ETV Bharat / state

ಚಂದ್ರಗ್ರಹಣ ಎಫೆಕ್ಟ್; ಎಮ್ಮೆ ಮೇಲೆ ಚಂದ್ರ-ಸೂರ್ಯನ ಚಿತ್ರ... ಕಾರಣ!?

author img

By

Published : Jun 6, 2020, 4:15 AM IST

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರಾಣಿಗಳ‌ ಮೇಲೆ ಚಂದ್ರ ಗ್ರಹಣ ಪರಿಣಾಮ ಬೀರಬಾರದೆಂದು ಈ ರೀತಿ ಮಾಡಲಾಗಿದೆ.

lunar
lunar

ಚಿತ್ರದುರ್ಗ: 2020ನೇ ಸಾಲಿನ ಎರಡನೇ ಚಂದ್ರ ಗ್ರಹಣಕ್ಕೆ ಇಡೀ ಪ್ರಪಂಚವೇ ಸಾಕ್ಷಿಯಾಗಿದ್ದು, ಇದರ ಪರಿಣಾಮ ಜಾನುವಾರುಗಳ ಮೇಲೆ ಬೀಳಬಾರದು ಎಂದು ಇಲ್ಲೊಂದು ಗ್ರಾಮದಲ್ಲಿ ಸೂರ್ಯ-ಚಂದ್ರನ ಚಿತ್ರ ಬಿಡಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರಾಣಿಗಳ‌ ಮೇಲೆ ಚಂದ್ರ ಗ್ರಹಣ ಪರಿಣಾಮ ಬೀರಬಾರದೆಂದು ಎಮ್ಮೆ ಹಾಗೂ ಹಸುಗಳ‌ ಮೈ ಮೇಲೆ ಸುಣ್ಣದಿಂದ ಸೂರ್ಯ ಹಾಗೂ ಚಂದ್ರಗಳ ಚಿತ್ರಗಳನ್ನು ಬಿಡಿಸುವ ಮೂಲಕ ಮೂಢನಂಬಿಕೆಗೆ ಹಳ್ಳಿಯ ಜನ್ರು ಮಾರು ಹೋಗಿದ್ದಾರೆ.

ಚಂದ್ರ ಹಾಗೂ ಸೂರ್ಯ ಗ್ರಹಣಗಳ ಸಮಯದಲ್ಲಿ ಅದರ ಛಾಯೆ ಮಕ್ಕಳು ಹಾಗು ಗರ್ಭಿಣಿಯರು ಸೇರಿದಂತೆ ಮನುಷ್ಯರ ಮೇಲೆ ಬೀರಬಾರದು ಎಂದು ವಿವಿಧ ಆಚರಣೆ ಕೈಗೊಳ್ಳಲಾಗುತ್ತಿದೆ. ಆದರೆ ಈ ಚಂದ್ರಗ್ರಹಣದ ಕರಿ ಛಾಯೆ ಬಯಲಲ್ಲೇ ಕಾಲ‌ ಕಳೆಯುವ ಹಾಗೂ ಗರ್ಭ ಧರಿಸುವ ಜಾನುವಾರುಗಳ‌ ಮೇಲೆ ಬೀರಬಾರದೆಂದು ಸುಣ್ಣದಿಂದ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಅವುಗಳ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.