ETV Bharat / state

ಬೆಳ್ತಂಗಡಿ ಶಾಸಕರಿಂದ ಸನತ್ ಮನೆಗೆ ಭೇಟಿ ನೀಡಿ‌ ಪೋಷಕರಿಗೆ ಸಾಂತ್ವನ: 5 ಲಕ್ಷ ರೂ. ಪರಿಹಾರ ಘೋಷಣೆ

author img

By

Published : Feb 17, 2021, 11:40 AM IST

ಬಂಗರಪಲ್ಕೆ ಫಾಲ್ಸ್‌ ಬಳಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಸನತ್ ಶೆಟ್ಟಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದ್ದಾರೆ.

Belthangadi
ಬೆಳ್ತಂಗಡಿ

ಬೆಳ್ತಂಗಡಿ(ದ.ಕ): ಎಳನೀರು, ಬಂಗರಪಲ್ಕೆ ಫಾಲ್ಸ್‌ ಬಳಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಸನತ್ ಶೆಟ್ಟಿ ಮೃತದೇಹ 23 ದಿನಗಳ ಬಳಿಕ ಫೆ.16, ಮಂಗಳವಾರ ಸಂಜೆ‌‌ ಲಭಿಸಿದ್ದು, ಈ ಸಂದರ್ಭದಲ್ಲಿ ಸನತ್ ಮನೆಗೆ ಭೇಟಿ‌ ನೀಡಿದ ಶಾಸಕ ಹರೀಶ್ ಪೂಂಜ ಮೃತನ ಅಂತಿಮ ದರ್ಶನ ಮಾಡಿ ಪೋಷಕರಿಗೆ ಸಾಂತ್ವನ ತಿಳಿಸಿದರು.

ಪ್ರಕೃತಿ ವಿಕೋಪ ‌ಪರಿಹಾರ ಧನ ಸನತ್ ಕುಟುಂಬಕ್ಕೆ 5 ಲಕ್ಷ ರೂ. ಯನ್ನು ತಹಶೀಲ್ದಾರ್ ಮೂಲಕ ವಿತರಿಸುವುದಾಗಿ ತಿಳಿಸಿದರು. ಅದೇ ರೀತಿ ಮಾನವೀಯ ನೆಲೆಯಲ್ಲಿ‌ ಸುಮಾರು 21 ದಿನ ಕಾರ್ಯಾಚರಣೆಯಲ್ಲಿ ‌ಪಾಲ್ಗೊಂಡ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಳನೀರು ಗ್ರಾ.ಪಂ. ಸದಸ್ಯ ಪ್ರಕಾಶ್ ಜೈನ್ ಹಾಗೂ ವಿವಿಧ ಸಂಘ- ಸಂಸ್ಥೆಗಳು, ಸ್ಥಳೀಯರು ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದರು.

ದುರ್ಗಮ ಪ್ರದೇಶದಲ್ಲಿ ಅತ್ಯಂತ ಕಷ್ಟದಾಯಕವಾದ ಕಾರ್ಯಚರಣೆಯಲ್ಲಿ‌ ಸ್ವಯಂ ಸೇವಕರಾಗಿ ದುಡಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.