ETV Bharat / state

ಬಂಟ್ವಾಳ: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ, ಬಸ್ ಕಂಡಕ್ಟರ್ ಬಂಧನ

author img

By

Published : Mar 26, 2023, 12:25 PM IST

minor-school-girl-sexually-harassed-by-bus-conductor-in-bantwal
ಬಂಟ್ವಾಳ: ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ.. ಬಸ್ ಕಂಡೆಕ್ಟರ್ ಅರೆಸ್ಟ್

ಬಂಟ್ವಾಳದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಸಾರಿಗೆ ಬಸ್​ ನಿರ್ವಾಹಕನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ : ಶಾಲಾ ಬಾಲಕಿಗೆ ಸಾರಿಗೆ ಬಸ್​ ನಿರ್ವಾಹಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ನಡೆದಿದೆ. ಬಂಟ್ವಾಳ ಪೊಲೀಸರು ಬಾಗಲಕೋಟೆ ನಿವಾಸಿ ಬಿ.ಸಿ.ರೋಡ್ ಕೆಎಸ್ಆರ್​​ಟಿಸಿ ಬಸ್ ಡಿಪೋದಲ್ಲಿ ನಿರ್ವಾಹಕನಾಗಿರುವ ದವಾಳ್ ಸಾಬ್ ಎಂಬಾತನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಕಲ್ಲಡ್ಕದಿಂದ ಬಿ.ಸಿ.ರೋಡಿಗೆ ಬರುವಾಗ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿಯ ಪೋಷಕರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಲ್ಲಡ್ಕದಿಂದ ಬರುತ್ತಿದ್ದಾಗ ಪಾಣೆಮಂಗಳೂರು ಬಸ್ ಸ್ಟಾಪ್​​ನಲ್ಲಿ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಇಳಿದು ಹೋಗಿದ್ದರು. ಈ ಸಂದರ್ಭದಲ್ಲಿ ಬಸ್​ನಲ್ಲಿ ಬಾಲಕಿ ಮತ್ತು ಬಸ್ ಚಾಲಕ, ನಿರ್ವಾಹಕ ಮೂರೇ ಜನ ಇದ್ದು ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿ ದೂರಿನಲ್ಲಿ ವಿವರಿಸಿದ್ದಾಳೆ.

ಪ್ರಕರಣ ದಾಖಲಾದ ಅರ್ಧ ಗಂಟೆಯೊಳಗೆ ಬಂಟ್ವಾಳ ನಗರ ಪೊಲೀಸ್​ ಠಾಣೆಯ​​ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದಲ್ಲಿ ಎಸ್.ಐ.ರಾಮಕೃಷ್ಣ ಅವರ ತಂಡ ಆರೋಪಿಯನ್ನು ಬಂಧಿಸಿದೆ.

ಇದನ್ನೂ ಓದಿ : ಯುವಕನ ಅತ್ಯಾಚಾರ ಕೃತ್ಯಕ್ಕೆ ಅಪ್ರಾಪ್ತ ಬಾಲಕಿ ಬಲಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.