ETV Bharat / state

ಚಿಕ್ಕಬಳ್ಳಾಪುರದಲ್ಲಿ ನಿರಂತರ ಮಳೆ: ಉಕ್ಕಿ ಹರಿಯುತ್ತಿರುವ ಹಳ್ಳಕೊಳ್ಳ - ಸಂಪರ್ಕ ಕಡಿತ!

author img

By

Published : Oct 13, 2021, 3:15 PM IST

ನಿರಂತರ ಮಳೆಗೆ ಜಿಲ್ಲಾದ್ಯಂತ ಕೆರೆ - ಕುಂಟೆ, ನದಿಗಳು ಉಕ್ಕಿ ಹರಿಯುತ್ತಿದೆ. ಹಲವು ಗ್ರಾಮಗಳಲ್ಲಿ ಜಲದಿಗ್ಬಂಧನವಾಗಿದೆ. ಸಂಪರ್ಕ ಕಡಿತಗೊಂಡಿದೆ. ಬೆಳೆಗಳಿಗೆ ಹಾನಿಯಾಗಿದೆ.

heavy rain in chikkaballapura from past few day
ಚಿಕ್ಕಬಳ್ಳಾಪುದಲ್ಲಿ ನಿರಂತರ ಮಳೆ

ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಜಿಲ್ಲಾದ್ಯಂತ ಕೆರೆ - ಕುಂಟೆ, ನದಿಗಳು ಉಕ್ಕಿ ಹರಿಯುತ್ತಿದೆ. ಹಲವು ಗ್ರಾಮಗಳಲ್ಲಿ ಜಲದಿಗ್ಬಂಧನವಾಗಿ, ಗ್ರಾಮಸ್ಥರಿಗೆ ದಿಕ್ಕು ತೋಚದಂತಾಗಿದೆ.

ನಿರಂತರ ಮಳೆ: ಉಕ್ಕಿ ಹರಿಯುತ್ತಿರುವ ಹಳ್ಳಕೊಳ್ಳ-ಸಂಪರ್ಕ ಕಡಿತ!

ಜಿಲ್ಲಾದ್ಯಂತ ರಾತ್ರಿ ಸುರಿದ ಭಾರಿ ಮಳೆ ಹಿನ್ನೆಲೆ ಕೆರೆ ಕಟ್ಟೆ ಹೊಡೆದ ಪರಿಣಾಮ ಡಾಂಬರ್​​ ರಸ್ತೆ ಸೇರಿದಂತೆ ರೈತರ ಬೆಳೆಗಳಿಗೆ ಹಾನಿಯಾಗಿದೆ. ಹಲವೆಡೆ ಅಧಿಕ ನೀರಿನ ಹರಿವಿನಿಂದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಜಿಲ್ಲೆಯ ಪಾಪದಿಮ್ಮನಹಳ್ಳಿ‌ ಗ್ರಾಮದ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಗ್ರಾಮದ ಜನರಿಗೆ ಜಲದಿಗ್ಬಂಧನವಾಗಿದೆ. ಗ್ರಾಮದಿಂದ ಹೊರಗೆ ಅಥವಾ ಒಳಗೆ ಹೋಗುವ ಅವಕಾಶವೇ ಇಲ್ಲದಂತಾಗಿದೆ. ಈಗಾಗಲೇ ಎಲ್ಲೋ ಅಲರ್ಟ್ ಘೋಷಿಸಿದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಹಲವು ದಶಕಗಳ ನಂತರ ಉಕ್ಕಿ ಹರಿದ ಪಾಪಾಗ್ನಿ ನದಿ:

ಇನ್ನು ಜಿಲ್ಲೆಯಲ್ಲಿ ನದಿಗಳ ಪುರಾವೆಗಳೇ ಇಲ್ಲದಂತಾಗಿತ್ತು. ಆದರೆ, ನಿರಂತರ ಮಳೆ ಹಿನ್ನೆಲೆ, ಹಲವು ದಶಕಗಳ ನಂತರ ಪಾಪಾಗ್ನಿ ನದಿ ಹರಿಯುತ್ತಿದೆ. ಸ್ಥಳೀಯರಿಗೆ ಸಂತಸವಾಗಿದ್ದು, ನದಿಯನ್ನು ನೋಡಲು ತಂಡೋಪತಂಡಗಳಾಗಿ ಆಗಮಿಸುತ್ತಿದ್ದಾರೆ.

ಸಂಪರ್ಕ ಕಡಿತ:

ನಂದಿ ಬೆಟ್ಟದಲ್ಲಿ ಉಗಮವಾಗುವ ಪಾಪಾಗ್ನಿ ನದಿ ಶಿಡ್ಲಘಟ್ಟ, ಬಾಗೇಪಲ್ಲಿ, ಚೇಳೂರು ಮಾರ್ಗವಾಗಿ ಹರಿದು ಆಂಧ್ರಪ್ರದೇಶದ ಕಂದಕೂರು ಮೂಲಕ ದಕ್ಷಿಣಾಭಿಮುಖವಾಗಿ ಹರಿದು ಯಾಸರಾಯನ ಜಲಶಾಯಕ್ಕೆ ಸೇರಿಕೊಳ್ಳುತ್ತದೆ. ಪಾಪಾಗ್ನಿಗೆ ಬೆಳ್ಳಂಬೆಳ್ಳಗೆ ಮಹಿಳೆಯರಿಂದ ಪೂಜೆ ಪುನಸ್ಕಾರ ನಡೆದಿದೆ. ಆದರೆ ನದಿಯ ಹರಿವಿನಿಂದ ಕೆಲವು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದವರ ಮನವೊಲಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ

ಅಧಿಕ ಮಳೆಯಿಂದ ಜಿಲ್ಲೆಯಲ್ಲಿ ಫಸಲಿಗೆ ಬಂದಿದ್ದ ಜೋಳ, ಭತ್ತ, ರಾಗಿ, ಅವರೆ ಬೆಳೆಗಳು ಕೊಚ್ಚಿ ಹೋಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ಶಿಡ್ಲಘಟ್ಟ ತಾಲೂಕಿನ ದಿಂಬಾರ್ಲಹಳ್ಳಿ ಸೇತುವೆ ಹೊಡೆದು ಬೆಳೆಗೆ ಮಳೆ ನೀರು ನುಗ್ಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.