ETV Bharat / state

ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಿದ ಡಿಕೆಶಿ: ಅಲ್ಲಿಯೂ ಟಿಕೆಟ್ ಬೇಡಿಕೆ ಇಟ್ಟ ಆಕಾಂಕ್ಷಿಗಳು! ಪಕ್ಷದ ತೀರ್ಮಾನವೇ ಅಂತಿಮ ಎಂದ ಶಿವಕುಮಾರ್​

author img

By

Published : Apr 10, 2023, 6:53 PM IST

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್

ಇಂದು ಡಿ ಕೆ ಶಿವಕುಮಾರ್ ಅವರು ಶೃಂಗೇರಿಯ ಶಾರದಾಂಬೆಯ ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ತಮ್ಮಯ್ಯಗೆ ಟಿಕೆಟ್​ ನೀಡುವಂತೆ ಬೆಂಬಲಿಗರು ಮನವಿ ಮಾಡಿದರು.

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್

ಚಿಕ್ಕಮಗಳೂರು : ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಡಿ ಕೆ ಶಿವಕುಮಾರ್ ಅವರು ದೇವರ ದರ್ಶನಕ್ಕೆ ಹೋಗುವ ವೇಳೆ ಟಿಕೆಟ್ ಆಕಾಂಕ್ಷಿಗಳು ಅವರಿಗೆ ಅಡ್ಡ ಹಾಕಿ ಟಿಕೆಟ್ ಕೇಳಿರುವ ಘಟನೆ ನಡೆದಿದೆ. ಶೃಂಗೇರಿಯಲ್ಲಿ ಡಿ ಕೆ ಶಿವಕುಮಾರ್​ಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ತಮ್ಮಯ್ಯಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ.

ಹೆಚ್ ಡಿ ತಮ್ಮಯ್ಯ ಬಲ ಪ್ರದರ್ಶನ: ಟಿಕೆಟ್ ನೀಡಿದರೆ ಗೆಲ್ಲಿಸ್ತೀವಿ ಎಂದು ತಮ್ಮಯ್ಯ ಬೆಂಬಲಿಗರು ಡಿ ಕೆ ಶಿವಕುಮಾರ್​ಗೆ ಮನವಿ ಮಾಡಿದ್ದಾರೆ. ಸಿಟಿ ರವಿ ಬೆಂಬಲಿಗರಾಗಿದ್ದ ತಮ್ಮಯ್ಯ ಇತ್ತೀಚೆಗಷ್ಟೇ ಕಾಂಗ್ರೆಸ್​ ಪಕ್ಷವನ್ನು ಸೇರಿದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮೂಲ ವರ್ಸಸ್ ವಲಸಿಗ ಎಂಬ ವಿವಾದದ ಹಿನ್ನೆಲೆಯಲ್ಲಿ ಟಿಕೆಟ್ ನೀಡಿಕೆ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟಿದೆ. ಹೀಗಾಗಿ ಇದುವರೆಗೂ ಈ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಘೋಷಣೆ ಆಗಿಲ್ಲ. ಈ ನಡುವೆ ಶಾರದಾಂಬೆಯ ದರ್ಶನ ಪಡೆದು ವಾಪಸ್​ ಬರ್ತಿದ್ದಂತೆ ಮತ್ತೆ ಹೆಚ್ ಡಿ ತಮ್ಮಯ್ಯ ಬಲ ಪ್ರದರ್ಶನ ಮಾಡಿದ್ದಾರೆ.

ದೇವರ ದರ್ಶನದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ನಾನು ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕಿಂತ ಮುಂಚೆ ದೇವರ ದರ್ಶನಕ್ಕೆಂದು ಇಲ್ಲಿಗೆ ಭೇಟಿ ನೀಡಿದ್ದೇನೆ. ಇಂದಿರಾಗಾಂಧಿ ಅವರಿಗೆ ಆಶೀರ್ವಾದ ನೀಡಿದಂತ ಪೀಠ ಇದು. ನಾನು ಇಲ್ಲಿ ಶಾರದಾಂಬೆ ಪ್ರಾರ್ಥನೆ ಮಾಡಿ ದೇವರ ಆಶೀರ್ವಾದ ಪಡೆಯಬೇಕು ಎಂದು ಬಂದಿದ್ದೇನೆ. ಅಷ್ಟು ಬಿಟ್ರೆ ಇಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದರು.

