ETV Bharat / state

ಬಾಲಕಿಯ ಕಣ್ಣುದಾನ ಮಾಡಿದರೂ ಕೊಂಡೊಯ್ಯಲು ವೈದ್ಯರ ವಿಳಂಬ.. ಸ್ಥಳೀಯರಿಂದ ಆಕ್ರೋಶ

author img

By

Published : Oct 30, 2022, 5:33 PM IST

ವೈಷ್ಣವಿ
ವೈಷ್ಣವಿ

ಮೂಡಿಗೆರೆಯ ಬೆಥನಿ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಎಂಬ ಬಾಲಕಿ ಮೃತಪಟ್ಟ ಹಿನ್ನೆಲೆ ಆಕೆಯ ಪೋಷಕರು ಅವಳ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಚಿಕ್ಕಮಗಳೂರು: ಮೂಡಿಗೆರೆಯ ಬೆಥನಿ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ (14) ಎಂಬ ಬಾಲಕಿ ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೀಗಾಗಿ ಪೋಷಕರು ಆಕೆಯ ಕಣ್ಣುಗಳನ್ನು ದಾನ ಮಾಡಿದ್ದಾರೆ. ಆದರೆ ಬಾಲಕಿಯ ಕಣ್ಣುಗಳನ್ನು ಪಡೆಯಲು ವೈದ್ಯರು ವಿಳಂಬ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಗಳು ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಪೋಷಕರು ತೀವ್ರ ದುಃಖಿತರಾಗಿದ್ದು, ಈ ಮಧ್ಯೆ ಮಹತ್ವದ ನಿರ್ಧಾರವನ್ನು ಸಹ ತೆಗೆದುಕೊಂಡಿದ್ದರು. ಮಗಳ ಕಣ್ಣು ದಾನ ಮಾಡಿದ್ದರು. ಆದ್ರೆ ನೇತ್ರಗಳನ್ನು ಪಡೆಯಲು ವೈದ್ಯರೇ ಹಿಂದೇಟು ಹಾಕಿದ್ದರಂತೆ. ಇದರಿಂದ ಸಾವಿನಲ್ಲೂ ಸಾರ್ಥಕತೆ ಮೆರೆಯಲು ಮುಂದಾಗಿದ್ದ ಕುಟುಂಬಕ್ಕೆ ಮತ್ತಷ್ಟು ದುಃಖಿತರಾಗಿದ್ದರು ಎಂದು ತಿಳಿದುಬಂದಿದೆ.

ಬಾಲಕಿ ಮೃತಪಟ್ಟ ತಕ್ಷಣ ಕಣ್ಣು ದಾನಕ್ಕೆ ಪೋಷಕರು ಮುಂದಾಗಿದ್ದರು. ಶನಿವಾರ ತಡ ರಾತ್ರಿಯಾದ್ರೂ ಕಣ್ಣು ದಾನ ಪಡೆಯಲು ವೈದ್ಯರು ಬಾರದ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹಾಸನದ ವೈದ್ಯರ ತಂಡ ಆಗಮಿಸಿದೆ.

ಈ ವೇಳೆ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದು, ತಡರಾತ್ರಿ ಜನಾಕ್ರೋಶದ ನಡುವೆ ನೇತ್ರದಾನ ಮಾಡಲಾಗಿದೆ. ನಿನ್ನೆ ಸಂಜೆ 7ಕ್ಕೆ ಹೃದಯಾಘಾತದಿಂದ ಈ ಬಾಲಕಿ ಸಾವನ್ನಪ್ಪಿದ್ದಾಳೆ.

ಓದಿ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು; ಪೋಷಕರಿಂದ ಮಗಳ ನೇತ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.