ETV Bharat / state

ಲಸಿಕೆ ಹಾಕಲು ಹೋದ ವೇಳೆ ಕುರಿಗಾಯಿ, ವ್ಯಕ್ತಿಯೊಬ್ಬನ ಹೈಡ್ರಾಮ: ಮನೆಗಳಿಗೆ ನುಗ್ಗಿ ವ್ಯಾಕ್ಸಿನ್​ ಹಾಕಿದ ಸಿಬ್ಬಂದಿ.. VIDEO

author img

By

Published : Dec 1, 2021, 9:05 PM IST

ದಾವಣಗೆರೆ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನ್​ ಹಾಕಲು ತೆರಳಿದ್ದರು. ಈ ವೇಳೆ, ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಆಗ ಸಿಬ್ಬಂದಿ ಮನೆಗೆ ನುಗ್ಗಿ ವ್ಯಾಕ್ಸಿನ್​ ಹಾಕಿದ್ದಾರೆ.

Health department staff forcefully gave vaccine to people
ಲಸಿಕೆ ಹಾಕಲು ಹೋದ ವೇಳೆ ಕುರಿಗಾಯಿ, ವ್ಯಕ್ತಿಯಿಂದ ಹೈಡ್ರಾಮ

ದಾವಣಗೆರೆ: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್​ ರೂಪಾಂತರಿ ಒಮಿಕ್ರೋನ್​ ವೈರಾಣು ಹರಡುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಲಸಿಕೆ ಹಾಕುವುದನ್ನು ಹೆಚ್ಚು ಹೆಚ್ಚು ಮಾಡುತ್ತಿದೆ. ಅದರಂತೆ ಜಿಲ್ಲೆಯಲ್ಲೂ ವ್ಯಾಕ್ಸಿನ್​​ ಹಾಕಲು ಆರೋಗ್ಯ ಸಿಬ್ಬಂದಿ ಹೋದ ವೇಳೆ ಇಬ್ಬರು ಹೈ ಡ್ರಾಮ ಮಾಡಿದ್ದಾರೆ.

ಆಧಾರ ಕಾರ್ಡಿಲ್ಲ ಎಂದು ಹೈಡ್ರಾಮಾ ಮಾಡಿದ ವ್ಯಕ್ತಿಗೆ ಲಸಿಕೆ ಹಾಕಿದ ಆರೋಗ್ಯ ಸಿಬ್ಬಂದಿ

ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಲು ಹೋಗಿದ್ದಾರೆ. ಈ ವೇಳೆ, ಗ್ರಾಮದಲ್ಲಿ ವ್ಯಾಕ್ಸಿನ್​ ಹಾಕುತ್ತಿದ್ದಾರೆ ಎಂಬುದನ್ನು ಅರಿತ ತಿಪ್ಪೇಶ್​ ಎಂಬ ಕುರಿಗಾಯಿ ಲಸಿಕೆಗೆ ಹೆದರಿ ಹೊಲದಲ್ಲಿ ಅವಿತು ಕುಳಿತ್ತಿದ್ದನು. ಈ ಕುರಿತು ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಹೊಲಕ್ಕೆ ಹೋಗಿ ಲಸಿಕೆ ಹಾಕಿದ್ದಾರೆ.

ಹೊಲದಲ್ಲಿ ಅವಿತು ಕುಳಿತ್ತಿದ್ದ ಕುರಿಗಾಯಿಗೆ ವ್ಯಾಕ್ಸಿನ್​​ ನೀಡಿದ ಸಿಬ್ಬಂದಿ

ಅದರಂತೆ ಮುಸ್ತಾಫ್ ನಗರದಲ್ಲಿ ವ್ಯಕ್ತಿಯೊಬ್ಬ ಲಸಿಕೆ ಹಾಕಿಸಿಕೊಳ್ಳಲು ಆಧಾರ್ ಕಾರ್ಡ್ ಇಲ್ಲ. ನಾನು ವ್ಯಾಕ್ಸಿನ್​​ ಹಾಕಿಸಿಕೊಳ್ಳುವುದಿಲ್ಲ ಎಂದು ಹೈಡ್ರಾಮಾ ಮಾಡುತ್ತಿದ್ದನು. ಇದಕ್ಕೆಲ್ಲ ಸೊಪ್ಪು ಹಾಕದ ಸಿಬ್ಬಂದಿ, ವ್ಯಕ್ತಿಯನ್ನು ಬಿಡದೇ ಲಸಿಕೆ ಹಾಕಿದ್ದಾರೆ.

Health department staff forcefully gave vaccine to people
ಮನೆಗಳಿಗೆ ನುಗ್ಗಿ ವ್ಯಾಕ್ಸಿನ್​ ಹಾಕಿದ ಸಿಬ್ಬಂದಿ

ಇನ್ನು ಮೆಹೆಬೂಬ್ ನಗರ, ಬಾಷಾ ನಗರದ ಮನೆಗಳಿಗೆ ಆರೋಗ್ಯ ಸಿಬ್ಬಂದಿ ನುಗ್ಗಿ ಲಸಿಕೆ ಹಾಕಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ನಗರ ಮಟ್ಟದಲ್ಲಿ ಕೋವಿಡ್ ರೂಪಾಂತರಿ ವೈರಸ್ ತಡೆಗೆ ಕ್ರಮ: ತಜ್ಞರ ಸಮಿತಿಯೊಂದಿಗೆ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.