ETV Bharat / state

18 ಷರತ್ತು ವಿಧಿಸಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕೊನೆಗೂ ಅನುಮತಿ

author img

By ETV Bharat Karnataka Team

Published : Sep 16, 2023, 7:17 AM IST

Updated : Sep 16, 2023, 11:28 AM IST

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ

Ganeshotsava in Idga ground:ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ 18 ಷರತ್ತು ಹಾಕುವ ಮೂಲಕ ಅನುಮತಿ ನೀಡಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯೆ

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ‌ಕೊನೆಗೂ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಅನುಮತಿ‌ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಎರಡು ದಿನ ಕಾಲ ನಿರಂತರ ಹೋರಾಟ ನಡೆಸಿತ್ತು. ಕೊನೆಗೂ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಷರತ್ತುಬದ್ಧ ಅನುಮತಿ ನೀಡಿದ್ದಾರೆ.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಲವು ಷರತ್ತುಗಳನ್ನು ಹಾಕಿ ಅನುಮತಿ ನೀಡಲಾಗಿದೆ. ಆ ಪ್ರಮಖ‌ ಷರತ್ತುಗಳು ಇಂತಿವೆ:

ಅನುಮತಿ ಕುರಿತು ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಪ್ರತಿಕ್ರಿಯೆ
  • ಕಡ್ಡಾಯವಾಗಿ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯಬೇಕು.
  • ಸೆ.19 ರಂದು ಬೆಳಗ್ಗೆ 6 ಗಂಟೆಯಿಂದ 21 ರಂದು ಮಧ್ಯಾಹ್ನ 12 ಗಂಟೆಯವರೆಗೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ.
  • 30x30 ಅಳತೆಯ ಪೆಂಡಾಲ್​​​​ಗೆ ಮಾತ್ರ ಅವಕಾಶ.
  • ಗಣೇಶ ಉತ್ಸವದ ಹೊರತಾಗಿ ಯಾವುದೇ ಬಾವುಟ, ಬಿತ್ತಪತ್ರ, ವಿವಾದಿತ ಫೋಟೋ ಪ್ರದರ್ಶನ ನಿಷೇಧ.
  • ಮನರಂಜನಾ ಕಾರ್ಯಕ್ರಮಗಳಿಗೂ ನಿಷೇಧ.
  • ಅನವಶ್ಯಕ ಗಲಭೆ, ಗಲಾಟೆಗಳಿಗೆ ಆಯೋಜಕರೆ ಹೊಣೆ.
  • ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಿಲ್ಲ.
  • ಪ್ರಚೋದನಕಾರಿ ಹೇಳಿಕೆ, ಭಾಷಣ ನಿಷೇಧ ಸೇರಿದಂತೆ 18 ಷರತ್ತುಗಳನ್ನು ಮಹಾನಗರ ಪಾಲಿಕೆ ವಿಧಿಸಿದೆ.

ಪಾಲಿಕೆ ನಿರ್ಧಾರಕ್ಕೆ ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಸ್ವಾಗತ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ಬೆನ್ನಲೇ ಪಾಲಿಕೆ ಕ್ರಮವನ್ನು ಶಾಸಕರಾದ ಮಹೇಶ ಟೆಂಗಿನಕಾಯಿ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಹಿಂಬಾಗಿಲಿನಿಂದ ಅಂಜುಮನ್ ಸಂಸ್ಥೆ ಮೂಲಕ ಕೋರ್ಟ್ ರೀಟ್ ಅರ್ಜಿ ಸಲ್ಲಿಸಿದೆ. ಕೊನೆ ಕ್ಷಣದಲ್ಲಿಯಾದರು ಸರ್ಕಾರ ಎಚ್ಚೆತ್ತುಕೊಂಡು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಮುಂದೆ ಕೂಡ ಹಿಂದೂ ಹಬ್ಬಗಳ ಆಚರಣೆಗೆ ಅಡೆತಡೆಗಳನ್ನು ಒಡ್ಡಬಾರದು. ನ್ಯಾಯಾಲಯ ಅತ್ಯುತ್ತಮ ತೀರ್ಪು ಕೊಟ್ಟಿದೆ, ನಮಗೆ ದೊಡ್ಡ ಜಯ ಸಿಕ್ಕಿದೆ.
ಈದ್ಗಾ ಮೈದಾನದಲ್ಲಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಆದೇಶ ಪ್ರಕಾರ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ -ಈಶ್ವರ ಉಳ್ಳಾಗಡ್ಡಿ: ಆಗಸ್ಟ್‌ 31 ರಂದು ನಡೆದ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡು ಠರಾವಿನ ಆದೇಶ ಪ್ರಕಾರ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. 3 ದಿನಗಳವರೆಗೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಕಾನೂನು ಸುವ್ಯವಸ್ಥೆಗಾಗಿ ನಾವು 18 ಷರತ್ತುಗಳನ್ನು ಹಾಕಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು. ಮಹಾನಗರ ಪಾಲಿಕೆಯಲ್ಲಿ ಅನುಮತಿ ನೀಡಿದ ಬಳಿಕ ಮಾತನಾಡಿದ ಅವರು, ಪೆಂಡಾಲ್ ಅಳತೆ ಸೇರಿದಂತೆ ಹಲವು ಷರತ್ತುಗಳನ್ನು ಹಾಕಲಾಗಿದೆ.

