ETV Bharat / state

ಚಾಮರಾಜನಗರ: ಇಂದಿರಾ ಕ್ಯಾಂಟೀನ್, ಕಲ್ಯಾಣ ಮಂಟಪ, ದೇಗುಲವೂ ಜಲಾವೃತ

author img

By

Published : Sep 5, 2022, 1:38 PM IST

Updated : Sep 5, 2022, 3:48 PM IST

Heavy rain in Chamarajanagara
ಇಂದಿರಾ ಕ್ಯಾಂಟೀನ್​ಗೆ ನುಗ್ಗಿದ ನೀರು

ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಭಾರಿ ಮಳೆ ಸುರಿದಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಚಾಮರಾಜನಗರ: ಒಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಚಾಮರಾಜನಗರದ ಸ್ಥಿತಿ ಅಯೋಮಯವಾಗಿದೆ. ಎಲ್ಲಿ ನೋಡಿದರೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜಿಲ್ಲಾ ಕೇಂದ್ರವೂ ಸೇರಿದಂತೆ ಚಾಮರಾಜನಗರ ತಾಲೂಕು ಮಳೆಗೆ ತತ್ತರಿಸಿದೆ. ಬಿ‌.ರಾಚಯ್ಯ ಜೋಡಿರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್​​ಗೆ ನೀರು ನುಗ್ಗಿದ್ದು ನಾಲ್ಕಡಿ ನೀರು ನಿಂತಿದೆ. ಇಂದಿರಾ ಕ್ಯಾಂಟೀನ್​ಗೆ ಯಾರೂ ಕಾಲಿಡಲು ಸಾಧ್ಯವಿಲ್ಲ.

Heavy rain in Chamarajanagara
ದೇಗುಲಕ್ಕೆ ನುಗ್ಗಿದ ನೀರು

ನಗರದ ಸತ್ಯಮಂಗಲಂ ರಸ್ತೆಯಲ್ಲಿ‌ರುವ ಕಲ್ಯಾಣ ಮಂಟಪವೊಂದಕ್ಕೆ ನದಿಯಂತೆ ನೀರು ಹರಿದಿದ್ದು ಮದುವೆ ಮನೆ ನೀರಿನ ಮನೆಯಾಗಿ ಬದಲಾಗಿದೆ. ಅಡುಗೆ ಕೋಣೆಯಲ್ಲಿದ್ದ ತರಕಾರಿಗಳು ತೇಲುತ್ತಿವೆ. ಮೊಣಕಾಲುದ್ದ ನೀರಿನಲ್ಲಿ ಬಾಣಸಿಗರು ಅಸಹಾಯಕರಾಗಿ ನಿಂತಿದ್ದು ಕಂಡುಬಂತು. ಇಲ್ಲಿ ಅಟ್ಟಗುಳಿಪುರ ಗ್ರಾಮದವರ ಮದುವೆಗೆ ಸಿದ್ಧತೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಭಾರಿ ಮಳೆ

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ದಿವ್ಯಲಿಂಗೇಶ್ವರ ದೇವಾಲಯಕ್ಕೂ ನೀರು ನುಗ್ಗಿದೆ. ರಾಮಸಮುದ್ರದ ಸಮೀಪ ಇರುವ ಹರಳುಕೋಟೆ ದೇವಾಲಯದ ಆವರಣ, ರಸ್ತೆಗೂ ನೀರು ಸೇರಿಕೊಂಡು ಭಕ್ತರನ್ನು ಕಂಗೆಡಿಸಿದೆ.

Heavy rain in Chamarajanagara
ಇಂದಿರಾ ಕ್ಯಾಂಟೀನ್​ಗೆ ನುಗ್ಗಿದ ನೀರು

ಹನೂರು ತಾಲೂಕಿನ ಲೋಕ್ಕನಹಳ್ಳಿ ಮಾರ್ಗ ಮಧ್ಯೆ ಸಿಗುವ ತಟ್ಟೆಹಳ್ಳಕ್ಕೆ ಸೇತುವೆ ನಿರ್ಮಾಣ ಹಂತದಲ್ಲಿದ್ದು, ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಕಾಳನಹುಂಡಿ ಸಂಪರ್ಕಿಸುವ ರಸ್ತೆಯೂ ನೀರಿನ ರಭಸಕ್ಕೆ ಕೊರೆದುಕೊಂಡು ಹೋಗಿ ಹಾಳಾಗಿದೆ. ಪರಿಣಾಮ, 3-4 ಗ್ರಾಮಗಳಿಗೆ ರಸ್ತೆ ಸಂಪರ್ಕವಿಲ್ಲದಂತೆ ಆಗಿದೆ.

ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ಸಾಲು ಸಾಲು ಅವಾಂತರ.. ಬೆಂಗಳೂರಲ್ಲಿ ಅಪಾರ್ಟ್​ಮೆಂಟ್​ಗಳು ಜಲಾವೃತ

Last Updated :Sep 5, 2022, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.