ETV Bharat / state

ಮಾಸ್ಕ್ ಹಾಕದ ಚಾಮರಾಜನಗರ ಎಎಸ್ಐಗೆ ತಮಿಳುನಾಡು ಲಾರಿ ಚಾಲಕನಿಂದ ಕ್ಲಾಸ್

author img

By

Published : Jul 10, 2021, 11:43 PM IST

ಮಾಸ್ಕ್ ಹಾಕದ ಚಾಮರಾಜನಗರ ಎಎಸ್ಐಗೆ ತಮಿಳುನಾಡು ಲಾರಿ ಚಾಲಕನಿಂದ ಕ್ಲಾಸ್
ಮಾಸ್ಕ್ ಹಾಕದ ಚಾಮರಾಜನಗರ ಎಎಸ್ಐಗೆ ತಮಿಳುನಾಡು ಲಾರಿ ಚಾಲಕನಿಂದ ಕ್ಲಾಸ್

ಮಾಸ್ಕ್ ಧರಿಸದೇ ವಾಹನ ದಾಖಲಾತಿಗಳನ್ನು ಪರೀಶಿಲನೆ ನಡೆಸುತ್ತಿದ್ದ ವೇಳೆ ಲಾರಿ ಚಾಲಕನೋರ್ವ ನೀವೆ ಮಾಸ್ಕ್ ಹಾಕದಿದ್ದರೇ ಹೇಗೆ.., ಬುದ್ಧಿ ಹೇಳಬೇಕಾದವರು ನೀವು, ಬೇರೆಯವರಿಗೆ ದಂಡ ವಿಧಿಸುತ್ತೀರಿ ಎಂದು ಪೊಲೀಸ್​ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾನೆ.

ಚಾಮರಾಜನಗರ: ಮಾಸ್ಕ್ ಹಾಕದೇ ವಾಹನ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದ ಎಎಸ್ಐ ಒಬ್ಬರಿಗೆ ಲಾರಿ ಚಾಲಕನೋರ್ವ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಾಮರಾಜನಗರ-ತಮಿಳುನಾಡು ಗಡಿಯಾದ ಪುಣಜನೂರು ಸಮೀಪ ಇಂದು ಸಂಜೆ ನಡೆದಿದೆ.

ಚಾಮರಾಜನಗರ ಪೂರ್ವ ಠಾಣೆ ಎಎಸ್ಐ ಚಂದ್ರಶೇಖರಮೂರ್ತಿ ಎಂಬುವರು ಮಾಸ್ಕ್ ಧರಿಸದೇ ವಾಹನ ದಾಖಲಾತಿಗಳನ್ನು ಪರೀಶಿಲನೆ ನಡೆಸುತ್ತಿದ್ದ ವೇಳೆ ಲಾರಿ ಚಾಲಕನೋರ್ವ ನೀವೆ ಮಾಸ್ಕ್ ಹಾಕದಿದ್ದರೇ ಹೇಗೆ.., ಬುದ್ಧಿ ಹೇಳಬೇಕಾದವರು ನೀವು, ಬೇರೆಯವರಿಗೆ ದಂಡ ವಿಧಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡ ಬಳಿಕ ಜೇಬಿನಲ್ಲಿದ್ದ ಮಾಸ್ಕ್ ನ್ನು ಎಎಸ್ಐ ಮುಖಕ್ಕೇರಿಸಿಕೊಂಡಿದ್ದಾರೆ.

ಮಾಸ್ಕ್ ಹಾಕದ ಚಾಮರಾಜನಗರ ಎಎಸ್ಐಗೆ ತಮಿಳುನಾಡು ಲಾರಿ ಚಾಲಕನಿಂದ ಕ್ಲಾಸ್

ಮಾಸ್ಕ್ ಹಾಕದೇ ದಾಖಲಾತಿ ಪರಿಶೀಲಿಸುತ್ತಿದ್ದನ್ನು ಚಾಲಕ ಗುಪ್ತವಾಗಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವಾಹನ ಸವಾರರು ಹಾಗೂ ಪೊಲೀಸರಿಗೆ ಯಾವಾಗಲೂ ಎಣ್ಣೆ-ಸೀಗೆಕಾಯಿ ಸಂಬಂಧ, ಈ‌ ಕೊರೊನಾ ಸಮಯದಲ್ಲಂತೂ ಇದು ಇನ್ನು ಹೆಚ್ಚಾಗಿದ್ದು ಪೊಲೀಸರು ಮಾಡುವ ತಪ್ಪುಗಳು ಜಗಜ್ಜಾಹಿರಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.