ETV Bharat / state

ಹುಬ್ಬಳ್ಳಿ ಮೂಲದ ಉದ್ಯಮಿ ಖಾತೆಯಿಂದ ಅಕ್ರಮ ಹಣ ವರ್ಗಾವಣೆ: ದೂರು ದಾಖಲು

author img

By

Published : Jul 2, 2020, 12:52 PM IST

Illegal money transfer
ಹುಬ್ಬಳ್ಳಿ ಮೂಲದ ಉದ್ಯಮಿ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ: ದೂರು ದಾಖಲು

ಹುಬ್ಬಳ್ಳಿ ಮೂಲದ ಉದ್ಯಮಿ ಅಮೀರ್‌ ಹಮ್ಜಾ ಶೇಖ್‌ ಎಂಬುವವರ ಎಸ್‌ಬಿಐ ಖಾತೆಯಿಂದ ಅಕ್ರಮವಾಗಿ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಗೋಕುಲ ರಸ್ತೆ ನೆಹರೂ ನಗರದಲ್ಲಿರುವ ಎಸ್‌ಬಿಐ ಶಾಖೆಯ ಸಹಾಯಕ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ.

ಹುಬ್ಬಳ್ಳಿ: ಕೆನಡಾದಲ್ಲಿ ವಾಸವಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಮೀರ್‌ ಹಮ್ಜಾ ಶೇಖ್‌ ಅವರ ಎಸ್‌ಬಿಐ ಖಾತೆಯಿಂದ ಅಕ್ರಮವಾಗಿ 17.21ಲಕ್ಷ ರೂ. ಬೇರೆಯವರ ಖಾತೆಗಳಿಗೆ ವರ್ಗಾವಣೆ ಮಾಡಿದ ಆರೋಪದ ಮೇಲೆ ಇಲ್ಲಿನ ಗೋಕುಲ ರಸ್ತೆ ನೆಹರೂ ನಗರದಲ್ಲಿರುವ ಎಸ್‌ಬಿಐ ಶಾಖೆಯ ಸಹಾಯಕ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ.

2018 ಆಗಸ್ಟ್‌ 4ರಿಂದ 2019 ಮೇ 6ರವರೆಗೆ ಹಂತ ಹಂತವಾಗಿ 8 ಮಂದಿಯ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ಮೊಹಮ್ಮದ್‌ ಅಜರುದ್ದೀನ್‌ ಅವರು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಜವಾಬ್ದಾರಿ ವಹಿಸಿದ್ದರು. ಈ ವ್ಯವಸ್ಥೆಯಡಿ ಗ್ರಾಹಕರ ಒಪ್ಪಿಗೆ ಪಡೆದೇ ಹಣ ವರ್ಗಾವಣೆ ಮಾಡುವ ಅಧಿಕಾರ ನೀಡಲಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಗ್ರಾಹಕರ ಅನುಮತಿ ಇಲ್ಲದೇ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.

2018 ಆಗಸ್ಟ್‌ 4ರಂದು ಅಮ್ರೀನ್‌ ಮೊಹಮದ್‌ ಅಜರುದ್ದೀನ್‌ ಮನಿಯಾರ್‌ ಎಂಬುವರ ಖಾತೆಗೆ 1.90 ಲಕ್ಷ ರೂ, 2018 ಆಗಸ್ಟ್‌ 16ರಂದು ರಮೇಶ್‌ ಡಿ.ಅರಟ್ಟಿ ಖಾತೆಗೆ 2 ಲಕ್ಷ ರೂ., 2018 ಅಕ್ಟೋಬರ್‌ 11ರಂದು ರುದ್ರಗೌಡ ಸಿದ್ದನಗೌಡ ಪಾಟೀಲರ ಖಾತೆಗೆ 6 ಲಕ್ಷ ರೂ., 2019 ಫೆಬ್ರುವರಿ 2ರಂದು ಶಾರದಾ ಹೊಸಮನಿ ಅವರ ಖಾತೆಗೆ 2.31, ಲಕ್ಷ ರೂ., ಮಾರ್ಚ್‌ 20 ರಂದು ಸಲೀಂ ಮಕ್ತುಮ್‌ ಹುಸೇನ್‌ ಮನಿಯಾರ್‌ ಖಾತೆಗೆ 50 ಸಾವಿರ ರೂ., ಅದೇ ದಿನ ಹುಸೇನ್‌ ಸಾಬ್‌ ನಾಲಬಂದ ಖಾತೆಗೆ 2 ಲಕ್ಷ ರೂ., ಏಪ್ರಿಲ್‌ 22ರಂದು ಸಲೀಂ ಮುಕ್ತಮ್‌ ಹುಸೇನ್‌ ಮನಿಯಾರ್‌ ಖಾತೆಗೆ 1.50 ಲಕ್ಷ ರೂ. ಹಾಗೂ ಮೇ 6ರಂದು ರಮೇಶ್‌ ಡಿ.ಅರಟ್ಟಿ ಖಾತೆಗೆ 1 ಲಕ್ಷ ಸೇರಿ ಒಟ್ಟು 17,21,320 ರೂ. ವರ್ಗಾವಣೆಯಾಗಿದೆ.


ಬ್ಯಾಂಕ್‌ ವ್ಯವಸ್ಥಾಪಕರು ನೀಡಿರುವ ದೂರಿನ ಮೇರೆಗೆ ಗೋಕುಲ್ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.