ETV Bharat / state

ನಾಳೆ ಒಂದು ದಿನ ಹುಬ್ಬಳ್ಳಿ ನಗರದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ: ಡಿ ಸಿ ಗುರುದತ್ತ ಹೆಗಡೆ

author img

By

Published : Jan 11, 2023, 8:26 PM IST

Updated : Jan 11, 2023, 8:44 PM IST

ಪ್ರಧಾನಿ ನರೇಂದ್ರ ಮೋದಿಯಿಂದ ಹುಬ್ಬಳ್ಳಿಯಲ್ಲಿ ಉದ್ಘಾಟನೆಗೊಳ್ಳಲಿರುವ ಯುವಜನೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ - ಡಿ ಸಿ ಗುರುದತ್ತ ಹೆಗಡೆ

ಡಿ ಸಿ ಗುರುದತ್ತ ಹೆಗಡೆ
ಡಿ ಸಿ ಗುರುದತ್ತ ಹೆಗಡೆ

ಡಿ ಸಿ ಗುರುದತ್ತ ಹೆಗಡೆ ಅವರು ಮಾತನಾಡಿದರು

ಧಾರವಾಡ: ಹುಬ್ಬಳ್ಳಿ ನಗರದ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವುದರಿಂದ ಜನದಟ್ಟಣೆ ಹೆಚ್ಚಾಗುತ್ತದೆ. ಈ ಹಿನ್ನೆಲೆ ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ನಗರದ 1 ರಿಂದ 10 ನೇ ತರಗತಿವರೆಗಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ 12-01-2023 ರ ಗುರುವಾರದಂದು ಒಂದು ದಿನ ಮಾತ್ರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಯಾವುದೇ ರಜೆ ನೀಡಿರುವುದಿಲ್ಲ. ಎಂದಿನಂತೆ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳ ತರಗತಿಗಳು ನಡೆಯುತ್ತವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವಜನೋತ್ಸವಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ: ನಾಳೆ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆಗೊಳ್ಳಲಿರುವ ಯುವಜನೋತ್ಸವ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಧಾನಮಂತ್ರಿಗಳ ಜೊತೆ ರಾಜ್ಯಪಾಲರು, ಸಿಎಂ, ಕೇಂದ್ರ ಸಚಿವರು, ಜಿಲ್ಲೆಯ ಎಲ್ಲ ಶಾಸಕರು, ಪರಿಷತ್ ಸದಸ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ನಗರದ ರೈಲ್ವೆ ಮೈದಾನದಲ್ಲಿ ಮಾತನಾಡಿದ ಅವರು, ಸಂಜೆ 5 ಗಂಟೆ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನ ಮಂತ್ರಿಗಳಿಂದ ಚಾಲನೆ ಸಿಗಲಿದೆ. 25 ಸಾವಿರ ಆಸನದ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆನ್​ಲೈನ್​ ಮೂಲಕ‌ ನೋಂದಣಿ ಅವಕಾಶ ನೀಡಲಾಗಿತ್ತು. ನಾಲ್ಕು ದಿನಗಳ ಕಾಲ ಧಾರವಾಡದಲ್ಲಿ ಸಂಸ್ಕೃತ ವೈಭವ ಮೇಳೈಸಲಿದೆ. ದೇಶದ ನಾನಾ ಭಾಗದಿಂದ 8 ಸಾವಿರ ಪ್ರತಿನಿಧಿಗಳು ಆಗಮಿಸಿದ್ದಾರೆ ಎಂದರು. ಮೋದಿಯವರ ರೋಡ್ ಶೋ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಬಳಿಕ‌ ಪ್ರಧಾನಮಂತ್ರಿಗಳು ದೆಹಲಿಗೆ ಮರಳಲಿದ್ದಾರೆ‌ ಎಂದು ಹೇಳಿದರು.

ಅವಳಿನಗರದಲ್ಲಿ ನಡೆಯುತ್ತಿರುವ ಯುವ ಜನೋತ್ಸವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರೈಲ್ವೆ ಮೈದಾನದಲ್ಲಿ ಉದ್ಘಾಟಿಸಲಿದ್ದಾರೆ. ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ ಕೆ ನಾರಾಯಣಗೌಡ ಅವರು ಸಿದ್ಧತೆ ಪರಿಶೀಲನೆ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಲ್ಲಕಂಬ ಒಳಗೊಂಡ ಸಾಹಸ ಕ್ರೀಡಾಪಟುಗಳ ತಾಲೀಮು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಮುಲ್ಲೈ ಮುಹಿಲನ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲ ಕೃಷ್ಣ ಬಿ, ಮತ್ತಿತರು ಪಾಲ್ಗೊಂಡರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಮಾತನಾಡಿದರು

