ETV Bharat / state

ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರ ಸಾವಿನ ಶಂಕೆ!

author img

By

Published : Jul 23, 2022, 6:34 PM IST

Updated : Jul 23, 2022, 7:00 PM IST

ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದ ಮೊದಲ ಕ್ರಾಸ್​​ನಲ್ಲಿರುವ ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

fire broke out in a sparker manufacturing unit in Hubli
ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಢ

ಹುಬ್ಬಳ್ಳಿ(ಧಾರವಾಡ): ಸಭೆ ಸಮಾರಂಭಗಳಲ್ಲಿ ಬಳಸುವ ಸ್ಪಾರ್ಕರ್ ಸಾಮಗ್ರಿಗಳನ್ನು ತಯಾರಿಸುವ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ನಾಲ್ವರು ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯ ಹೊರವಲಯದಲ್ಲಿರುವ ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದ ಮೊದಲ ಕ್ರಾಸ್​​ನಲ್ಲಿ ಅವಘಡ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಆ್ಯಂಬುಲೆನ್ಸ್ ಆಗಮಿಸಿದ್ದು, ರಕ್ಷಣೆಗೆ ಮುಂದಾಗಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ, ಘಟನೆಗೆ ನಿಖರ ಕಾರಣಗಳ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಢ

ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ನಾಲ್ಕಕ್ಕೂ ಹೆಚ್ಚು ಜನರು ಅಗ್ನಿಗೆ ಆಹುತಿಯಾಗಿದ್ದಾರೆ ಎಂಬ ಮಾಹಿತಿಯಿದೆ.

ಇದನ್ನೂ ಓದಿ: ಆ ಮಹಾ ನಾಯಕನ ಮುಂದಿನ ರಾಜಕಾರಣಕ್ಕೆ ಇದು ಮುಳ್ಳಾಗುವಂತೆ ಮಾಡ್ತೇ‌ನೆ: ನವ್ಯಾಶ್ರೀ

Last Updated : Jul 23, 2022, 7:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.