ETV Bharat / state

15 ಸಾವಿರ ವೋಟ್​​ ಡಿಲೀಟ್ ಆಗಿವೆ ಎಂದ ಶಾಸಕ ರಾಮಪ್ಪಗೆ ನೋಟಿಸ್ : ಡಿಸಿ ಶಿವಾನಂದ ಕಾಪಶಿ

author img

By

Published : Dec 4, 2022, 3:55 PM IST

dc-instucted-to-issue-notice-to-harihara-mla-ramappa
15 ಸಾವಿರ ವೋಟ್​​ ಡಿಲೀಟ್ ಆಗಿವೆ ಎಂದ ಶಾಸಕ ರಾಮಪ್ಪಗೆ ನೋಟಿಸ್ : ಡಿಸಿ ಶಿವಾನಂದ ಕಾಪಶಿ

ಸಾಕ್ಷ್ಯಾಧಾರಗಳಿಲ್ಲದೆ 15 ಸಾವಿರ ವೋಟ್​ ಕಾರ್ಡ್​ಗಳನ್ನು ತೆಗೆಯಲಾಗಿದೆ ಎಂದು ಆರೋಪಿಸಿದ್ದ ಹರಿಹರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಪ್ಪಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ದಾವಣಗೆರೆ : ಸಾಕ್ಷ್ಯಾಧಾರಗಳಿಲ್ಲದೆ 15 ಸಾವಿರ ವೋಟ್​ಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಆರೋಪಿಸಿದ್ದ ಹರಿಹರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಪ್ಪ ಅವರಿಗೆ ನೋಟಿಸ್​ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ತಮ್ಮ ಕ್ಷೇತ್ರದಲ್ಲಿ 15 ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ನೀಡಿದ್ದ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ಬಗ್ಗೆ ಹರಿಹರ ತಹಶಿಲ್ದಾರ್​ ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಶಾಸಕ‌ ಎಸ್ ರಾಮಪ್ಪಗೆ ನೋಟಿಸ್ ನೀಡಲು ತಹಶಿಲ್ದಾರ್ ಗೆ ಸೂಚನೆ ನೀಡಿದ್ದಾರೆ.

15 ಸಾವಿರ ವೋಟ್​​ ಡಿಲೀಟ್ ಆಗಿವೆ ಎಂದ ಶಾಸಕ ರಾಮಪ್ಪಗೆ ನೋಟಿಸ್ : ಡಿಸಿ ಶಿವಾನಂದ ಕಾಪಶಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು, ಹರಿಹರ ಮತಕ್ಷೇತ್ರದಲ್ಲಿ 15 ಸಾವಿರ ಮತಗಳು ಡಿಲೀಟ್ ಆಗಿವೆ ಎಂದು ಮಾಧ್ಯಮಗೋಷ್ಟಿಯಲ್ಲಿ ಶಾಸಕ ಎಸ್ ರಾಮಪ್ಪ‌ ಮಾತನಾಡಿದ್ದಾರೆ. ಈ ಬಗ್ಗೆ ಶಾಸಕರಿಗೆ ನೋಟಿಸ್ ನೀಡಲು ಹೇಳಲಾಗಿದೆ. ಯಾವುದೇ ಆಧಾರವಿಲ್ಲದೆ ಪತ್ರಿಕಾ ಹೇಳಿಕೆ ನೀಡುವುದು ಸರಿಯಲ್ಲ. ಈ ಬಗ್ಗೆ ಏನಾದರೂ ದಾಖಲೆ ಇದ್ದರೆ ಲಿಖಿತ ರೂಪದಲ್ಲಿ ದೂರು ನೀಡಲು ತಿಳಿಸಿರುವುದಾಗಿ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದಿ : ಮತದಾರರ ಮಾಹಿತಿ ಕಳವು ಪ್ರಕರಣ: ವಿಚಾರಣೆಗೆ ಹಾಜರಾದ ಐಎಎಸ್ ಅಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.