ETV Bharat / state

ನೆಟ್‌ವರ್ಕ್ ಸಮಸ್ಯೆ ಕುರಿತು ಪ್ರಧಾನಿಗೆ ಪತ್ರ: ಯುವಕನ ಮನವಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

author img

By

Published : Sep 23, 2021, 6:36 AM IST

Prime Minister
Prime Minister

ಕೊಂಬಾರು ಗ್ರಾಮದ ನೆಟ್‌ವರ್ಕ್ ಸಮಸ್ಯೆ ಕುರಿತು ಎಬಿವಿಪಿ ಕಾರ್ಯಕರ್ತ ಜಗದೀಶ್‌ ಕಾಪಾರು ಬರೆದ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ.

ಸುಬ್ರಹ್ಮಣ್ಯ: ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ತೀವ್ರ ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಪರವಾಗಿ ಗ್ರಾಮದ ಯುವಕ, ಎಬಿವಿಪಿ ಕಾರ್ಯಕರ್ತ ಜಗದೀಶ್‌ ಕಾಪಾರು ಸಮಸ್ಯೆ ಬಗೆಹರಿಸುವಂತೆ ಪ್ರಧಾನ ಮಂತ್ರಿಗೆ ಬರೆದ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ.

ಬಹುತೇಕ ಅರಣ್ಯ ಪ್ರದೇಶದಿಂದ ಆವೃತವಾಗಿರುವ ತೀರಾ ಕುಗ್ರಾಮವಾಗಿರುವ ಕೊಂಬಾರು ಗ್ರಾಮದಲ್ಲಿ ಬಿಎಸ್​ಎನ್​ಎಲ್‌ ಟವರ್‌ ಇದ್ದರೂ ವಿದ್ಯುತ್‌ ಕೈ ಕೊಟ್ಟಾಗ ಇಲ್ಲಿನ ಮೊಬೈಲ್ ನೆಟ್‌ವರ್ಕ್ ಕೂಡ ಕೈ ಕೊಡುತ್ತದೆ.

ಈ ಹಿನ್ನೆಲೆಯಲ್ಲಿ ಗ್ರಾಮದ ಕಾಪಾರು, ಬಗ್ಪುಣಿ, ಮುಗೇರಡ್ಕ, ಕಲಾಯ, ಕಲ್ಲರ್ತನೆ, ಕೆಂಜಾಳ, ಮಣಿಭಾಂಡ, ಕಟ್ಟೆ, ಪೆರುಂದೋಡಿ, ಅನಿಲ ಪ್ರದೇಶದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಈ ಕುರಿತು ಹಲವಾರು ಬಾರಿ ಟೆಲಿಕಾಂ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದನ್ನು ಓದಿ: ಇಂದಿನಿಂದ ಮೂರು ದಿನ ಮೋದಿ ಅಮೆರಿಕ ಪ್ರವಾಸ.. ದೆಹಲಿಯಿಂದ ವಿಮಾನವೇರಿದ ಪ್ರಧಾನಿ

ಕೊಂಬಾರು ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿಯೂ ಇದ್ದು, ಆರೋಗ್ಯ ಸಮಸ್ಯೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಹೊರ ಪ್ರಪಂಚ ಸಂಪರ್ಕಿಸಲು ಅಸಾಧ್ಯವಾಗಿದೆ. ಮಾತ್ರವಲ್ಲದೇ, ಕೊರೊನಾ ಸಂಕಷ್ಟದಿಂದಾಗಿ ಆನ್‌ಲೈನ್‌ ತರಗತಿಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು ಕೂಡ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಆದ್ದರಿಂದ ಬಿಎಸ್​ಎನ್​ಎಲ್‌ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಬೇಕು. ಇತರ ಖಾಸಗಿ ಟೆಲಿಕಾಂ ಕಂಪನಿಗಳ ಟವರ್‌ಗಳನ್ನು ಸ್ಥಾಪಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮಾನ್ಯ ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಜಗದೀಶ್‌ ವಿನಂತಿಸಿದ್ದರು.

Prime Minister
ಪ್ರಧಾನಿಗೆ ಬರೆದ ಪತ್ರ

ಇದಕ್ಕೆ ಸ್ಪಂದಿಸಿರುವ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು, ಆ ಕುರಿತು ಸೂಕ್ತಕ್ರಮ ಕೈಗೊಳ್ಳುವಂತೆ ಬಿಎಸ್​ಎನ್​ಎಲ್‌ ಮಂಗಳೂರು ವಿಭಾಗದ ಅಧಿಕಾರಿಗಳಿಗೆ ಅದೇಶಿಸಿರುವ ಕುರಿತು ಉಲ್ಲೇಖಿಸಿ ಜಗದೀಶ್‌ ಅವರಿಗೆ ಪತ್ರ ಬರೆದಿದ್ದಾರೆ.

ಇದಕ್ಕೆ ಪೂರಕವಾಗಿ ಜಗದೀಶ್‌ ಅವರಿಗೆ ಪತ್ರ ಬರೆದು ಬಳಿಕ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಮಂಗಳೂರು ಬಿಎಸ್​ಎನ್​ಎಲ್‌ ವಿಭಾಗದ ಅಧಿಕಾರಿಗಳು, ವಿದ್ಯುತ್‌ ಸಮಸ್ಯೆ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗದಂತೆ ಟವರ್‌ಗೆ ಬ್ಯಾಟರಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.