ಕಾರಣರಾದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರಿಗೂ ಪೈಲಟ್​ ಅಭಿನಂದಿಸಿದರು. ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ ಎಂದು ಅಕ್ಷಯ್​ ಹೇಳಿದ್ರು.

ಇದನ್ನೂ ಓದಿ: ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಪುನಾರಂಭ.. ಕೇಂದ್ರ ಸಚಿವ ಜೋಶಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.