ETV Bharat / state

ರಾಷ್ಟ್ರೀಯ ಯುವಜನೋತ್ಸವ: ಯುವಜನರ ಮನಗೆದ್ದ ಆರ್ಮಿ ಗನ್ ಪ್ರದರ್ಶನ: ದೇಶಿ ಕ್ರೀಡೆಗಳ ಅಬ್ಬರ

author img

By

Published : Jan 13, 2023, 11:04 PM IST

Updated : Jan 14, 2023, 2:30 PM IST

ಹುಬ್ಬಳ್ಳಿ ಧಾರವಾಡದಲ್ಲಿ ಯುವಜನೋತ್ಸವ - ಯುವಜನರ ಮನಗೆದ್ದ ಆರ್ಮಿ ಗನ್ ಪ್ರದರ್ಶನ - ವಿವಿಧ ದೇಶದ ಗನ್​ ರೈಫಲ್ಸ್​​ಗಳ ಅರಿವು ಮೂಡಿಸಿದ ಸೈನಿಕರು - ಜನಮನ ಸೆಳೆದ ದೇಶಿ ಕ್ರೀಡೆಗಳು

army gun show
ಯುವಜನರ ಮನಗೆದ್ದ ಆರ್ಮಿ ಗನ್ ಪ್ರದರ್ಶನ
ಯುವಜನರ ಮನಗೆದ್ದ ಆರ್ಮಿ ಗನ್ ಪ್ರದರ್ಶನ

ಧಾರವಾಡ:ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಹುಬ್ಬಳ್ಳಿಯಲ್ಲಿ ನಿನ್ನೆ ಚಾಲನೆ ನೀಡಿದರು. ಯುವಜನೋತ್ಸವ ಪ್ರಯುಕ್ತ ಶುಕ್ರವಾರ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ವಿದ್ಯಾಕಾಶಿ ಧಾರವಾಡದಲ್ಲಿ ಇಂದು ಯುವಜನೋತ್ಸವದಲ್ಲಿ ಆರ್ಮಿ ವತಿಯಿಂದ ಆಯೋಜಿಸಿದ ಗನ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಒಂದಕ್ಕೊಂದು ಹೀಗೆ ಜೋಡಿಸಿಟ್ಟಿರುವ ಗನ್​​​​ಗಳು, ಶಸ್ತ್ರಸಜ್ಜಿತವಾಗಿ ನಿಂತಿರುವ ಯೋಧರು, ಕುತೂಹಲದಿಂದ ಕೇಳುತ್ತಿರುವ ಯುವಜನತೆ ಇವೆಲ್ಲ ದೃಶ್ಯಗಳಿಗೆ ಇಂದು ಕರ್ನಾಟಕ ಕಲಾ ಮಹಾವಿದ್ಯಾಲಯ ಸಾಕ್ಷಿಯಾಯಿತು. ಒಂದು ಕಡೆ ನಾನಾ ಬಗೆಯ ಸಂಸ್ಕೃತಿ ಜತೆಗೆ ಯುವಕರಲ್ಲಿ ದೇಶಭಕ್ತಿ ಹುಟ್ಟಿಸುವ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಯೋಧರು ಉಪಯೋಗಿಸುವ ರೈಪಲ್ಸ್ ಗಳ ಬಗ್ಗೆ ಸಹ ಯುವಜನೋತ್ಸವದಲ್ಲಿ ಮಾಹಿತಿ ನೀಡಲಾಗುತ್ತಿತ್ತು. ಈ ಒಂದು ಕೇಂದ್ರ ಎಲ್ಲರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
ವಿವಿಧ ರಾಜ್ಯಗಳಿಂದ ಬಂದಂಥ ಯುವಕ ಯುವತಿಯರಿಗೆ ದೇಶದ ಭದ್ರತೆ ಬಗ್ಗೆ ಹಾಗೂ ಸೈನಿಕರು ಬಳಸುವ ಗನ್ ಗಳ ಬಗ್ಗೆ ವಿಶೇಷವಾಗಿ ಮಾಹಿತಿಯನ್ನ ನೀಡಲಾಯಿತು. ಇದರಿಂದ ಯುವಕರು ದೇಶದ ಆಧುನಿಕ ಶಕ್ತಿ ಜತೆಗೆ ನಾವೆಷ್ಟು ಬಲಾಢ್ಯ ಅನ್ನೋ ಬಗ್ಗೆ ಅರಿವು ಮುಡಿಸಲಾಗುತ್ತಿದೆ.