ಪಕ್ಷ ಏನು ಹೇಳುತ್ತೆ ಅದನ್ನ ನಾವು ಕೇಳಬೇಕು: ಕಾಂಗ್ರೆಸ್ ಸಿಎಂ ಗಾದಿಗೆ ಡಿಕೆಶಿ, ಸಿದ್ದರಾಮಯ್ಯ ನಡುವೆ ಖರ್ಗೆ ಹೆಸರು ವಿಚಾರ ಪ್ರಸ್ತಾಪ ಆಗಿರುವ ಬಗ್ಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು, ಎಐಸಿಸಿ ನಾಯಕರು. ಖರ್ಗೆಯವರು ಕೇಳಿಲ್ಲ ಅವರು ಹಿರಿಯ ನಾಯಕರು. ಕೆಲವು ಕೂಗು ಇದೆ. ಅನ್ಯಾಯ ಆಗಿದೆ ಅನ್ನೋ ಕೂಗಿದೆ. ಪಕ್ಷ ಏನು ಹೇಳುತ್ತೆ ಅದನ್ನ ನಾವು ಕೇಳಬೇಕು. ನಾನು ಪಕ್ಷಕ್ಕೇ ಈ ವಿಚಾರ ಬಿಡ್ತೀನಿ. ಖರ್ಗೆ ಸಾಹೆಬ್ರು ಮೇಲೆ ಕುಳಿತಿರುವವರು. ಸಿದ್ದರಾಮಯ್ಯ ಅವರೂ ಸಹ ಪಕ್ಷ ಹೇಳಿದ ಹಾಗೆ ಕೇಳ್ತಾರೆ. ಬೇರೆಯವರು ಸಹ ಪಕ್ಷ ಹೇಳಿದಂತೆ ಕೇಳ್ತಾರೆ. ಈಗ ನಮ್ಮ ಮುಂದಿರುವ ವಿಚಾರ ಎಂದರೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಆಗಿದೆ. ಈ ವಿಚಾರವೇ ಈಗ ನಮಗೆಲ್ಲ ಇಂಪಾರ್ಟೆಂಟ್​ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಬಿಜೆಪಿ ಆ ದೊಡ್ಡ ನಿರ್ಧಾರಕ್ಕೆ ನಾನು ಸ್ವಾಗತ ಮಾಡ್ತೇನೆ: ಕನಕಪುರದಲ್ಲಿ ಡಿಕೆಶಿ ವಿರುದ್ಧ ಆರ್ ಅಶೋಕ್ ಸ್ಪರ್ಧೆಯ ಚರ್ಚೆಯ ವಿಚಾರದ ಬಗ್ಗೆಯೂ ಮಾತನಾಡಿದ ಡಿಕೆಶಿ, ಬಹಳ ಸಂತೋಷ. ಯಾರು ಬೇಕಾದ್ರೂ ನಮ್ಮ ಕ್ಷೇತ್ರಕ್ಕೆ ಬಂದು ನಿಲ್ಲಬಹುದು, ಅದಕ್ಕೆ ನಾವು ಸ್ವಾಗತ ಮಾಡ್ತೇನೆ. ಹೋರಾಟ ಮಾಡೋಣ. ಜನ ತೀರ್ಮಾನ ಮಾಡ್ತಾರೆ. ನನ್ನದೇನೂ ಅಭ್ಯಂತರ ಇಲ್ಲ. ಅವರು ಬಂದು ನಿಲ್ಲಲಿ. ಬೇರೆಯವನ್ನಾದರೂ ನಿಲ್ಲಿಸಲಿ. ರಾಜಕಾರಣದಲ್ಲಿ ಎದುರಿಸಲೇಬೇಕು, ಹೋರಾಟ ಮಾಡ್ಲೇ ಬೇಕು. ಬಿಜೆಪಿ ಆ ದೊಡ್ಡ ನಿರ್ಧಾರಕ್ಕೆ ನಾನು ಸ್ವಾಗತ ಮಾಡ್ತೇನೆ ಎಂದು ಶೃಂಗೇರಿ ಶಾರದಾ ಪೀಠದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದರು.

ಇದನ್ನೂ ಓದಿ : ರಾಜ್​​ಕುಮಾರ್​ ಕುಟುಂಬಕ್ಕೆ ನೀಡಿದ ಮಾತನ್ನು ಮರೆತು ಬಿಟ್ರಾ ಮುಖ್ಯಮಂತ್ರಿಗಳೇ: ಡಿಕೆಶಿ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.