ETV Bharat / state

ಮುಂದಿನ ಚುನಾವಣೆಗೂ ಮುಂಚೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ: ನಳಿನ್​ ಕುಮಾರ್​ ಕಟೀಲ್

author img

By

Published : Jan 2, 2023, 5:39 PM IST

Updated : Jan 2, 2023, 5:45 PM IST

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ - ಆದ್ರೆ ಚುನಾವಣೆಗೂ ಮುಂಚೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

Nalin Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಪಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೆಡಿಎಸ್ ಕೇಂದ್ರಿತ ಪ್ರದೇಶದಲ್ಲಿ ಬಿಜೆಪಿ ಬೆಳೆದಿದೆ. ಹಿಂದೆ ಶ್ರೀಮಂತರ, ವಿದ್ಯಾವಂತರ, ನಗರವಾಸಿ ಪಕ್ಷ ಎಂದು ಬಿಜೆಪಿಯನ್ನು ಕಾಂಗ್ರೆಸ್ ಹೇಳುತ್ತಿತ್ತು. ಆದರೆ, ಇದೀಗ ಬಿಜೆಪಿ ಸರ್ವವ್ಯಾಪಿಯಾಗಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿದೆ ಎಂದರು.

ಕಾಂಗ್ರೆಸ್​ನಲ್ಲಿ ಕೆಲಸಕ್ಕೆ ಹಿಂದೂಗಳು ಸಿಗುವುದಿಲ್ಲ: 10 ದಿನದ ಬೂತ್ ವಿಜಯ ಅಭಿಯಾನದಲ್ಲಿ ಪೇಜ್ ಪ್ರಮುಖರು ಮತದಾರರ ಸಂಪರ್ಕ, ಮನೆ - ಮನೆಗಳಲ್ಲಿ ಪಕ್ಷದ ಸ್ಫೀಕರ್ ಅಂಟಿಸುವುದು, ವಾಟ್ಸ್​ಆ್ಯಪ್​ ಗ್ರೂಪ್​ಗಳ ರಚನೆ, ಕೇಂದ್ರ ಮತ್ತು ರಾಜ್ಯಗಳ ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಲುಪಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಒಂದೇ ಒಂದು ಹಿಂದೂಗಳು ಸಿಗುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ: ಮುಂದಿನ ಮುಖ್ಯಮಂತ್ರಿಗಳಾಗಲು ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹೊಸ ಶರ್ಟ್​ಗಳನ್ನು ಹೊಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ, ಭ್ರಷ್ಟಾಚಾರಿಗಳ ಪಕ್ಷ. ನಮ್ಮ ಸರ್ಕಾರವನ್ನು 40 ಪರ್ಸೆಂಟ್ ಎಂದು ಟೀಕಿಸಿದ ಕೆಂಪಣ್ಣ ಜೈಲಿಗೆ ಹೋಗಿದ್ದಾರೆ. ಇನ್ನು, ಭ್ರಷ್ಟಾಚಾರ ಮಾಡಿದ ಸಿದ್ದರಾಮಯ್ಯ ಮುಂದಿನ ಚುನಾವಣೆಗೂ ಮುಂಚೆ ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು. ಗೋಹತ್ಯೆ ನಿಷೇದ, ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೊಳಿಸಿದ ಸರ್ಕಾರ, ಲವ್ ಜೆಹಾದ್ ಕಾನೂನನ್ನು ತರಲಿದೆ ಎಂದರು.

