ETV Bharat / state

ಹೊಸ ಸಿಎಂ‌ ಬಂದ್ರೆ 6-7 ತಿಂಗಳು ವೇಸ್ಟ್, ಯಡಿಯೂರಪ್ಪ ಅವ್ರೇ ಬೆಸ್ಟ್: ಶಾಸಕ ಮಹೇಶ್

author img

By

Published : Jul 22, 2021, 12:37 PM IST

ಯಡಿಯೂರಪ್ಪ ಅವರನ್ನು ಬದಲಿಸಿ ಬೇರೆಯವರನ್ನು ತಂದು ಕೂರಿಸಿದರೆ ಆಡಳಿತ, ಕ್ಷೇತ್ರಗಳ‌ ಪರಿಚಯ ಪಡೆದುಕೊಳ್ಳಲು 6-7 ತಿಂಗಳು ಬೇಕಾಗಲಿದೆ. ಉಳಿದ ಕೇವಲ ಎರಡು ವರ್ಷದಲ್ಲಿ ಈ 6-7 ತಿಂಗಳು ವೇಸ್ಟ್ ಆಗಲಿದೆ. ಹಾಗಾಗಿ ಯಡಿಯೂರಪ್ಪ ಅವ್ರೇ ಸಿಎಂ ಆಗಿ ಮುಂದುವರೆಯುವುದು ಸೂಕ್ತ ಎಂದು ಶಾಸಕ ಎನ್. ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

mla n mahesh
ಶಾಸಕ ಮಹೇಶ್

ಚಾಮರಾಜನಗರ:‌ ಬಿ.ಎಸ್.​​ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಬೇಕು, ಅವರ ಬದಲಾವಣೆ ಸರಿಯಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಎಸ್​​ವೈ ಪರ ಬ್ಯಾಟಿಂಗ್​​ ಮಾಡಿದ್ದಾರೆ.

ಶಾಸಕ ಮಹೇಶ್

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅನುಭವಿ ರಾಜಕಾರಣಿಯಾಗಿರುವ ಯಡಿಯೂರಪ್ಪ ಅವರನ್ನು ಬದಲಿಸಿ ಬೇರೆಯವರನ್ನು ತಂದು ಕೂರಿಸಿದರೆ ಆಡಳಿತದ, ಕ್ಷೇತ್ರಗಳ‌ ಪರಿಚಯ ಪಡೆದುಕೊಳ್ಳಲು 6-7 ತಿಂಗಳು ಬೇಕಾಗಲಿದೆ. ಉಳಿದ ಕೇವಲ ಎರಡು ವರ್ಷದಲ್ಲಿ ಈ 6-7 ತಿಂಗಳು ವೇಸ್ಟ್ ಆಗಲಿದೆ. ಅನುಭವಿ ಯಡಿಯೂರಪ್ಪ ಅವರೇ ಮುಂದುವರಿದರೆ‌‌‌‌‌‌ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜೀನಾಮೆ ಸುಳಿವು ನೀಡಿದ್ರಾ ಬಿಎಸ್​​ವೈ..? ಜು26ರ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯ ಎಂದ ಸಿಎಂ

ಕೊರೊನಾ, ಪ್ರವಾಹವನ್ನು ಸಮರ್ಥವಾಗಿ ಎದುರಿಸಿದ್ದಾರೆ. ‌ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು. ಒಂದು ವೇಳೆ ಬದಲಾವಣೆಯಾದರೆ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.