ETV Bharat / state

ಕುಕ್ಕೆ ಸುಬ್ರಮಣ್ಯ: ಕುಮಾರಧಾರ ನದಿಯಲ್ಲಿ ಕಣ್ಮರೆಯಾದ ಯುವಕನ ಮೃತದೇಹ ಪತ್ತೆ

author img

By

Published : Aug 24, 2022, 8:50 PM IST

ಆಗಸ್ಟ್​ 21ರಂದು ಕುಮಾರಧಾರ ಸ್ನಾನ ಘಟ್ಟದಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯ ಮೃತದೇಹ ಒಂದು ಕಿಲೋ ಮೀಟರ್​ ದೂರದಲ್ಲಿ ಪತ್ತೆಯಾಗಿದೆ. ​

dead-body-found-in-kumaradhara-river
ಕುಕ್ಕೆ ಸುಬ್ರಮಣ್ಯ ಕುಮಾರಧಾರ ನದಿಯಲ್ಲಿ ಕಣ್ಮರೆಯಾದ ಯುವಕನ ಮೃತದೇಹ ಪತ್ತೆ

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಬಂದ ಪ್ರವಾಸಿಗನೊಬ್ಬ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದು ಕಣ್ಮರೆಯಾಗಿದ್ದು ಮೃತದೇಹ ಘಟನಾ ಸ್ಥಳದಿಂದ ಸುಮಾರು ಒಂದು ಕಿ. ಮೀ ಕೆಳಗಡೆ ಇಂದು ದೊರೆತಿದೆ. ಮೂಲತಃ ಮಂಡ್ಯದವರಾದ ಇವರು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು ಬೆಂಗಳೂರು ದೀಪಾಂಜಲಿ ನಗರದಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

21ರಂದು ಶಿವು (25) ಎಂಬ ಯುವಕ ಕುಮಾರಧಾರ ಸ್ನಾನ ಘಟ್ಟದಲ್ಲಿ ಈಜಲು ಹೋದಾಗ ಕೊಚ್ಚಿ ಹೋಗಿದ್ದರು. ಸುಮಾರು 21 ಜನ ಗೆಳೆಯರ ತಂಡ ವಿವಿಧ ಕ್ಷೇತ್ರಗಳ ಭೇಟಿಗೆ ಬಂದಿದ್ದು ಕುಕ್ಕೆಗೂ ಆಗಮಿಸಿ ಇಲ್ಲಿನ ಕುಮಾರಧಾರ ಸ್ನಾನಘಟ್ಟಕ್ಕೂ ಬಂದಿದ್ದರು. ನದಿಗೆ ಇಳಿಯದಂತೆ ಸ್ನೇಹಿತರು ಸೂಚಿಸಿದರೂ ತಡೆಹಗ್ಗ ದಾಟಿ ಈತ ನದಿಗೆ ಸ್ನಾನಕ್ಕಾಗಿ ಇಳಿದಿದ್ದಾನೆ ಎಂದು ಆತನ ಸ್ನೇಹಿತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಸುಬ್ರಹ್ಮಣ್ಯ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ತಂಡ ಮೂರು ದಿನಗಳಿಂದ ನದಿಯಲ್ಲಿ ಹುಡುಕಾಟ ಮಾಡಿದ್ದರು.

ಇದನ್ನೂ ಓದಿ: ಕುಕ್ಕೆ ಸುಬ್ರಮಣ್ಯದಲ್ಲಿ ಸ್ನಾನಕ್ಕಾಗಿ ನದಿಗೆ ಹಾರಿದ ಖಾಸಗಿ ಕಂಪನಿ ಉದ್ಯೋಗಿ ಕಣ್ಮರೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.