ಷಷ್ಠಿ, ಆಶ್ಲೇಷ ನಕ್ಷತ್ರ, ರಜಾದಿನ: ಕುಕ್ಕೆಯಲ್ಲಿ ಭಾರಿ ಜನಸ್ತೋಮ

author img

By

Published : Jun 5, 2022, 7:16 PM IST

Updated : Jun 5, 2022, 7:45 PM IST

kukke

ಷಷ್ಠಿ ಮತ್ತು ಆಶ್ಲೇಷ ನಕ್ಷತ್ರದ ವಿಷೇಶ ದಿನದ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬಂದಿದೆ. ದೇವಳ ಆಡಳಿತ ಮಂಡಳಿ ಪ್ರವಾಸಿಗರಿಗಾಗಿ ನಿನ್ನೆಯೇ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಹೀಗಾಗಿ ರಾತ್ರಿ ಬಂದ ಪ್ರವಾಸಿಗರ ತಂಗಲು ತಾಣದ ಕೊರತೆ ಆಗಲಿಲ್ಲ.

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ವಿಶ್ವ ಪ್ರಸಿದ್ಧ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ರವಿವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ದೇವರು ಒಳಾಂಗಣ ಪ್ರವೇಶಿಸುವ ಪುಣ್ಯ ದಿನ ಸೇರಿದಂತೆ ರಜಾದಿನವು ಆಗಿರುವುದರಿಂದ ಕ್ಷೇತ್ರಕ್ಕೆ ಭಕ್ತರ ಜನಸಮೂಹವೇ ಹರಿದು ಬಂದಿದೆ.

ಇಂದಿನ ದಿನ ಷಷ್ಠಿ, ಆಶ್ಲೇಷ ನಕ್ಷತ್ರ ಇರುವುದರಿಂದ ಆಶ್ಲೇಷ ಪೂಜೆ ಮಾಡಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದಾರೆ. ಕುಕ್ಕೆಯ ರಾಜಗೋಪುರದಿಂದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಶನಿವಾರ ರಾತ್ರಿಯಿಂದಲೇ ಕುಕ್ಕೆ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದಾರೆ.

ಕುಕ್ಕೆಯಲ್ಲಿ ಭಾರಿ ಜನಸ್ತೋಮ

ಈ ಕಾರಣದಿಂದ ದೇವಳದ ವಸತಿ ಗೃಹ ಹಾಗೂ ಖಾಸಗಿ ವಸತಿ ಗೃಹಗಳೂ ಸಂಪೂರ್ಣವಾಗಿ ತುಂಬಿವೆ. ಕುಕ್ಕೆ ದೇವಳದ ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿ ಮತ್ತು ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ತಂಗಲು ದೇಗುಲದಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪೀರ್‌ಪಾಷಾ ಬಂಗ್ಲೆ ಮೂಲ ಅನುಭವ ಮಂಟಪ : ಸಂಶೋಧನೆ ನಡೆಸಲು ಸಿಎಂಗೆ ಮಠಾಧೀಶರ ನಿಯೋಗ ಮನವಿ

Last Updated :Jun 5, 2022, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.