ಅನ್ಯ ಧರ್ಮದವರಿಗೆ ಧಕ್ಕೆ ಉಂಟು ಮಾಡದಂತೆ ಷರತ್ತುಗಳನ್ನು ಹಾಕಿದ್ದೇವೆ. ಸೆಕ್ಷನ್ 59 ಪ್ರಕಾರ ನಮಗೆ ಉಚಿತವಾಗಿ ಕೊಡಲು ಸಹ ಅವಕಾಶ ಇದೆ. ಯಾವುದೇ ಬಾಡಿಗೆ ಪಡೆಯದೆ ಈಗ ನಾವು ಒಂದು ವರ್ಷಕ್ಕೆ ಮಾತ್ರ ಅನುಮತಿ ಕೊಟ್ಟಿದ್ದೇವೆ. ನಮ್ಮ ಮೇಲೆ ಅನುಮತಿ ಕೊಡಬಾರದು ಅಂತ ಯಾರ ಒತ್ತಡವೂ ಇರಲಿಲ್ಲ. ನಾನು ಸ್ಪಷ್ಟ ಪಡಿಸುತ್ತಿದ್ದೇನೆ, ನಾವು ಅನುಮತಿ ನೀಡಬೇಕು ಅನ್ನೋಷ್ಟರಲ್ಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಾಗಿದ್ದರಿಂದ ಅನುಮತಿ ಕೊಡಲು ಆಗಲಿಲ್ಲ ಎಂದರು.

ಉಚ್ಚ ನ್ಯಾಯಾಲಯದ ನಿರ್ಧಾರಕ್ಕೆ ಕಾಯಬೇಕಿತ್ತು. ನಿನ್ನೆ(ಮೊನ್ನೆ) ಹೈಕೋರ್ಟ್​ನಿಂದ ವಿಚಾರಣೆ ಆಯ್ತು. ಇವತ್ತು(ನಿನ್ನೆ) 10:30ಕ್ಕೆ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ಆದ್ಯತೆ ನೀಡಿದ್ದಾರೆ. ಸೇಟಿಫೈಡ್ ಕಾಪಿ ನಮಗೆ ಸಿಗೋದು ತಡವಾದ್ದರಿಂದ ಅನುಮತಿ ನೀಡಲು ತಡವಾಯಿತು.‌ 19 ರಿಂದ ನಾವು ಅನುಮತಿ ನೀಡಿದ್ದೇವೆ. ಅದಕ್ಕಿಂತ ಮುಂಚೆ ಯಾವುದೇ ಪೂಜೆಗೂ ಅವಕಾಶ ಇಲ್ಲ. ಯಾವುದೇ ರೀತಿ ಒತ್ತಡ ಇಲ್ಲಾ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸೇರಿ ಕಾನೂನು ಸುವ್ಯವಸ್ಥೆಗಾಗಿ ಷರತ್ತು ಹಾಕ್ಕಿದ್ದೇವೆ. ಷರತ್ತಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಮಯವನ್ನು ಬದಲಾವಣೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮುಹೂರ್ತದ ಸಮಯವನ್ನು ಪೊಲೀಸ್​ ಆಯುಕ್ತರ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೆವೆ ಎಂದರು.

ಇದನ್ನೂ ಓದಿ: ಗಣೇಶ ಮೂರ್ತಿ ಪ್ರತಿಷ್ಠಾಪನೆ ಶತ ಸಿದ್ದ: ಶಾಸಕ ಅರವಿಂದ ಬೆಲ್ಲದ್​

Last Updated :Sep 16, 2023, 11:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.