ETV Bharat / state

'ಹಣ ಕೊಡಿ, ಇಲ್ಲ ಭೂಮಿ ಬಿಡಿ' ಅಂತಾರಂತೆ ಅಧಿಕಾರಿಗಳು: ದಯಾಮರಣಕ್ಕೆ ಪತ್ರ ಬರೆದ ವೃದ್ಧ ದಂಪತಿ!

author img

By

Published : Jan 21, 2021, 5:57 PM IST

Updated : Jan 21, 2021, 6:24 PM IST

elder-couple-write-a-letter-to-prime-minister-for-euthanasia
ದಯಾಮರಣಕ್ಕೆ ಪತ್ರ ಬರೆದ ವೃದ್ಧ ದಂಪತಿ

ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ವೃದ್ಧ ದಂಪತಿ, ದಯಾಮರಣಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದರು. ಪ್ರಧಾನಿ ಕಚೇರಿಯಿಂದ ಉತ್ತರ ಬಂದಿದ್ದು, ಮುಖ್ಯ ಕಾರ್ಯದರ್ಶಿ, ಪೊಲೀಸ್​ ವರಿಷ್ಠಾಧಿಕಾರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಆದರೆ ಅರಣ್ಯಾಧಿಕಾರಿಗಳ ದೌರ್ಜನ್ಯ ಇನ್ನೂ ನಿಂತಿಲ್ಲ ಎಂದು ದಂಪತಿ ದೂರಿದ್ದಾರೆ.

ಚಿಕ್ಕಮಗಳೂರು: ಬೆಳೆದ ಕಾಫಿ ಬೆಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಿದ್ದಲ್ಲದೆ, ಹಣ ನೀಡದಿದ್ದರೆ ಭೂಮಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ವೃದ್ಧ ದಂಪತಿ ದಯಾ ಮರಣಕ್ಕಾಗಿ ಪ್ರಧಾನಿ, ರಾಷ್ಟ್ರಪತಿ, ಸಿಎಂಗೆ ಪತ್ರ ಬರೆದಿದ್ದಾರೆ.

ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ವೃದ್ಧ ದಂಪತಿ, ದಯಾಮರಣಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದರು. ಪ್ರಧಾನಿ ಕಚೇರಿಯಿಂದ ಉತ್ತರ ಬಂದಿದ್ದು, ಮುಖ್ಯ ಕಾರ್ಯದರ್ಶಿ, ಪೊಲೀಸ್​ ವರಿಷ್ಠಾಧಿಕಾರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಆದರೆ ಅರಣ್ಯಾಧಿಕಾರಿಗಳ ದೌರ್ಜನ್ಯ ಇನ್ನೂ ನಿಂತಿಲ್ಲ ಎಂದು ದಂಪತಿ ದೂರಿದ್ದಾರೆ.

ಪ್ರಧಾನಿಯೇನು ಇಲ್ಲಿಗೆ ಬರ್ತಾರಾ?: ಒಂದು ಎಕರೆಗೆ ಒಂದು ಲಕ್ಷದಂತೆ ಐದು ಎಕರೆಗೆ ಐದು ಲಕ್ಷ ಕೊಡಿ. ನಿಮ್ಮ ತೋಟದ ಕಡೆ ಮುಖ ಮಾಡುವುದಿಲ್ಲ. ನಿಮ್ಮ ಅಕ್ಕಪಕ್ಕದ ತೋಟದವರು ಹಾಗೆಯೇ ಕೊಡುತ್ತಿದ್ದಾರೆ. ಹೀಗಾಗಿ ಅವರನ್ನು ಬಿಟ್ಟಿದ್ದೇವೆ. ಪ್ರಧಾನಿ, ರಾಷ್ಟ್ರಪತಿ, ಸಿಎಂ ಯಾರಿಗೆ ಬೇಕಾದರೂ ಪತ್ರ ಬರೆಯಿರಿ. ಅವರೇನು ಇಲ್ಲಿಗೆ ಬರ್ತಾರಾ, ನಮ್ಮ ವರದಿಯೇ ಅಂತಿಮ. ಎಲ್ಲಿ ಏನ್ ಮಾಡಬೇಕೋ ಅದನ್ನು ಮಾಡುತ್ತೇವೆ. ಹೇಗೆ ಜಮೀನಿನಲ್ಲಿ ಉಳುಮೆ ಮಾಡುತ್ತೀರಾ ನೋಡ್ತೀವಿ ಎಂದು ಅಧಿಕಾರಿಗಳು ಧಮ್ಕಿ ಹಾಕಿದ್ದಾರೆ ಎಂದು ದಂಪತಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ...ಬರಿಗೈಲಿ ಕಾಲೇಜಿನ ಶೌಚಾಲಯದ ಕಿಟಕಿ ಗಾಜು ಒಡೆದು ವಿಡಿಯೋ ಹರಿಬಿಟ್ಟ ವಿದ್ಯಾರ್ಥಿ!