ಪ್ರಧಾನಿ‌ ನರೇಂದ್ರ ಮೋದಿ ಅವರನ್ನು ಕಾಣಲು ಅಭಿಮಾನಿಗಳು ಕಾತರರಾಗಿದ್ದಾರೆ- ಮಹೇಶ ಟೆಂಗಿನಕಾಯಿ: ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ ಎಲ್ಲ ಸಿದ್ದತೆಗಳು ಆಗಿದ್ದು, ಸಾವಿರಾರು ಜನರು ಅವರನ್ನು ಕಾಣಲು ಕಾತರರಾಗಿದ್ದಾರೆ. ಅಭಿಮಾನಿಗಳಿಗೆ ಅನುಕೂಲವಾಗುವಂತೆ ರಸ್ತೆ ಪಕ್ಕ ಸುಮಾರು 8 ಕಿ ಮೀ ಬ್ಯಾರಿಕೇಡ್ ಹಾಕಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೂ ವಾಹನದಲ್ಲಿ ಬರಲಿದ್ದಾರೆ. ಏರ್​ಪೋರ್ಟ್​ನಿಂದ ಮೈದಾನದವರೆಗೆ 8 ಕಿ ಲೋ ಮೀಟರ್ ಇದೆ. ಎಂಟು ಕಿ ಲೋ ಮೀಟರ್ ಎರಡು ಕಡೆ ಜನರು ನಿಲ್ಲೋಕೆ ಅವಕಾಶ ಇದೆ. ಮೈದಾನದಲ್ಲಿ ಆನ್ಲೈ​ನ್ ರಿಜಿಸ್ಟರ್ ಮಾಡಿದ ಯುವಕರಿಗೆ ಮಾತ್ರ ಅವಕಾಶವಿದೆ. ಇದು ರೋಡ್ ಶೋ ಅಲ್ಲ. ತೆರೆದ ವಾಹನದಲ್ಲಿ ಮೋದಿ ಬರಲ್ಲ. ಅವರದ್ದೇ ಆದ ವಾಹನದಲ್ಲಿ ಬರ್ತಾರೆ. ಎರಡು ಮೂರು ಕಡೆ ಮೋದಿ ವಾಹನದಿಂದ ಇಳಿದು ಜನರನ್ನು ಮಾತನಾಡಿಸಬಹುದು ಎಂದರು.

ಇನ್ನೂ ಯಾವುದೂ ಅಂತಿಮವಾಗಿಲ್ಲ: ಇದು ಯಾವುದೂ ಅಧಿಕೃತ ಅಲ್ಲ. ಮೋದಿ ಕಾರ್ಯಾಲಯದ ನಿರ್ಧಾರದ ಮೇಲೆ ಅಂತಿಮವಾಗಲಿದೆ. ಕಾರ್ಯಕ್ರಮ ಬಿಜೆಪಿದು ಅಲ್ಲ. ಇದು ಯುವಜನೋತ್ಸವ. ವೇದಿಕೆ ಮೇಲೆ ಜಗದೀಶ್ ಶೆಟ್ಟರ್ ಇರ್ತಾರೆ. ಆಹ್ವಾನ ಪತ್ರಿಕೆಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಬಿಟ್ಟಿರೋದು ಕೇಂದ್ರ ಸಚಿವರ ಗಮನಕ್ಕೆ ಬಂದಿದೆ. ಅದನ್ನು ಕೇಂದ್ರ ಸಚಿವರು ಸರಿ ಮಾಡ್ತಾರೆ.

ಅದು ಜಿಲ್ಲಾಡಳಿತ ಮಾಡಿರೋ ಅಹ್ವಾನ ಪತ್ರಿಕೆ. ಸರಿ ಆಗುತ್ತೆ. ಜಗದೀಶ್ ಶೆಟ್ಟರ್ ನಮ್ಮ ಸರ್ವೋಚ್ಚ ನಾಯಕರು. ಮೂಲೆಗುಂಪು ಮಾಡಲ್ಲ. ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಇರ್ತಾರೆ ಎಂದರು. ಇವಾಗ ಆಗಿರೋ ಯಡವಟ್ಟು ನಾವು ಯಾರ ಗಮನಕ್ಕೆ ತರಬೇಕು ತಂದಿದ್ದೇವೆ ಎಂದು ಹೇಳಿದರು.

ಓದಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಸಿಂಗಾರಗೊಂಡ ಹುಬ್ಬಳ್ಳಿ: ಗಮನ ಸೆಳೆಯುತ್ತಿರುವ ಕಟೌಟ್​ಗಳು

Last Updated : Jan 11, 2023, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.