ಇನ್ನು ವಿಶೇಷವಾಗಿ ವಿವಿಧ ಗನ್ ಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ರಷ್ಯಾ ತಯಾರಿಸುವ ಹಳೆಯದಾದ ಎಕೆ 47 ನಿಂದ ಹಿಡಿದು ಅಮೆರಿಕಾ ತಯಾರಿಸಿರುವ 716 ಅಸಲ್ಟ್ ಆರ್ ಐ ಎಫ್, ಭಾರತ ತಯಾರಿಸಿರೋ 5.56 ಎಂ ಎಂ ಬುಲೆಟ್ ನ ಇನ್ಸಾಸ್ ಹಾಗೂ ಇಸ್ರೇಲ್ ನ ನೆಗ್ಯೂವ್ ಎಲ್ ಎಂ ಜಿ ಸೇರಿ ಸ್ವಿಡ್ಜರ್ ಲಾಂಡ್ ನ ಎಸ್ ಎಂ ಜಿ ಮತ್ತು ರಷ್ಯಾದ ಡ್ರಾಗ್ಯೂನೋವ್ ಎನ್ನುವ ಸ್ಪೈಪರ್ ಹಾಗೂ ಸ್ವೀಡನ್ ದೇಶ ತಯಾರಿಸಿರೋ ಲಾಂಚರ್ ಎಲ್ಲರ ಗಮನ ಸೆಳೆದವು. ಇದರಿಂದ ಬೇರೆ ಬೇರೆ ಕಡೆಯಿಂದ ಬಂದಿರೋ ಯುವಕ ಯುವತಿಯರು ಗನ್ ಗಳನ್ನು ನೋಡಿ ಫುಲ್ ಖುಷ್ ಆದ್ರು.

ಜನಮನ ಸೆಳೆದ ದೇಶಿ ಕ್ರೀಡೆಗಳು: 26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಯುವಜನರಿಗೆ ದೇಶಿ ಕ್ರೀಡೆ ಪ್ರದರ್ಶನ ಜನ ಮನ ಸೆಳೆಯಿತು. ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ದೇಶಿ ಕ್ರೀಡೆಗಳ ಪ್ರದರ್ಶನಕ್ಕೆ ಶಾಸಕ ಅಮೃತ ದೇಸಾಯಿ ಅವರು ಚಾಲನೆ ನೀಡಿದರು. ಪಂಜಾಬ್​ ರಾಜ್ಯದ ದೇಶಿ ಕ್ರೀಡೆಯಾದ ಮಾರ್ಷಲ್ ಆಟ್ರ್ಸ್ ಗಟ್ಕಾ ಪ್ರದರ್ಶನವು ಪಂಜಾಬಿ ಶೈಲಿಯದ್ದಾಗಿದ್ದು ಗಟ್ಕಾ ಕಲೆಯೊಂದು ಯುದ್ದ ಕಲೆ. ಜನಮನವನ್ನು ಆಕರ್ಷಿಸುವಲ್ಲಿ ಜಯ ಕಂಡಿತು.ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಿಂದ ಮಲ್ಲಕಂಬ, ತೆಲಂಗಾಣದ ಕಬ್ಬಡ್ಡಿ, ಮಣಿಪುರದ ಮುಕ್ನಾ ತಂಗ್ಯಾ, ಅಸ್ಸೋಂ ರಾಜ್ಯದ ಬೊಮ್ಲೆನೈ, ಆಂಧ್ರ ರಾಜ್ಯದಿಂದ ಕರ ಸಾನ ಹಾಗೂ ಕಟ್ಟಿ ಸಾಮ್, ತಮಿಳುನಾಡಿನ ಸಿಲಂಬನ್, ಜಮ್ಮು ಕಾಶ್ಮೀರ ರಾಜ್ಯದ ಕಬ್ಬಡ್ಡಿ, ಸೇರಿದಂತೆ ವಿವಿಧ ರಾಜ್ಯಗಳ ದೇಸಿ ಕ್ರೀಡೆ, ಲಗೋರಿ, ಚಿನ್ನಿದಾಂಡು, ಗೋಲಿ ಕ್ರೀಡೆಗಳು ಅದ್ಬುತವಾಗಿ ಪ್ರದರ್ಶನ ಕಂಡವು.

ಇದನ್ನೂಓದಿ:ಹಾಕಿ ವಿಶ್ವಕಪ್​: ಭಾರತದ ಮುಂದೆ ಮಂಡಿಯೂರಿದ ಸ್ಪೇನ್: 2-0 ಗೋಲ್​ಗಳಿಂದ ಗೆಲುವು​

Last Updated : Jan 14, 2023, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.