ETV Bharat / state

ದಾವಣಗೆರೆ: ಸರಳವಾಗಿ ನೆರವೇರಿದ ಹರ ಜಾತ್ರಾ ಮಹೋತ್ಸವ

author img

By ETV Bharat Karnataka Team

Published : Jan 15, 2024, 10:34 PM IST

Updated : Jan 15, 2024, 11:03 PM IST

ಹರಿಹರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಹರ ಜಾತ್ರಾ ಮಹೋತ್ಸವ ಹಾಗೂ ಶ್ರೀ ವಚನಾನಂದ ಸ್ವಾಮೀಜಿಯವರಿಗೆ ಪೀಠಾರೋಹಣ ಸರಳವಾಗಿ ನೆರವೇರಿತು.

hara-jatra-mahotsava-held-in-davanagere
ದಾವಣಗೆರೆ: ಸರಳವಾಗಿ ನೆರವೇರಿದ ಹರ ಜಾತ್ರಾ ಮಹೋತ್ಸವ

ಹರ ಜಾತ್ರಾ ಮಹೋತ್ಸವ

ದಾವಣಗೆರೆ: ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಹರ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು. ನಂತರ ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿಯವರಿಗೆ 6ನೇ ವರ್ಷದ ಪೀಠಾರೋಹಣ ನೆರವೇರಿಸಲಾಯಿತು. ಮಠದಿಂದ ಶಿವನ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಹೋಗಿ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ನಾಸಿಕ್​ ಡೋಲು ಹಾಗೂ ತಾಶಾ ವಾದ್ಯ ಬಾರಿಸಲಾಯಿತು. ಲಿಂಗವನ್ನು ಇರಿಸಿದ್ದ ಪಲ್ಲಕ್ಕಿಗೆ ವಚನಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠದ ಸ್ವಾಮೀಜಿಗಳು ಹೆಗಲು ಕೊಟ್ಟು, ಮಠದ ಆವರಣದಲ್ಲಿ ಮೆರವಣಿಗೆ ಮಾಡಿದರು.

ಬಳಿಕ ಶ್ರೀ ವಚನಾನಂದ ಸ್ವಾಮೀಜಿಯವರು ಮಾತನಾಡಿ, ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಮಳೆ ಬೆಳೆ ಇಲ್ಲದ ಸಂದರ್ಭದಲ್ಲಿ ಅದ್ಧೂರಿಯಾಗಿ ಹರ ಜಾತ್ರೆ ಆಚರಿಸದೇ ಈ ಬಾರಿ ಅತ್ಯಂತ ಸರಳವಾಗಿ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಭಕ್ತರು ದೂರದ ಊರುಗಳಿಂದ ಬಂದಿದ್ದಾರೆ. ಜಾತ್ರೆಗೆ ಬನ್ನಿ ಎಂದು ನಾವು ಯಾರನ್ನು ಆಹ್ವಾನ ಮಾಡಿಲ್ಲ, ಅದರೂ ಭಕ್ತರು ಜಾತ್ರೆಗೆ ಆಗಮಿಸಿರುವುದು ಖುಷಿ ತಂದಿದೆ ಎಂದರು

ವಚನಾನಂದ ಶ್ರೀಗೆ 6ನೇ ಬಾರಿಗೆ ಪೀಠಾರೋಹಣ: ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ಶಾಲು, ರುದ್ರಾಕ್ಷಿ ಕಿರೀಟ ಧಾರಣೆ ಮಾಡುವ ಮೂಲಕ 6ನೇ ಪೀಠಾರೋಹಣ ನೆರವೇರಿಸಲಾಯಿತು. ಪಿಠಾರೋಹಣ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್​ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಹಲವು ಸಮುದಾಯಗಳ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ಮತ್ತೊಂದೆಡೆ, ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, "ಕೆಲವರು 2ಎ, 3ಎ, 3ಬಿ ಮತ್ತು ಎಸ್​ಸಿ ಮೀಸಲಾತಿ ಪಡೆಯುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಹಾಗೂ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ. ನಾವು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೇಳುತ್ತಿದ್ದೇವೆ. ನಾವು ಸಮುದಾಯವನ್ನು ಒಡೆಯುವುದಿಲ್ಲ. 2ಎ ಮೀಸಲಾತಿಗಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಲಿಂಗಾಯತರನ್ನ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮೀಸಲಾತಿ ಪ್ರಕಟಿಸಿದ್ದನ್ನು ವಿರೋಧಿಸಿಲ್ಲ. ಅದೇ ರೀತಿ ಸ್ವಾಗತ ಕೂಡ ಮಾಡಿಲ್ಲ. ಇದಕ್ಕೆ ಬೇಕಾದ ಕಾನೂನು ಹೋರಾಟ ಮಾಡುತ್ತಿದ್ದೇವೆ. ಈ ವಿಚಾರ ಹೆಚ್ಚು ಮಾಧ್ಯಮದಲ್ಲಿ ಬಂದರೆ ಮೀಸಲಾತಿ ಸಿಗಲ್ಲ" ಎಂದು ಹೇಳಿದರು.

ಇದನ್ನೂ ಓದಿ: ಸ್ವಾರ್ಥಿಗಳು ಜಾತಿ ವ್ಯವಸ್ಥೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

Last Updated : Jan 15, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.