ETV Bharat / state

ಸಜಿಪನಡು: ಉರುಳಿದ 600 ವರ್ಷದ ಮರ, ಕಾರಿನೊಳಗಿದ್ದ ವ್ಯಕ್ತಿಗೆ ಗಾಯ

author img

By

Published : Jun 26, 2022, 6:47 AM IST

ಅಂದಾಜು ಆರು ಶತಮಾನದಷ್ಟು ಹಳೆಯ ಮರವೊಂದು ಧರೆಗುರುಳಿದ್ದು ಕಾರು ಕಾರು ಜಖಂಗೊಂಡಿದೆ.

A 600 year old peepal tree fallen on a car
600 ವರ್ಷ ಹಳೆಯ ಅಶ್ವತ್ಥ ಮರ ಕಾರಿನ ಮೇಲೆ ಬಿದ್ದಿರುವುದು

ಬಂಟ್ವಾಳ: ತಾಲೂಕಿನ ಸಜಿಪನಡುವಿನ ಲಕ್ಷ್ಮಣಕಟ್ಟೆ ಎಂಬಲ್ಲಿ ಸುಮಾರು 600 ವರ್ಷಗಳಷ್ಟು ಹಳೆಯ ಅಶ್ವತ್ಥ ಮರ ಉರುಳಿಬಿದ್ದಿದೆ. ಮರದ ಕೆಳಗೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಲುಕ್ಮಾನ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರನ್ನು ಮರದ ಬಳಿ ನಿಲ್ಲಿಸಿ ಕಾರಿನೊಳಗಿದ್ದ ತನ್ನ ಸಂಬಂಧಿ ಮಹಿಳೆಯರಿಬ್ಬರನ್ನು ಇಳಿಸಿ ತಾನೂ ಇಳಿಯಲು ಹೊರಟಾಗ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಮರ ಬಿದ್ದು ರೈತ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.