ETV Bharat / state

ಶುಭ ಕಾರ್ಯಕ್ಕೆ ಬಂದವರು ರಸ್ತೆ ಅಪಘಾತಕ್ಕೆ ಬಲಿಯಾದ್ರು

author img

By

Published : Aug 4, 2019, 10:40 PM IST

ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯವನ್ನು ಮುಗಿಸಿಕೊಂಡು ಹಿಂದಿರುಗುವ ವೇಳೆ ಆರ್ ಚೊಕ್ಕನಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕ್ರೂಸರ್​ ವಾಹನ ಹಾಗೂ ದ್ವಿಚಕ್ರವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್​ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

bike-accident-in-chikkaballapur

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಬಳಿಯ ಆರ್ ಚೊಕ್ಕನಹಳ್ಳಿ ಕ್ರಾಸ್ ಬಳಿ ಕ್ರೂಸರ್​​ ವಾಹನ ಹಾಗೂ ಬೈಕ್​ ನಡುವೆ ಬೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರು ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯವನ್ನು ಮುಗಿಸಿಕೊಂಡು ಹಿಂದಿರುಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೆರೇಸಂದ್ರ-ಗುಡಿಬಂಡೆಯ ರಸ್ತೆ ತಿರುವಿನಲ್ಲಿ ಕ್ರೂಸರ್ ಕಾರು ಮತ್ತು ದ್ವಿ-ಚಕ್ರವಾಹನಗಳು ಅತಿ ವೇಗವಾಗಿ ಬಂದಿದ್ದು ಮುಖಾ-ಮುಖಿ ಡಿಕ್ಕಿಯಾದ ಪರಿಣಾಮ ಬೈಕ್​​ನಲ್ಲಿದ್ದರು ಇಬ್ಬರು ಸಾವನ್ನಪ್ಪಿದ್ದಾರೆ.

ಯಲಹಂಕದ ಪುರುಷೋತ್ತಮ (30) ಮತ್ತು ಆತನ ಸ್ನೇಹಿತ(ಹೆಸರು ತಿಳಿದುಬಂದಿಲ್ಲ) ಎಂದು ಗುಡಿಬಂಡೆ ಪೊಲೀಸರು ತಿಳಿಸಿದ್ದಾರೆ.

Intro:ಕ್ಯೂಸರ್ ವಾಹನ ಹಾಗೂ ದ್ವಿಚಕ್ರವಾಹನದ ನಡುವೆ ಅಪಘಾತ ಸಂಭವಿಸಿದ್ದು,ದ್ವಿಚಕ್ರ ವಾಹನದ ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಗುಡಿಬಂಡೆ ಬಳಿಯ ಆರ್ ಚೊಕ್ಕನಹಳ್ಳಿ ಕ್ರಾಸ್ ಬಳಿ ನಡೆದಿದೆ.Body:ಯಲಹಂಕದ ಪುರುಷೋತ್ತಮ (30) ಮತ್ತು ಆತನ ಸ್ನೇಹಿತನೊಬ್ಬ (ಹೆಸರು ತಿಳಿದುಬಂದಿಲ್ಲ) ಸ್ಥಳದಲ್ಲೇ ಮೃತಪಟ್ಟಿರಯವುದಾಗಿ ತಿಳಿದು ಬಂದಿದೆ.

ಪೆರೇಸಂದ್ರ-ಗುಡಿಬಂಡೆಯ ರಸ್ತೆ ತಿರುವಿನಲ್ಲಿ ಕಾರು ಮತ್ತು ದ್ವಿ ಚಕ್ರವಾಹನಗಳು ಅತಿ ವೇಗವಾಗಿ ಬಂದಿದ್ದು ಮುಖಾ-ಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇನ್ಬರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತರು ಗುಡಿಬಂಡೆ ತಾಲ್ಲೂಕಿನ ಮ್ಯಾಕಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಕೆ.ಎ-50, ಎಸ್-5763 ದ್ವಿ ಚಕ್ರವಾಹನದಲ್ಲಿ ಬರುತ್ತಿದ್ದಾಗ ಮತ್ತು ಗುಡಿಬಂಡೆ ಭಾಗದಿಂದ ಬರುತ್ತಿದ್ದ ಕೆ.ಎ-46, 1378 ಕ್ಯೂಸರ್ ಕಾರು ನಡುವೆ ಅಪಘಾತ ಸಂಭವಿಸಿದೆಂದು ಗುಡಿಬಂಡೆ ಪೊಲೀಸರು ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.