ETV Bharat / state

ದೇವರಗುಡ್ಡ ರೈಲ್ವೆ ಕೆಳಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ಶಿವಕುಮಾರ್​​ ಉದಾಸಿ

author img

By

Published : Nov 3, 2019, 6:25 PM IST

Updated : Nov 3, 2019, 7:43 PM IST

ರಾಣೆಬೆನ್ನೂರು ನಗರದ ದೇವರಗುಡ್ಡ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಗಾರಿಯನ್ನು ಸಂಸದ ಶಿವಕುಮಾರ ಉದಾಸಿ ಪರಿಶೀಲಿಸಿದರು.

ದೇವರಗುಡ್ಡ ರೈಲ್ವೆ ಕೇಳಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ಶಿವಕುಮಾರ್ ಉದಾಸಿ

ಹಾವೇರಿ/ರಾಣೆಬೆನ್ನೂರು: ರಾಣೆಬೆನ್ನೂರು ನಗರದ ದೇವರಗುಡ್ಡ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಗಾರಿಯನ್ನು ಸಂಸದ ಶಿವಕುಮಾರ ಉದಾಸಿ ಪರಿಶೀಲಿಸಿದರು. ಈ ಕಾಮಗಾರಿಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಸಂಸದರು ಭೇಟಿ ನೀಡಿ ಜನರಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಸಂಸದರು, ಕೆಳಸೇತುವೆ ನಿರ್ಮಾಣ ರೈಲ್ವೆ ಇಲಾಖೆಯ ರೂಪುರೇಷೆಯಾಗಿದ್ದು, ನಿತ್ಯವು ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ರೈತರಿಗೆ ಸಮಸ್ಯೆಯಾಗುತ್ತದೆ ಎಂಬುದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಸೇತುವೆಯನ್ನು ಮೇಲ್ಸೇತುವೆಯಾಗಿ ಪರಿವರ್ತಿಸಲು ರೈಲ್ವೆ ಸಚಿವರ ಹತ್ತಿರ ಮಾತನಾಡುತ್ತೇನೆ. ಈ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ಕೊಟ್ಟರು.

ರೈಲ್ವೆ ಕೆಳಸೇತುವೆ ಕಾಮಗಾರಿ ವಿರೋಧಿಸಿ ನಾಳೆ ರೈಲು ತಡೆ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆದರೆ ಸಂಸದರ ಭರವಸೆ ಹಿನ್ನೆಲೆಯಲ್ಲಿ ಚಳುವಳಿ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರೈಲ್ವೆ ಕಾಮಗಾರಿ ವೀಕ್ಷಿಸಿದ ಸಂಸದ ಶಿವಕುಮಾರ್​​ ಉದಾಸಿ
Intro:KN_RNR_02_ RAILWAY BRIDGE_COMIITE STOP_PROTEST-KAC10001

ರೈಲ್ವೆ ಮೇಲ್ಸುತೇವೆಗೆ ಭರವಸೆ ನೀಡಿದ ಸಂಸದ ಶಿವಕುಮಾರ ಉದಾಸಿ.
ರೈಲು ತಡೆ ಚಳುವಳಿ ಬಿಡುವಂತೆ ಮನವಿ..

ರಾಣೆಬೆನ್ನೂರ: ನಗರದ ದೇವರಗುಡ್ಡ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೇಳಸೇತುವೆ ಕಾಮಗಾರಿ ವಿರೋಧಿಸಿ ನಾಳೆ ರೈಲು ತಡೆ ಚಳುವಳಿಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ.
ಕೆಲ ತಿಂಗಳಿಂದ ಈ ಕಾಮಗಾರಿಯಿಂದ ವಾಹನ ಸವಾರರಿಗೆ ಹಾಗೂ ಇಲ್ಲಿನ ರೈತರಿಗೆ ಅನಾನಕೂಲವಾಗುತ್ತದೆ ಎಂದು ರೈಲ್ವೇ ಮೇಲ್ಸುತೇವೆ ಹೋರಾಟ ಸಮಿತಿ ವತಿಯಿಂದ ಹಲವು ಬಾರಿ ಹೋರಾಟ ಮಾಡಲಾಗಿತ್ತು. Body:ಆದರೆ ರೈಲ್ವೆ ಇಲಾಖೆ ಸಕಾರಾತ್ಮಕ ಸ್ಪಂದಿಸಿದ ಕಾರಣ ರೈಲು ತಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.
ಇದನ್ನು ಮನಗಂಡ ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಬೇಟಿ ನೀಡಿ ರೈಲ್ವೆ ಇಲಾಖೆಯ ಅಧಿಕಾರಿಗಳಿಂದ ಕಾಮಗಾರಿ ಬಗ್ಗೆ ಮಾಹಿತಿ ತಗೆದುಕೊಂಡರು.
ನಂತರ ಸಂಸದ ಉದಾಸಿ ಮಾತನಾಡಿ ಈ ಕೇಳಸೇತುವೆ ನಿರ್ಮಾಣ ರೈಲ್ವೆ ಇಲಾಖೆಯ ರೂಪರೇಷವಾಗಿದೆ. ನಿತ್ಯವು ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ರೈತರಿಗೆ ಸಮಸ್ಯೆಯಾಗುತ್ತದೆ ಎಂಬದು ತಿಳಿದು ಬಂದಿದೆ‌‌. Conclusion:ಮುಂದಿನ ದಿನಗಳಲ್ಲಿ ಈ ರೈಲ್ವೆ ಸೇತುವೆಯನ್ನು ಮೇಲ್ಸುತೇವೆಯಾಗಿ ಪರಿವರ್ತನೆ ಮಾಡಲು ರೈಲ್ವೆ ಸಚಿವರ ಹತ್ತಿರ ಮಾತನಾಡಿ, ಸಮಸ್ಯೆಯನ್ನು ಬಗೆ ಹರಿಸಲಾಗುವುದು. ಆದ ಕಾರಣ ದಯಮಾಡಿ ನಾಳೆ ರೈಲು ತಡೆ ಹೋರಾಟ ಕೈ ಬಿಡಬೇಕು ಎಂದು ಮನವಿ ಮಾಡಿದರು.
ನಂತರ ಇದಕ್ಕೆ ಸ್ಪಂದಿಸಿದ ಹೋರಾಟ ಸಮಿತಿ ನಾಳೆ ನಡೆಯುವ ರೈಲು ತಡೆ ಚಳುವಳಿಯನ್ನು ಸಂಸದರ ಮನವಿಗೆ ಮೇರೆಗೆ ಬಿಡಲಾಗುವುದು ಎಂದರು.
ಹೋರಾಟ ಸಮಿತಿಯ ಅಧ್ಯಕ್ಷ ರವಿಂದ್ರಗೌಡ ಪಾಟೀಲ, ಜಿ.ಜಿ.ಹೊಟ್ಟಿಗೌಡ್ರ, ಮಲ್ಲಿಕಾರ್ಜುನ ಅಂಗಡಿ, ಡಾ.ಬಸವರಾಜ ಕೇಲಗಾರ, ಉಮೇಶ ಹೊನ್ನಾಳಿ, ಜಗದೀಶ ಕೆರೊಡಿ, ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Last Updated : Nov 3, 2019, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.