ETV Bharat / state

ರ‍್ಯಾಲಿಗೆ ಅಡ್ಡಿಪಡಿಸಲು ಆ್ಯಂಬುಲೆನ್ಸ್ ತಂದವನನ್ನು ಬಂಧಿಸಲಿ : ಡಿಕೆ ಶಿವಕುಮಾರ್​

author img

By

Published : May 5, 2023, 2:09 PM IST

Updated : May 5, 2023, 2:45 PM IST

ಬಜರಂಗದಳ, ಶ್ರೀರಾಮಸೇನೆ ಹೆಸರು ಹೇಳಿಕೊಂಡು ದೇಶವನ್ನು ಲೂಟಿ ಹೊಡೆದಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

DK Shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​

ದಾವಣಗೆರೆ: ಮೋದಿಯವರು ಈ ದೇಶದ ಪ್ರಧಾನಿ, ರಾಜ್ಯ ಹಾಗೂ ಕೇಂದ್ರದಲ್ಲೂ ಬಿಜೆಪಿ ಆಡಳಿತ ಇದೆ. ಮೋದಿ ರ‍್ಯಾಲಿಗೆ ಅಡ್ಡಿಪಡಿಸಲು ಆ್ಯಂಬುಲೆನ್ಸ್ ತಗೊಂಡು ಬಂದವನನ್ನು ಅರೆಸ್ಟ್ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮೋದಿಯವರ ರ‍್ಯಾಲಿಗಳಿಗೆ ಅಡ್ಡಿಪಡಿಸಲು ಆ್ಯಂಬುಲೆನ್ಸ್​ಗಳನ್ನು ತಂದು ಅಡ್ಡಿಪಡಿಸಲಾಗುತ್ತಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ''ಶೋಭಕ್ಕನಿಗೆ, ಬಿಜೆಪಿಯವರಿಗೆ ಸೋಲೋದು ನಿಶ್ಚಿತ ಎಂದು ತೀರ್ಮಾನವಾದಂತಿದೆ. ಬೇಕಾದ್ರೆ ಮಾಹಿತಿ ತೆಗೆದುಕೊಂಡು ಆ್ಯಂಬುಲೆನ್ಸ್ ತಗೊಂಡು ಬಂದವನನ್ನು ಅರೆಸ್ಟ್ ಮಾಡಲಿ, ಪ್ರಿಯಾಂಕಾ ಗಾಂಧಿ ರೋಡ್ ಶೋಗೆ ಡಬಲ್ ರೋಡ್ ಕೊಡುತ್ತಿಲ್ಲ, ಡಬಲ್ ರೋಡ್​ನಲ್ಲಿ ಒಂದು ಕಡೆ ಮೋದಿ ಅವರು ಓಡಾಡಲು ಜಾಗ ಕೊಡುತ್ತಿದ್ದಾರೆ, 10ನೇ ತಾರೀಕಿನವರೆಗೂ ಅವರ ಸರ್ಕಾರ, ಬಳಿಕ ಅವರು ರೋಡ್ ಮೇಲಾದ್ರು ಮಲಗಿಕೊಳ್ಳಲಿ'' ಎಂದರು.

