ETV Bharat / state

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 'ಸರ್ಪ ಸಂಸ್ಕಾರ ಸೇವಾ' ದರ ಹೆಚ್ಚಳ

author img

By

Published : Sep 23, 2022, 1:45 PM IST

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾಗಿರುವ ಸರ್ಪ ಸಂಸ್ಕಾರ ಸೇವಾ ದರವನ್ನು ಪರಿಷ್ಕರಿಸಲಾಗಿದೆ.

Kukke Subramanya Temple
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಸುಬ್ರಮಣ್ಯ: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ ಸೇವಾ ದರ ಮತ್ತು ಕ್ರಿಯಾ ಕರ್ತೃರ ಕ್ರಿಯಾ ದಕ್ಷಿಣೆ ಹೆಚ್ಚಳ ಮಾಡಲಾಗಿದೆ.

Kukke Subramanya Temple
ಪ್ರಕಟಣೆ ಪ್ರತಿ

ಈ ಮೊದಲು 3,200 ರೂ.ಇದ್ದ ಸರ್ಪ ಸಂಸ್ಕಾರ ಸೇವೆಯ ದರವನ್ನು ರೂ. 4,200ಕ್ಕೆ ಹೆಚ್ಚಿಸಲಾಗಿದೆ ಮತ್ತು ಕ್ರಿಯಾ ಕರ್ತೃರ ಕ್ರಿಯಾ ದಕ್ಷಿಣೆಯನ್ನೂ ಹೆಚ್ಚಿಸಲಾಗಿದೆ. ಈ ಮೂಲಕ ಸರ್ಪ ಸಂಸ್ಕಾರದ ದರದಲ್ಲಿ ಒಂದು ಸಾವಿರ ಹೆಚ್ಚಿಸಲಾಗಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನಾಗದೋಷ ನಿವಾರಣೆಗೆ ದೇಶದ ಹಲವಾರು ಮಂದಿ ಕುಕ್ಕೆಯಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸುತ್ತಾರೆ. ವಿಶ್ವ ಪ್ರಸಿದ್ಧ ಕ್ರಿಕೆಟ್‌ ತಾರೆ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವು ಗಣ್ಯರು ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ ಸರ್ಪ ಸಂಸ್ಕಾರ ಸೇವೆ ಮಾಡಿಸಿದ ಬಳಿಕ ದೇಶಾದ್ಯಂತ ಕುಕ್ಕೆ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಸೇವೆಯ ಮಹತ್ವ ಮತ್ತಷ್ಟು ವ್ಯಾಪಕವಾಗಿ ಪ್ರಚಾರ ಪಡೆದಿತ್ತು. ಇದೀಗ ದರ ಹೆಚ್ಚಾಗಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಷಷ್ಠಿ, ಆಶ್ಲೇಷ ನಕ್ಷತ್ರ, ರಜಾದಿನ: ಕುಕ್ಕೆಯಲ್ಲಿ ಭಾರಿ ಜನಸ್ತೋಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.