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ದುರ್ಗಾ ಗ್ರಾಮದ ದಂಪತಿ ರಾಮೇಗೌಡ-ಶಾರದಮ್ಮ ಎಂಬುವರೇ ದಯಾಮರಣಕ್ಕೆ ಪತ್ರ ಬರೆದಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ವರ್ಷದ ಹಿಂದೆಯೇ ಮೃತಪಟ್ಟಿದ್ದು, ಮತ್ತೊಬ್ಬ ಬೇರೆಯಾಗಿ ವಾಸಿಸುತ್ತಿದ್ದಾನೆ. ಇವರು 40 ವರ್ಷಗಳಿಂದ 15 ಎಕರೆ ಕಂದಾಯ ಭೂಮಿಯಲ್ಲಿ ಕಾಫಿ-ಮೆಣಸು ಬೆಳೆದಿದ್ದರಂತೆ. ಇದು ಅರಣ್ಯ ಭೂಮಿ ಎಂದು 10 ಎಕರೆ ತೋಟವನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ, 30 ವರ್ಷದ ತೋಟವನ್ನು ಕಣ್ಣೆದುರೇ ಹಾಳು ಮಾಡಿದೆಯಂತೆ.

ಕಳ್ಳತನ ಪ್ರಕರಣ ದಾಖಲಿಸುತ್ತೇವೆ: ಅವರಿವರ ಕೈ-ಕಾಲು ಹಿಡಿದು ಬದುಕಿಗಾಗಿ ಐದು ಎಕರೆ ಉಳಿಸಿಕೊಂಡು ಫಾರಂ-57ನಲ್ಲಿ ಅರ್ಜಿ ಹಾಕಿದ್ದೇವೆ. ಆದರೆ, ಆಲ್ದೂರು ಅರಣ್ಯ ಅಧಿಕಾರಿಗಳು ಮೂರು ಬಾರಿ ಎರಡ್ಮೂರು ವರ್ಷದ ಕಾಫಿ ಗಿಡ ಹಾಗೂ ಮೆಣಸು ಬಳ್ಳಿಯನ್ನು ಕಡಿದು ಹಾಕಿದ್ದಾರೆ. ಐದು ಲಕ್ಷ ಕೊಡಿ, ಈ ಕಡೆ ತಲೆ ಹಾಕಲ್ಲ. ಇಲ್ಲವಾದರೆ ತೋಟಕ್ಕೆ ಕಾಲಿಟ್ಟರೆ ಗಂಧದ ಕಳ್ಳತನ, ಪ್ರಾಣಿ ಬೇಟೆ ಪ್ರಕರಣ ದಾಖಲಿಸಿ ಒಳಗೆ ಹಾಕುತ್ತೇವೆ ಎಂಬ ಬೆದರಿಕೆ ಹಾಕುತ್ತಿದ್ದಾರೆ ಎಂದು ದಂಪತಿ ದೂರಿದ್ದಾರೆ.

ದಯಾಮರಣಕ್ಕೆ ಪತ್ರ ಬರೆದ ವೃದ್ಧ ದಂಪತಿ

ದಂಪತಿ ತೋಟದ ಪಕ್ಕದಲ್ಲೇ 25 ಎಕರೆ, 10 ಎಕರೆ ಒತ್ತುವರಿ ಮಾಡಿಕೊಂಡಿರುವ ತೋಟಕ್ಕೆ ಅಧಿಕಾರಿಗಳು ಕಾಲಿಟ್ಟಿಲ್ಲ. ನಮ್ಮ ತೋಟಕ್ಕೆ ಬರುತ್ತಾರೆ ಎನ್ನುತ್ತಾರೆ ದಂಪತಿ.

ದಬ್ಬಾಳಿಕೆ ಮಾಡ್ತಿದ್ದಾರೆ: ಇದು ಡೀಮ್ಡ್ ಫಾರೆಸ್ಟ್ ಅಂತ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಸರ್ಕಾರ ಆದೇಶವನ್ನೇ ಹೊರಡಿಸಿಲ್ಲ. ಲಂಚ ಕೊಟ್ಟವರನ್ನು ಬಿಟ್ಟು ಕೊಡದವರ ಮೇಲೆ ಅರಣ್ಯದ ಹೆಸರಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಎಲ್ಲರ ಜಮೀನು ಬಿಡಿಸಲಿ, ನಾವೂ ಬಿಡುತ್ತೇವೆ. ಆದರೆ ಯಾರ ಬಳಿಯೂ ಹೋಗಲ್ಲ. ನಮ್ಮ ಬಳಿ ಬಂದು ಜಮೀನು ಬಿಡಿ, ಇಲ್ಲ ಹಣ ಕೊಡಿ ಎನ್ನುತ್ತಾರೆ ಅಂತಾ ವೃದ್ಧ ರಾಮೇಗೌಡ ದೂರಿದ್ದಾರೆ.

Last Updated :Jan 21, 2021, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.