ಬಜರಂಗದಳ ನಿಷೇಧ ವಿಚಾರ: ಗೋವಾದಲ್ಲಿ ಶ್ರೀ ರಾಮಸೇನೆಯನ್ನು ಆರಂಭ ಮಾಡಲು ಗೋವಾ ಸರ್ಕಾರ ಬಿಡಲಿಲ್ಲ, ಬಿಜೆಪಿ ಸರ್ಕಾರ ಇದ್ದರೂ, ರಾಮಸೇನಾ ಓಪನ್ ಆಗಲು ಬಿಡಲಿಲ್ಲ. ಇವತ್ತು ಬಿಜೆಪಿಯವರು ಹನುಮಾನ್ ಚಾಲಿಸಾ ಬಗ್ಗೆ ಮಾತಾಡುತ್ತಾರೆ. ಭಜರಂಗಿಗೂ ಬಜರಂಗದಳಕ್ಕೂ ವ್ಯತ್ಯಾಸ ಇದೆ, ನಾವು ದೇಶ ದ್ರೋಹಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಎಷ್ಟು ಜನ ಅಮಾಯಕರು ಕರಾವಳಿಯಲ್ಲಿ ಸತ್ತು ಹೋಗಿದ್ದಾರೆ. ಬಜರಂಗದಳ ಹೆಸರನ್ನು ಹೇಳಿಕೊಂಡು ದೇಶವನ್ನು ಲೂಟಿ ಹೊಡೆದಿದ್ದೀರಿ, ಮೋದಿಯವರು ಸಭೆಯಲ್ಲಿ ಹನುಮಾನ್ ಎಂದು ಹೇಳುತ್ತಿದ್ದಾರೆ. ಅವರು ಹನುಮಾನ್ ಬದಲಿಗೆ ಅವರ ಹೆಸರನ್ನು ನರೇಂದ್ರ ಅಂತಾ ಹೇಳಿಕೊಳ್ಳಲಿ, ನರೇಂದ್ರ ಹೆಸರು ದೇವರ ಹೆಸರಲ್ವ? ಅವರ ಹೆಸರನ್ನು ಹೇಳಿಕೊಳ್ಳಲಿ. ಕೋವಿಡ್ ಸಂದರ್ಭದಲ್ಲಿ ಸುರೇಶ್ ಅಂಗಡಿ ಶವವನ್ನು ತಂದು ತೋರಿಸಲಿಕ್ಕಾಗಲಿಲ್ಲ ಇವರಿಗೆ. ಕೋವಿಡ್​ನಲ್ಲಿ ಚಾಮರಾಜನಗರದಲ್ಲಿ ಸತ್ತ 36 ಸಾವಿರ ಜನರಿಗೆ ದುಡ್ಡು ಕೊಡೋಕೆ ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪರವಾಗಿ ನಿಂತ ಎಲ್ಲರಿಗೂ ಬೆದರಿಕೆ ಇದೆ. ಮಾಧ್ಯಮಗಳಿಗೂ ಬೆದರಿಕೆ ಇದೆ. ಆದರೆ ನೀವು ಅದನ್ನು ಹೇಳಿಕೊಳ್ಳುತ್ತಿಲ್ಲ ಅಷ್ಟೆ. ಆದಾಯ ತೆರಿಗೆ ಇಲಾಖೆಯು ಕೇಂದ್ರ ಸರ್ಕಾರದ ಏಜೆಂಟ್​ನಂತೆ ಕೆಲಸ ಮಾಡುತ್ತಿದೆ. ಆದಾಯ ತೆರಿಗೆ​ ದಾಳಿ ನಡೆಸಲಾಗುತ್ತಿದೆ. ಏನಿಲ್ಲ ಎಂದರೂ ಸುಮ್ಮಸುಮ್ಮನೇ ದಾಳಿ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ನಾವು 141 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ ಅಧಿಕಾರಿಗಳು : ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಲಿಕಾಪ್ಟರ್​​ನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಹೆಲಿಕಾಪ್ಟರ್​​ನಲ್ಲಿದ್ದ ಮೂರ್ನಾಲ್ಕು ಬ್ಯಾಗ್‌ಗಳನ್ನು ಪರಿಶೀಲನೆ ಮಾಡಿದರು.

ಇದನ್ನೂ ಓದಿ: 'ಬಿಜೆಪಿ ನಾಯಕರಿಗೆ ಲೂಟಿ ಹೊಡೆಯುವುದೊಂದೇ ಚಿಂತೆ': ಹಾವೇರಿಯಲ್ಲಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ

Last Updated : May 5, 2023, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.