ETV Bharat / state

ಕುವೈತ್​​ನಲ್ಲೂ ಮೊಳಗಿದ ತುಳುನಾಡ ಪ್ರೇಮಗೀತೆ... ಪ್ರೇಕ್ಷರನ್ನ ರಂಜಿಸಿದ ವಿದೇಶಿ ಸಿಂಗರ್​

author img

By

Published : Apr 2, 2019, 7:47 PM IST

Updated : Apr 2, 2019, 9:38 PM IST

ಮಾರ್ಚ್ 29ರಂದು ಕುವೈತ್​​​ನಲ್ಲಿ ನಡೆದಿದ್ದ ತುಳುಕೂಟ ರಸಮಂಜರಿ ಕಾರ್ಯಕ್ರಮದಲ್ಲಿ ಕುವೈತ್​​ ಖ್ಯಾತ ಹಾಡುಗಾರ ಮುಬಾರಕ್ ಅಲ್ ರಶೀದ್ ಅವರು ಪಗೆತ ಪುಗೆ( ಸೇಡಿನ ಹೊಗೆ) ಎಂಬ ಹಳೆಯ ತುಳು ಚಲನಚಿತ್ರದ ‘ಮೋಕೆದ ಸಿಂಗಾರಿ ಉಂತುದೆ ಬಂಗಾರಿ' ( ಪ್ರೀತಿಯ ಸಿಂಗಾರಿ, ನಿಲ್ಲೇ ಬಂಗಾರಿ) ಹಾಡನ್ನು ಹಾಡಿದರು.

ಕುವೈಟ್​ನಲ್ಲಿ ತುಳು ಹಾಡು

ಮಂಗಳೂರು: ತುಳು ಭಾಷೆಯ ಎವರ್​ಗ್ರೀನ್ ಸೂಪರ್ ಹಿಟ್ ಹಾಡೊಂದನ್ನು ಕುವೈತ್​​ ದೇಶದ ಹಾಡುಗಾರನೋರ್ವ ಗಾನಸುಧೆ ಮೂಲಕ ತುಳುವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಗೆತ ಪುಗೆ( ಸೇಡಿನ ಹೊಗೆ) ಎಂಬ ಹಳೆಯ ತುಳು ಚಲನಚಿತ್ರದ ‘ಮೋಕೆದ ಸಿಂಗಾರಿ ಉಂತುದೆ ಬಂಗಾರಿ' ( ಪ್ರೀತಿಯ ಸಿಂಗಾರಿ, ನಿಲ್ಲೇ ಬಂಗಾರಿ) ಎಂಬುದು ತುಳುನಾಡಿನ ಪ್ರಸಿದ್ದ ಹಾಡು. ರಸಮಂಜರಿಗಳಲ್ಲಿ, ತುಳುವರ ಕಾರ್ಯಕ್ರಮಗಳಲ್ಲಿ ಈ ಹಾಡು ಇಂದಿಗೂ ಕೇಳಿ ಬರುತ್ತದೆ. ಈ ಹಾಡು ಇದೀಗ ಸಾಗರದಾಚೆಯ ಕುವೈತ್​​ನಲ್ಲೂ ಫೇಮಸ್ ಆಗಿದೆ.

ಕುವೈಟ್​ನಲ್ಲಿ ತುಳು ಹಾಡು

ಮಾರ್ಚ್ 29ರಂದು ಕುವೈತ್​​ನಲ್ಲಿತುಳು ಕೂಟವು ರಸಮಂಜರಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕುವೈತ್​​ ಖ್ಯಾತ ಹಾಡುಗಾರ ಮುಬಾರಕ್ ಅಲ್ ರಶೀದ್ ಅವರ ಗಾಯನ ಕಾರ್ಯಕ್ರಮವಿತ್ತು. ತುಳು‌ಭಾಷಿಕರೇ ತುಂಬಿದ್ದ ಕಾರ್ಯಕ್ರಮದಲ್ಲಿ ಈ ಹಾಡುಗಾರ ಮೋಕೆದ ಸಿಂಗಾರಿ, ಉಂತುದೆ ಬಂಗಾರಿ ಹಾಡನ್ನು ಹಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಅಷ್ಟೇ ಅಲ್ಲ, ಇದೇ ಹಾಡನ್ನು ತಮ್ಮ ಅರೇಬಿಕ್ ಭಾಷೆಯಲ್ಲೂ ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಇದೀಗ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Mangalore Filename-viral song Reporter- Vinodpudu ಕುವೈಟ್ ನಲ್ಲಿ ತುಳು ಹಾಡು ಹಾಡಿದ ಕುವೈಟ್ ಸಿಂಗರ್- ವಿಡಿಯೋ ವೈರಲ್ ಮಂಗಳೂರು; ತುಳು ಭಾಷೆಯ ಎವರ್ ಗ್ರೀನ್ ಸುಪರ್ ಹಿಟ್ ಹಾಡೊಂದನ್ನು ಕುವೈಟ್ ದೇಶದ ಸಿಂಗರ್ ಓರ್ವರು ಹಾಡುವ ಮೂಲಕ ತುಳುವರ ಮೆಚ್ಚುಗೆಗೆ ಪಾತ್ರವಾಗಿದ್ದು ಇವರ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಗೆತ ಪುಗೆ ಎಂಬ ಹಳೆಯ ತುಳು ಚಲನಚಿತ್ರದ ‘ಮೋಕೆದ ಸಿಂಗಾರಿ, ಉಂತುದೆ ಬಂಗಾರಿ’ ಎನ್ನುವ ಹಾಡು ಭಾರಿ ಪ್ರಸಿದ್ದ ಹಾಡು. ರಸಮಂಜರಿಗಳಲ್ಲಿ, ತುಳುವರ ಕಾರ್ಯಕ್ರಮಗಳಲ್ಲಿ ಈ ಹಾಡು ಇಂದಿಗೂ ಕೇಳಿ ಬರುತ್ತಲೆ ಇರುತ್ತದೆ. ಈ ಹಾಡು ಇದೀಗ ಸೌದಿ ಅರೇಬಿಯಾದಲ್ಲಿಯು ಫೇಮಸ್ ಆಗಿದೆ. ಕುವೈಟ್ ನ ತುಳು ಕೂಟ ಮಾರ್ಚ್ 29 ಕ್ಕೆ ಕುವೈಟ್ ನಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕುವೈಟ್‌ನ ಖ್ಯಾತ ಹಾಡುಗಾರ ಮುಬಾರಕ್ ಅಲ್ ರಶೀದ್ ಅವರ ಗಾಯನ ಕಾರ್ಯಕ್ರಮ ವಿತ್ತು. ಕುವೈಟ್ ನಲ್ಲಿ ತುಳು‌ಭಾಷಿಕರೆ ತುಂಬಿದ್ದ ಕಾರ್ಯಕ್ರಮದಲ್ಲಿ ಈ ಹಾಡುಗಾರ ಮೋಕೆದ ಸಿಂಗಾರಿ, ಉಂತುದೆ ಬಂಗಾರಿ ಹಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಅಷ್ಟೇ ಅಲ್ಲ ಇದೇ ಹಾಡನ್ನು ತಮ್ಮ ಅರೇಬಿಕ್ ಭಾಷೆಯಲ್ಲೂ ಹಾಡುವ ಮೂಲಕ ನೆರೆದಿದ್ದವರ ಮನರಂಜಿಸಿದರು. ಇದೀಗ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Last Updated : Apr 2, 2019, 9:38 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.