ETV Bharat / state

ಚಾಮರಾಜನಗರದಲ್ಲಿ 539 ಸೋಂಕಿತರು ಪತ್ತೆ: 5 ಮಂದಿ ಬಲಿ

author img

By

Published : May 21, 2021, 8:38 AM IST

ಚಾಮರಾಜನಗರ ಜಿಲ್ಲೆಯಲ್ಲಿ ಗುರುವಾರ ಪತ್ತೆಯಾದ ಕೋವಿಡ್ ಸೋಂಕು ಪ್ರಕರಣಗಳ ಮಾಹಿತಿ ಇಲ್ಲಿದೆ.

chamarajanagar
ಚಾಮರಾಜನಗರದಲ್ಲಿ 539 ಸೋಂಕಿತರು ಪತ್ತೆ

ಚಾಮರಾಜನಗರ: ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣಗಳು ದಿಢೀರ್ ಏರಿಕೆ ಕಂಡಿದ್ದು, ಹೊಸದಾಗಿ 539 ಜನರಿಗೆ ಸೋಂಕು ತಗುಲಿದೆ.

ನಿನ್ನೆ 5 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 328ಕ್ಕೆ ಏರಿಕೆಯಾಗಿದೆ. 385 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 3,822 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 51 ಮಂದಿ ಐಸಿಯು, 2,228 ಜನರು ಹೋಮ್​ ಐಸೋಲೇಷನ್​ನಲ್ಲಿದ್ದಾರೆ.

7,007 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಎರಡು ಸಾವಿರಕ್ಕೂ ಹೆಚ್ಚು ಟೆಸ್ಟ್ ನಡೆಸುತ್ತಿದ್ದ ಆರೋಗ್ಯ ಇಲಾಖೆ ನಿನ್ನೆ ಕೇವಲ 1,500 ಮಂದಿಗಷ್ಟೇ ಪರೀಕ್ಷೆ ನಡೆಸಿದೆ.

ಓದಿ: ಬಿಸಿಯೂಟದ ಆಹಾರಧಾನ್ಯ ಅಸಮರ್ಪಕ ವಿತರಣೆ: ಗೋದಾಮಿನಲ್ಲೇ ಧಾನ್ಯಗಳು ಹಾಳಾಗುವ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.