ETV Bharat / state

ಹುಬ್ಬಳ್ಳಿ-ಧಾರವಾಡ ಚಿಗರಿ ಪಥದಲ್ಲಿ ಸಂಚರಿಸಲಿವೆ ಎಲೆಕ್ಟ್ರಿಕ್ ಬಸ್: ಪ್ರಾಯೋಗಿಕ ಚಾಲನೆ

author img

By

Published : Dec 11, 2020, 12:46 PM IST

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಪ್ರಾಯೋಗಿಕವಾಗಿ ಹುಬ್ಬಳ್ಳಿ–ಧಾರವಾಡ ನಡುವೆ ಎಲೆಕ್ಟ್ರಿಕ್‌ ಬಸ್‌ ಸಂಚಾರ ಪ್ರಾರಂಭವಾಗಿದೆ. ಸದ್ಯ ಈ ಬಸ್​​ಗಳ ಬಗೆಗೆ ಅಧ್ಯಯನ ನಡೆಯುತ್ತಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಈ ಬಸ್​ ಅನ್ನು 250 ಕಿ.ಮೀ. ಓಡಿಸಬಹುದಾಗಿದೆ. ಒಂದು ಬಸ್‌ಗೆ 1.9 ಕೋಟಿ ರೂ. ವೆಚ್ಚ ತಗಲುತ್ತದೆ.

electric bus will travel along the Chigari path in hubli
ಎಲೆಕ್ಟ್ರಿಕ್ ಬಸ್

ಹುಬ್ಬಳ್ಳಿ: ಹು-ಧಾ ಮಹಾನಗರದ ತ್ವರಿತ ಸಾರಿಗೆ ಸೇವೆ (ಬಿಆರ್‌ಟಿಎಸ್‌) ಸಂಸ್ಥೆಯು ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಗುರುವಾರದಿಂದ ಪ್ರಾಯೋಗಿಕವಾಗಿ ಹುಬ್ಬಳ್ಳಿ–ಧಾರವಾಡ ನಡುವೆ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಿಸಿದೆ.

electric bus will travel along the Chigari path in hubli
ಎಲೆಕ್ಟ್ರಿಕ್ ಬಸ್
ಗುರುವಾರದಿಂದ ಈ ಬಸ್​ ಸಂಚಾರ ಆರಂಭಗೊಂಡಿದ್ದು, ಇನ್ನೂ ಒಂದೆರಡು ದಿನಗಳ ಕಾಲ ಬಸ್‌ ಸಂಚರಿಸಲಿದೆ. ಬಸ್‌ ಬಗೆಗೆ ಅಧ್ಯಯನ ಮಾಡಲಾಗುತ್ತಿದ್ದು, ಒಂದು ಬಸ್‌ಗೆ 1.9 ಕೋಟಿ ರೂ. ವೆಚ್ಚ ತಗಲುತ್ತದೆ. ಹೈದರಾಬಾದ್‌ ಮೂಲದ ಓಲೆಕ್ಟ್ರಾ ಕಂಪನಿ ಈ ಬಸ್​ಗಳನ್ನು ಉತ್ಪಾದಿಸಿದೆ. ಈ ಕಂಪನಿಯು ಪುಣೆಗೆ ಇಂತಹ 150 ಬಸ್‌ಗಳನ್ನು ಸರಬರಾಜು ಮಾಡಿದ್ದು, ಹುಬ್ಬಳ್ಳಿಗೂ ಒಂದು ಬಸ್​ಅ್ನು ಕಳುಹಿಸಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಈ ಬಸ್​ ಅನ್ನು 250 ಕಿ.ಮೀ. ಓಡಿಸಬಹುದಾಗಿದೆ. ಬಸ್‌ ವೆಚ್ಚ, ಓಡಾಟದ ವೇಗ, ಬಾಳಿಕೆ ಮುಂತಾದ ವಿಷಯಗಳ ಬಗೆಗೆ ಅಧಿಕಾರಿಗಳು ಅಧ್ಯಯನ ನಡೆಸುತ್ತಿದ್ದು, ಆ ನಂತರವಷ್ಟೇ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.