ETV Bharat / state

ಪಿ‌ಎಫ್ಐ, ಎಸ್​​ಡಿಪಿಐ ಬ್ಯಾನ್​​ ವಿಚಾರ ಸರ್ಕಾರ ಗಂಭೀರವಾಗಿ ತಗೆದುಕೊಂಡಿದೆ: ಸಿಎಂ ಬೊಮ್ಮಾಯಿ

author img

By

Published : Feb 26, 2022, 8:58 PM IST

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಎಸ್​​ಡಿಪಿಐ, ಪಿಎಫ್​​ಐ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಘಟನೆಗಳನ್ನ ಹಿರಿಯ ಪೊಲೀಸ್ ಅಧಿಕಾರಿಗಳು ಬಹಳ ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಶಾಂತಿ ಕದಡುವುದು, ಮತೀಯ ದ್ವೇಷ ಬಿತ್ತುವಂತಹದ್ದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ : ರಾಜ್ಯ ಬಜೆಟ್ ಮಾರ್ಚ್​4 ರಂದು ನಡೆಯುತ್ತೆ. ಎಲ್ಲೆಲ್ಲಿ ಯಾವ ಪ್ರದೇಶಕ್ಕೆ ಏನಾಗುತ್ತೆ ಗೊತ್ತಾಗುತ್ತೆ. ಬಜೆಟ್​​​ನಲ್ಲಿ ಏನಿದೆ ಅನ್ನೋದನ್ನ ಹೇಳೋದು ತಪ್ಪಾಗುತ್ತೆ. ಅದರ ಬಗ್ಗೆ ಮಾರ್ಚ್​ 4 ರಂದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎಸ್​​ಡಿಪಿಐ, ಪಿಎಫ್​​ಐ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಘಟನೆಗಳನ್ನ ಹಿರಿಯ ಪೊಲೀಸ್ ಅಧಿಕಾರಿಗಳು ಬಹಳ ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆದ ಹಲವಾರು ಘಟನೆಗಳು ಸೇರಿದಂತೆ, ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವುದು, ಮತೀಯ ದ್ವೇಷ ಬಿತ್ತುವಂತಹದ್ದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಾರೆ. ಅದರ ಆಧಾರದ ಮೇಲೆ ಬರುವಂತಹ ದಿನದಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

ಕಾಂಗ್ರೆಸ್ ಮೇಕೆದಾಟು ಹೋರಾಟ, ಅದು ರಾಜಕೀಯ ಪಾದಯಾತ್ರೆ. ಅವರು ಮೊದಲು ಮಾಡಿದ್ದು ಅದನ್ನೇ, ಈಗ ಮಾಡೋದು ಅದನ್ನೇ. ಅವರ ಕಾಲದಲ್ಲಿ ಡಿಪಿಆರ್ ಸಿದ್ಧಪಡಿಸಲು 5 ವರ್ಷ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಬಂದ ಮೇಲೆ ಡಿಪಿಆರ್ ಸಿದ್ಧವಾಯ್ತು. ಹೀಗಾಗಿ ಯಾವ ನೈತಿಕ ಆಧಾರದ ಮೇಲೆ ಹೀಗೆ ಹೇಳ್ತಾರೆ ಎಂದು ಪಾದಯಾತ್ರೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ : ಕೋವಿಡ್ ಸಂಕಷ್ಟ ಹಿನ್ನೆಲೆ ಸರಳ ಹುಟ್ಟುಹಬ್ಬ ಆಚರಣೆ.. ಹಾರ, ತುರಾಯಿ ತರಬೇಡಿ ಎಂದ ಬಿಎಸ್​​ವೈ

ಉಕ್ರೇನ್​​​ನಲ್ಲಿ ವಿದ್ಯಾರ್ಥಿಗಳು ಸಿಲುಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಪೂರ್ವ ಭಾಗದಲ್ಲಿ ಹೆಚ್ಚು ಅಲ್ಲೇ ವಿದ್ಯಾರ್ಥಿಗಳಿದ್ದಾರೆ‌ ಯುದ್ಧದ ತೀವ್ರತೆ ಕಡಿಮೆ ಆದ ತಕ್ಷಣ ಪುಟಿನ್ ಜೊತೆ ಮೋದಿ ಮಾತನಾಡಲಿದ್ದಾರೆ. ಈಗಾಗಲೇ ಕೇಂದ್ರ ವಿದೇಶಾಂಗ ಸಚಿವರು ಸಂಪರ್ಕದಲ್ಲಿದ್ದಾರೆ ಎಂದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.