ಇದನ್ನೂ ಓದಿ: ಬಿಜೆಪಿ ಬೂತ್ ವಿಜಯ ಅಭಿಯಾನ.. ಮನೆ ಮನೆಗೆ ತೆರಳಿ ಧ್ವಜ ಕಟ್ಟಿದ ಸಿಎಂ

ವೇದವ್ಯಾಸ್ ಕಾಮತ್​ಗೆ ಟಿಕೆಟ್ ಇಲ್ಲ?: ಇನ್ನು, ತಮ್ಮ ಭಾಷಣದಲ್ಲಿ ನಳಿನ್​ ಕುಮಾರ್ ವೇದಿಕೆಯ ಮೇಲೆ ಇದ್ದ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಎರಡು ಮೂರು ಬಾರಿ ಹಾಸ್ಯದಲ್ಲೇ ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ. ಬೂತ್ ವಿಜಯ ಅಭಿಯಾನವನ್ನು ಸರಿಯಾಗಿ ಹೇಳದೇ ಇರುವ ವೇದವ್ಯಾಸ ಕಾಮತ್​ಗೆ ಮುಂದಿನ ಬಾರಿ ಸೀಟು ಕೊಡುವುದಿಲ್ಲ ಎಂದರು. ಇದೇ ವೇಳೆ ನಗರದ ಕಾರ್ಪೋರೇಟರ್​ಗಳು ಮೂರು ವರ್ಷ ನಿದ್ದೆಯಲ್ಲಿದ್ದು, ಸರಿಯಾಗಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಡಿಕೆಶಿ ವಿರುದ್ಧ ಕಿಡಿಕಾರಿದ ನಳಿನ್​​ ಕುಮಾರ್​: ಮಂಗಳೂರಿನಲ್ಲಿ ಕುಕ್ಕರ್​ ಸ್ಫೋಟವಾದಾಗ, ಇಲ್ಲಿನ ಜನ ಆಂತಕದಲ್ಲಿದ್ದರು. ಆದರೆ ಈ ರಾಜ್ಯದ ಕಾಂಗ್ರೆಸ್​ ಅಧ್ಯಕ್ಷರಿಗೆ ಕುಕ್ಕರ್​ ಮೇಲೆ ಬಹಳ ವ್ಯಾಮೋಹ. ಅವರಿಗೆ ಎರಡು ಕುಕ್ಕರ್​ ಮೇಲೆ ವ್ಯಾಮೋಹ ಒಂದು ಮಂಗಳೂರು ಮತ್ತೊಂದು ಬೆಳಗಾವಿ. ಬೆಳಗಾವಿ ಕುಕ್ಕರ್​ ಒಡೆದರೆ, ಮನೆ ಒಡೆಯುತ್ತದೆ. ಮಂಗಳೂರು ಕುಕ್ಕರ್​ ಒಡೆದರೆ ದೇಶ ಒಡೆಯುತ್ತದೆ. ಅವರು ಭಯೋತ್ಪಾದಕರ ಪರವಾಗಿ ಮಾತನಾಡುತ್ತಾರೆ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಸಿಎಂ ನಾನು ಆಗೋದಲ್ಲ, ಅದು ಹೈಕಮಾಂಡ್ ಪ್ರಸಾದ್: ಡಿಕೆಶಿ ಸ್ಪಷ್ಟ ನುಡಿ

ಕಾಂಗ್ರೆಸ್​ ಅಂದರೇ ಭ್ರಷ್ಟಚಾರ. ಸಿದ್ದರಾಮಯ್ಯ ಮತ್ತು ಡಿಕೆಶಿ ಭ್ರಷ್ಟಚಾರಿಗಳು. ನಾವೆಲ್ಲಾ ರಾಷ್ಟ್ರದ ಬಗ್ಗೆ ಯೋಚನೆ ಮಾಡುತ್ತೇವೆ. ಇವರು ಯೋಚನೆ ಮಾಡುವುದೇ ಬೇರೆ. ಕಾಂಗ್ರೆಸ್​ನ ಯೋಜನೆಯಲ್ಲಿ ಹಿಂದೂಗಳ ಹತ್ಯೆ ಇತ್ತು. ಅಮಿತ್​ ಶಾ ಮತ್ತು ಮೋದಿ ಅವರಿಂದ ಪಿಎಫ್​ಐ ಮತ್ತು ಅದರ ಸಂಘಟನೆಗಳನ್ನು ನಿಷೇಧ ಮಾಡಲು ಬಿಜೆಪಿಗೆ ಸಾಧ್ಯವಾಯಿತು ಎಂದರು.

Last Updated : Jan 2, 2023, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.