ETV Bharat / state

ಚಾಮರಾಜನಗರದ ಕಾಡಿನ ಅಂದಕ್ಕೆ ಮನಸೋತಿದ್ದ ಕತ್ತಿ.. ಆನೆಗಳಿಗೆ ಬೆಲ್ಲ ತಿನ್ನಿಸಿದ್ದ ಸಚಿವ

author img

By

Published : Sep 7, 2022, 4:01 PM IST

ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿಯವರು ಚಾಮರಾಜನಗರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಇಲ್ಲಿನ ಕಾಡುಗಳಲ್ಲಿ ಸಫಾರಿ ನಡೆಸಿ ಕಾಡಿನ ಸೌಂದರ್ಯ ಸವಿದಿದ್ದರು. ಅಲ್ಲದೇ ಇಲ್ಲಿನ ಆನೆಗಳಿಗೆ ತಮ್ಮ ಕೈಯಾರೆ ಕಾಯಿ ಬೆಲ್ಲ ತಿನ್ನಿಸಿದ್ದರು.

forest-minister-umesh-katthi-visited-chamarajanagara-reserved-forest
ಚಾಮರಾಜನಗರದ ಕಾಡಿನ ಅಂದಕ್ಕೆ ಮನಸೋತಿದ್ದ ಕತ್ತಿ.. ಆನೆಗಳಿಗೆ ಬೆಲ್ಲ ತಿನ್ನಿಸಿದ್ದ ಸಚಿವ

ಚಾಮರಾಜನಗರ : ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಜೊತೆಗೆ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಮೇಶ್ ಕತ್ತಿ ನಿಧನ ಹೊಂದಿದ್ದಾರೆ. ಅರಣ್ಯ ಸಚಿವರಾಗಿದ್ದಾಗ ಕತ್ತಿಯವರು ಚಾಮರಾಜನಗರ ಜಿಲ್ಲೆಯ ಕಾಡಿನ ಸೌಂದರ್ಯಕ್ಕೆ ಮನಸೋತಿದ್ದರು. ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಮತ್ತು ಎರಡು ವನ್ಯಜೀವಿಧಾಮಗಳಿದ್ದು, ಇವೆಲ್ಲದಕ್ಕೂ ಸಚಿವರು ಭೇಟಿ ನೀಡಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಫಾರಿ ನಡೆಸಲು ಜೀಪ್ ಏರುತ್ತಿದ್ದ ಉಮೇಶ್ ಕತ್ತಿ ' ಕಾಡು ಬಹಳ ಚೆಂದ ಇದೆ, ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಆದಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರು. ಕಾಡು ಸುತ್ತಿದ ಬಳಿಕ ತಾವು ಕಂಡ ಪ್ರಾಣಿಗಳ ಬಗ್ಗೆ ಮಾತನಾಡಿ ಸಂತಸ ಪಡುತ್ತಿದ್ದರು.

ಚಾಮರಾಜನಗರದ ಕಾಡಿನ ಅಂದಕ್ಕೆ ಮನಸೋತಿದ್ದ ಕತ್ತಿ.. ಆನೆಗಳಿಗೆ ಬೆಲ್ಲ ತಿನ್ನಿಸಿದ್ದ ಸಚಿವ

ಆನೆಗಳಿಗೆ ಕಾಯಿ ಬೆಲ್ಲ ತಿನ್ನಿಸಿದ್ದ ಸಚಿವ: ಎರಡು ಮೂರು ತಿಂಗಳ ಹಿಂದೆಯಷ್ಟೇ ಬಂಡೀಪುರ ಸಮೀಪದ ಗಿರಿಜನ ಪೋಡುಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭ ರಾಂಪುರದ ಆನೆ ಶಿಬಿರಕ್ಕೆ ತೆರಳಿದ್ದ ಉಮೇಶ್ ಕತ್ತಿ ಅಲ್ಲಿನ ಎಲ್ಲ ಆನೆಗಳಿಗೆ ತಮ್ಮ ಕೈಯಾರೆ ಕಾಯಿ - ಬೆಲ್ಲ ತಿನಿಸಿದ್ದರು. ಆನೆಗಳು ಮಾಡುವ ಕಸರತ್ತುಗಳು, ಸಲಾಂ ಮಾಡುತ್ತಿರುವುದನ್ನು ಕಂಡು ಖುಷಿಗೊಂಡಿದ್ದರು.

ಜೊತೆಗೆ, ಮತ್ತೊಂದು ಆನೆ ಶಿಬಿರ ಮಾಡುವ ಅರಣ್ಯ ಇಲಾಖೆ ಪ್ರಸ್ತಾಪಕ್ಕೂ ಧನಾತ್ಮಕವಾಗಿ ಸ್ಪಂದಿಸಿದ್ದರು. ಅಲ್ಲದೇ ಬಿಳಿಗಿರಿರಂಗನ ಬೆಟ್ಟ, ಮೇಕೆದಾಟು, ಗೋಪಿನಾಥಂ, ಹೊಗೆನಕಲ್ ಹೀಗೆ ಚಾಮರಾಜನಗರದ ಎಲ್ಲ ಅರಣ್ಯ ಪ್ರದೇಶಗಳಿಗೆ ಅರಣ್ಯ ಸಚಿವರಾಗಿ ಭೇಟಿ ನೀಡಿದ್ದರು.

ತಡವಾಗಿ ಕರೆತಂದಿರಿ : ಕಳೆದ ತಿಂಗಳು ಮೇಕೆದಾಟು, ಮಲೆಮಹದೇಶ್ವರ ಬೆಟ್ಟಕ್ಕೆ ಉಮೇಶ್ ಕತ್ತಿ ಭೇಟಿ ನೀಡಿದ್ದಾಗ, ಇಷ್ಟು ಅದ್ಭುತವಾದ ಪ್ರದೇಶಕ್ಕೆ ತನ್ನನ್ನು ತಡವಾಗಿ ಕರೆತಂದಿರಿ. ಎಷ್ಟೋ ವರ್ಷಗಳ ಮುಂಚಿತವಾಗಿ ನಾನು ಇಲ್ಲಿಗೆ ಭೇಟಿ ನೀಡಬೇಕಿತ್ತು ಎಂದು ಹೇಳಿದ್ದರು.

ಸಚಿವ ಉಮೇಶ್ ಕತ್ತಿ ನಿಧನವು ಕಾಡಿನ ರಕ್ಷಣೆಗೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಚಾಮರಾಜನಗರ ಅಭಿವೃದ್ಧಿಗೆ ತುಂಬಲಾರದ ನಷ್ಟ ಎಂದು ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಸಚಿವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : ಉಮೇಶ್ ಕತ್ತಿ ನಿಧನ.. ಮೈಸೂರು ದಸರಾ ಎರಡನೇ ಹಂತದ ಗಜಪಡೆಗೆ ಪೂಜೆ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.